Bullet Train Project: ಜಪಾನ್‌ನಿಂದ ಭಾರತಕ್ಕೆ 24 ಬುಲೆಟ್ ರೈಲು: ರಾಜ್ಯವಾರು ಯೋಜನೆ ಪ್ರಗತಿ? ಅಪ್ಡೇಟ್ ಇಲ್ಲಿದೆ

ನವದೆಹಲಿ, ಮಾರ್ಚ್ 08: ಭಾರತ ಸರ್ಕಾರವು ಸಾರಿಗೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ರೈಲುಗಳನ್ನು ಈಗಾಗಲೇ ಪರಿಯಿಸಲಾಗಿದ್ದು, ಇದೀಗ ಎರಡು ಡಜನ್ ಬುಲೆಟ್ (24) ರೈಲು ಖರೀದಿಸಲು ಮುಂದಾಗಿದೆ. ಇದರಿಂದ ಭವಿಷ್ಯದಲ್ಲಿ ಭಾರತದ ರೈಲು ಸಾರಿಗೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

ತಂತ್ರಜ್ಞಾನದಲ್ಲಿ ಮುಂದಿರುವ ಜಪಾನ್‌ ದೇಶದದಿಂದ ಭಾರತವು 24 ಇ5 ಸರಣಿಯ ಶಿಂಕನ್‌ಸೆನ್ ರೈಲುಗಳನ್ನು (ಬುಲೆಟ್ ರೈಲುಗಳು) ಖರೀದಿಸಲು ನಿರ್ಧರಿಸಿದೆ. ಇಂಥದ್ದೊಂದು ಬೃಹತ್ ವ್ಯವಹಾರಕ್ಕೆ ಒಪ್ಪಂದವನ್ನು ಇದೇ ಮಾರ್ಚ್ ಅಂತ್ಯಕ್ಕೆ ಏರ್ಪಡಲಿದೆ. ಎರಡು ದೇಶಗಳ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ವರದಿ ಆಗಿದೆ.

India Has Decided to 24 Bullet Train Buy From Japan Know State Wise Project Progress

ಬುಲೆಟ್ ರೈಲು ಖರೀದಿ ಮತ್ತೊಂದೆಡೆ ಮಾರ್ಗ ನಿರ್ಮಾಣದಲ್ಲಿನ ಚುರುಕು ಕೆಲಸ, ಪ್ರಗತಿ ಎಲ್ಲ ನೋಡಿದರೆ ಗುಜರಾತ್‌ನಲ್ಲಿ ಜೂನ್-ಜುಲೈ 2026 ರಲ್ಲಿ ಪ್ರಾರಂಭವಾಗುವ ಮೊದಲ ರೈಲು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 15 ರೊಳಗೆ ಬಿಡ್ ಕರೆಯುವ ಸಾಧ್ಯತೆ

ಬುಲೆಟ್ ರೈಲು ಉಸ್ತುವಾರಿಯಾದ ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಈ ವರ್ಷದ ಆಗಸ್ಟ್ 15 ರೊಳಗೆ ರೈಲುಗಳ ಖರೀದಿ ಮತ್ತು ಆಪರೇಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ಒಪ್ಪಂದಗಳನ್ನು ಬಿಡ್ ಮಾಡಬಹುದಾದ ಸಾಧ್ಯತೆಗಳು ಇವೆ.

India Has Decided to 24 Bullet Train Buy From Japan Know State Wise Project Progress

ಬುಲೆಟ್ ರೈಲು ವೇಗ ರೈಲು ಸೇವೆಯಾಗಿದೆ. ಉದಾಹರಣೆಗೆ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡಿದರೂ ಸಹಿತ ಇತರ ರೈಲುಗಳಿಗಿಂತಲೂ ಮುಂಚಿತವಾಗಿ ಗಮ್ಯಸ್ಥಳ ತಲುಪಲಿದೆ. ಇದರಿಂದ ಪ್ರಯಾಣಿರಕ ಸಮಯ ಉಳಿತಾಯವಾಗಲಿದೆ. ಉಹಾರಣೆಗೆ, ಅಹಮದಾಬಾದ್ ಮತ್ತು ಮುಂಬೈ ನಡುವಿನ 508 ಕಿಮೀ ದೂರವನ್ನು ಬುಲೆಟ್ ರೈಲು ಕಾರಿಡಾರ್ ನಲ್ಲಿ ಎಲ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಸಹಿತ ಕೇವಲ 2 ಎರಡು ಗಂಟೆಗಳಲ್ಲಿ ಕ್ರಮಿಸಲಿದೆ. ಬೇರೆ ರೈಲುಗಳು ಇದೇ ದೂರವನ್ನು ಸುಮಾರು 2 ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತವೆ ಎಂದು ಮೂಲಗಳು ಮಾಹಿತಿ ನೀಡಿವೆ.

ವಿವಿಧ ರಾಜ್ಯಗಳಲ್ಲಿ ಬುಲೆಟ್ ರೈಲ್ವೆ ಯೋಜನೆ ಪ್ರಗತಿ

ಅಹಮದಾಬಾದ್ ಮತ್ತು ಮುಂಬೈ ನಡುವಿನ ಯೋಜನೆಯು ಮುಂದಿನ ವರ್ಷ ಜನವರಿ ವೇಳೆಗೆ ಸುಮಾರು 40ರಷ್ಟು ವರೆಗೆ ಭೌತಿಕ ಪ್ರಗತಿ ಹೊಂದಲಿದೆ. ಇನ್ನೂ ಪೈಕಿ ಗುಜರಾತ್‌ನಲ್ಲಿ ಶೇಕಡಾ 48.3ರಷ್ಟು ಪ್ರಗತಿ ಹೆಚ್ಚಲಿದೆ. ಇದೇ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಸಾಧನೆ ಸುಮಾರು 22.5ರಷ್ಟು ಆಗಲಿದೆ.

ಯೋಜನೆ ಆರಂಭವಾದ ಬಳಿಕ ಕಳೆದ ಒಂದು ವರ್ಷದಲ್ಲಿ ಬುಲೆಟ್ ಟ್ರೈನ್ ಯೋಜನೆಯಲ್ಲಿ 100 ಕಿ.ಮೀ ಗಿಂತ ಹೆಚ್ಚು ವಯಡಕ್ಟ್ (ಎಲಿವೇಟೆಡ್ ಸ್ಟ್ರೆಚ್) ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕಳೆದ ಒಂದು ವರ್ಷದಲ್ಲಿ ಆರು ನದಿ ಸೇತುವೆಗಳ ನಿರ್ಮಾಣ ಕೆಲಸ ಮುಗಿಸಲಾಗಿದೆ. ಗುಜರಾತ್‌ನ 20 ಸೇತುವೆಗಳ ಪೈಕಿ ಏಳು ಸೇತುವೆಗಳ ನಿರ್ಮಿಸುವ ಕೆಲಸ ಪೂರ್ಣಗೊಂಡಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಯೋಜನೆಗೆ ವೇಗ ಸಿದಲಿದೆ

ಮಹಾರಾಷ್ಟ್ರದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಯೋಜನೆಯು ಮತ್ತಷ್ಟು ವೇಗ ಪಡೆದುಕೊಂಡಿದೆ. ಈ ತಿಂಗಳ ಅಂತ್ಯದೊಳಗೆ ಭೂಮಿ ಹಸ್ತಾಂತರವನ್ನು ಪೂರ್ಣಗೊಳಿಸುವಂತೆ ರಾಜ್ಯ ಆಡಳಿತವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಮಹಾರಾಷ್ಟ್ರದಲ್ಲಿ ಈ ಹಿಂದಿನ ರಾಜ್ಯ ಸರ್ಕಾರ, ಭೂಮಿ ಸ್ವಾಧೀನ ಸೇರಿದಂತೆ ಇತರ ಕೆಲಸ ಕಾರ್ಯಗಳು ವಿಳಂಭವಾಗಿದ್ದವು. ಇದರಿಂದ ಯೋಜನೆಯ ವೇಗಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಎಲ್ಲವು ಅಂದುಕೊಂಡಂತಾಗಿದೆ. ಸಾಧ್ಯವಾದಷ್ಟು ವೇಗದಲ್ಲಿ ಕೆಲಸ ಮಾಡಲಾಗುವುದು ಎಂದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಭವಿಷ್ಯದಲ್ಲಿ ಸಾಮಾನ್ಯ ರೈಲುಗಳಂತೆ ದೇಶದ ತುಂಬೆಲ್ಲ ಬುಲೆಟ್ ರೈಲು ಸಾರಿಗೆ ಲಭ್ಯವಾಗಲಿದೆ. ಇದರಿಂದ ಭಾರತೀಯರಿಗೆ ವೇಗದ ಸಾರಿಗೆ ಕಡಿಮೆ ಬೆಲೆಯಲ್ಲಿ ಸಿಕ್ಕಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+