Operation Sindoor: ಭಾರತ ಸೇನೆಯ ಫೈಟರ್ ಜೆಟ್‌ಗಳ ನಷ್ಟದ ಬಗ್ಗೆ ಪರೋಕ್ಷ ಒಪ್ಪಿಗೆ?

ಭಾರತೀಯ ಸೇನೆ ಈಗಾಗಲೇ ಪಾಪಿ ಪಾಕಿಸ್ತಾನಕ್ಕೆ ಓಡಾಡಿಸಿಕೊಂಡು ಬಾರಿಸಿ ಸರಿಯಾಗಿಯೇ ಬುದ್ಧಿ ಕಲಿಸಿದೆ. ಭಾರತದ ಮಿಲಿಟರಿ ಕೊಟ್ಟ ಏಟಿಗೆ ನಲುಗಿ ಹೋಗಿರುವ ಪಾಪಿ ಪಾಕಿಸ್ತಾನ ರಾಜಿ & ಸಂಧಾನ ಮಾಡಿಕೊಂಡು ಕದನ ವಿರಾಮ ಘೋಷಣೆ ಮಾಡಿ ಯುದ್ಧ ನಿಲ್ಲಿಸಿದೆ. ಅಲ್ಲದೆ ಪಾಕಿಸ್ತಾನದ ನೆಲದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿ ಪರಿಣಾಮ ಭಾರಿ ದೊಡ್ಡ ಪ್ರಮಾಣದ ನಷ್ಟ ಆಗಿದೆ ಎಂಬ ಮಾಹಿತಿ ಇದೆ. ಇಷ್ಟೆಲ್ಲದರ ನಡುವೆ ಇದೀಗ ಮತ್ತೊಂದು ವಿಚಾರ ಹೊರ ಬಿದ್ದಿದೆ.

ಭಾರತ ಸೇನೆಯಿಂದ ಪಾಪಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಂದ್ರೆ ಪಿಒಕೆ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿ ರಾಕ್ಷಸ ರೂಪಿ ಉಗ್ರರಿಗೆ ಪಾಠ ಕಲಿಸಲಾಗಿತ್ತು. ಉಗ್ರರ ಫ್ಯಾಕ್ಟರಿ ಆಗಿರುವ ಪಾಕಿಸ್ತಾನದ ಗಡಿ ಭಾಗದಲ್ಲಿ ಹೀಗೆ ಮಹತ್ವದ ಕಾರ್ಯಾಚರಣೆ ನಡೆಸಲಾಗಿತ್ತು. ಪಾಪಿ ಪಾಕ್ ಗಡಿಭಾಗದಲ್ಲಿ ಇರುವ ಉಗ್ರರ ಶಿಬಿರಗಳನ್ನ ಉಡಾಯಿಸಿ ಉಗ್ರರಿಗೆ ತಕ್ಕಪಾಠ ಕಲಿಸಿದ್ದರು ಭಾರತದ ಯೋಧರು.

India Gains Decisive Advantage in Operation Sindoor Despite Initial Air Losses

'ಆಪರೇಷನ್ ಸಿಂಧೂರ್' ಹೆಸರಲ್ಲಿ ಪಾಕಿಸ್ತಾನದ ಹಲವು ಪ್ರದೇಶಗಳ ಮೇಲೆ ಈ ರೀತಿ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿ ಉಗ್ರರ ಬಿಡಾರ ಉಡೀಸ್ ಮಾಡಿತ್ತು ಭಾರತೀಯ ಸೇನೆ. ಈ ರೀತಿ ಭಾರತ ನಡೆಸಿದ ಕಾರ್ಯಾಚರಣೆಗೆ ಭಾರಿ ಬೆಂಬಲ ಕೂಡ ವ್ಯಕ್ತವಾಗಿತ್ತು. ಆದರೆ ಈಗ ದಿಢೀರ್ ಮತ್ತೊಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ...

ಭಾರತ ಸೇನೆಯ ಫೈಟರ್ ಜೆಟ್‌ಗಳ ನಷ್ಟ?

ಪಾಕಿಸ್ತಾನ ಪ್ರಧಾನಿ ಷರೀಫ್ ಬಾಯಿಗೆ ಬಂದಂತೆ ಮಾತನಾಡುತ್ತಾ, ಭಾರತದ ಜೆಟ್‌ಗಳನ್ನು ಬೀಳಿಸಿ ಗೆದ್ದಿದ್ದೇವೆ ಅಂತಾ ಪೋಸ್ ಕೊಡುತ್ತಿದ್ದ. ಆದರೆ, ಇದೀಗ ಭಾರತೀಯ ಸೇನೆಯ 3 ರಕ್ಷಣಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ ಅವರು ಪಾಕ್‌ಗೆ ಸೂಕ್ತ ಉತ್ತರ ನೀಡಿದ್ದಾರೆ. ಹಾಗಾದ್ರೆ ಅನಿಲ್ ಚೌಹಾಣ್ ಅವರು ಹೇಳಿದ್ದೇನು? ಪಾಕಿಸ್ತಾನ ಮಾಡಿದ್ದ ತಲೆ & ಬುಡವೇ ಇಲ್ಲದ ಆರೋಪಕ್ಕೆ ಇದೀಗ ಭಾರತ ನೀಡಿದ ಉತ್ತರ ಏನು?

ಪಾಕಿಸ್ತಾನಕ್ಕೆ ತಕ್ಕ ಉತ್ತರ ಸಿಕ್ತು!

ಸಿಂಗಾಪುರದ ಶಾಂಗ್ರಿ-ಲಾ ಸಂವಾದ ಮುಗಿಸಿ ಅಂತಾರಾಷ್ಟ್ರೀಯ ಪತ್ರಕರ್ತರ ಜೊತೆ ಅವರು ಮಾತನಾಡುತ್ತಾ, ಪಾಕಿಸ್ತಾನ ಹೇಳಿದ್ದ ಸುಳ್ಳನ್ನು ತಿರಸ್ಕರಿಸಿದ್ದಾರೆ. ಅಲ್ಲದೆ 6 ಫೈಟರ್ ಜೆಟ್ ಅಂದ್ರೆ ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಪಾಕ್ ಹೇಳಿಕೆ ತಪ್ಪು ಎಂದಿದ್ದಾರೆ. ಈ ಮೂಲಕ ಪಾಪಿ ಪಾಕಿಸ್ತಾನ ಆರೋಪವನ್ನ ಭಾರತ ತಿರಸ್ಕರಿಸಿದ್ದು, ಹಾಗೇ ಮತ್ತೊಂದು ಕಡೆ ಸಣ್ಣಪುಟ್ಟ ನಷ್ಟ ಆಗಿರುವ ಬಗ್ಗೆಯೂ ತಿಳಿಸಲಾಗಿದೆ. ಅಂದಹಾಗೆ ಪಾಪಿ ಪಾಕಿಸ್ತಾನ ಮೂಲಕ ನುಸುಳಿ ಬಂದಿದ್ದ ಉಗ್ರರು ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಮೇಲೆ ದಾಳಿ ಮಾಡಿದ್ದರು. ಆ ನಂತರ ಭಾರತ ಕೂಡ ಸೇನಾ ಕಾರ್ಯಾಚರಣೆ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+