Rain Alert: ವಾಯುಭಾರ ಕುಸಿತ ತೀವ್ರತೆ: ಮುಂದಿನ 7 ದಿನ ಈ ಭಾಗಗಳಲ್ಲಿ ರಣಮಳೆ ಮುನ್ಸೂಚನೆ

India Weather: ಮುಂಗಾರು ಮಳೆ ಆರ್ಭಟ ಇನ್ನೂ ಮುಂದುವರಿದಿದ್ದು, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಸುರಿಸುತ್ತಿದೆ. ಒಂದು ತಿಂಗಳು ಕಳೆದರೂ ಸಹಿತ ನಿಲ್ಲದ ಮಳೆಗೆ ಈ ಭಾಗದ ಜನರು ನಲುಗಿದ್ದಾರೆ. ವಿವಿಧ ಕಡೆಗಳಲ್ಲಿ ಚಂಡಮಾರುತ ಪ್ರಸರಣ, ವಾಯುಭಾರ ಕುಸಿತಗಳು ಸಂಭವಿಸಿವೆ. ಅವುಗಳು ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಮುಂದಿನ 7 ದಿನಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆ (Heavy Rain Alert) ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD Weather Forecast) ಮುನ್ಸೂಚನೆ ನೀಡಿದೆ.

ಬಂಗಾಳ ಉಪಸಾಗರದಲ್ಲಿ ಮುಂಗಾರು ಸ್ಟ್ರಫ್ ಉಂಟಾಗಿದೆ. ಮಧ್ಯ ಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಭಾಗಗಳಲ್ಲಿ ಭಾರೀ ಎತ್ತರದಲ್ಲಿ ಬಿರುಗಾಳಿ ಕೇಂದ್ರೀಕೃತವಾಗಿದೆ. ಚಂಡಮಾರುತ ಪರಿಚಲನೆ ಇದಾಗಿದ್ದು, ಸಮುದ್ರಮಟ್ಟದಿಂದ 7.2 ಕಿಲೋ ಮೀಟರ್ ಎತ್ತರದಲ್ಲಿ ಬೀಸುತ್ತಿದೆ. ಇದರಿಂದ ಮುಂಗಾರು ಸುರಿಸುವ ಮೋಡಗಳು ಒಂದೆಡೆ ಜಮಾಯಿತ್ತಿವೆ. ಮತ್ತೊಂದು ಚಂಡಮಾರುತ ಪರಿಚಲನೆಯು ಪಶ್ಚಿಮ ಬಂಗಾಳ, ಒಡಿಶಾ ಕರಾವಳಿ ಭಾಗ ಅಂದರೆ ಪಶ್ಚಿಮ ಬಂಗಾಳ ವ್ಯಾಪ್ತಿಯಲ್ಲಿವೆ. ಇದು 1.5 ಕಿಲೋ ಮೀಟರ್‌ನಿಂದ 5.8 ಕಿಲೋ ಮೀಟರ್ ಎತ್ತದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

India Faces Heavy Rain IMD Forecasts Intense Monsoon Activity in Karnataka and Other States

ಪಾಕಿಸ್ತಾನ ಭಾರತದ ಗಡಿಯ ಪಂಜಾಬ್ ಭೂಮಿ ಮೇಲ್ಮೈನಲ್ಲಿ ಸಹ ವಾಯುಭಾರ ಕುಸಿತವಾಗಿದೆ. ಪಾಕಿಸ್ತಾನ ಭಾಗದಲ್ಲಿ ಅದರ ಎತ್ತರ 3.1 ಕಿಲೋ ಮೀಟರ್ ಇದ್ದರೆ, ಸಮುದ್ರ ಮಟ್ಟದಿಂದ ಅದು 5.8 ಕಿಲೋ ಮೀಟರ್ ಎತ್ತರದಲ್ಲಿದೆ ಎಂದು ಹವಾಮಾನ ತಜ್ಞರು ಬುಧವಾರದ ಮಳೆ ಮುನ್ಸೂಚನೆ ವರದಿಯಲ್ಲಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಮಳೆ ಆರ್ಭಟ, ಮುನ್ಸೂಚನೆ ಇದೆ?

ದೇಶದ ಬೇರೆ ಬೇರೆ ಭಾಗಗಳಲ್ಲಿ ಸೃಷ್ಟಿಯಾಗಿರುವ ಈ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ದಕ್ಷಿಣ ಭಾರತದ ಹಾಗೂ ಕೆಲವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಒಂದು ವಾರ ಕಾಲ ಭಾರೀಯಿಂದ ಅತೀ ಭಾರಿ ಮಳೆ ನಿರೀಕ್ಷೆ ಇದೆ. ಪಂಜಾಬ್, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ರಾಜಸ್ಥಾನ, ಸಿಕ್ಕಿಂ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ದೆಹಲಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ.

ಇದರೊಂದಿಗೆ ಒಡಿಶಾ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಕರ್ನಾಟಕ ಕರಾವಳಿ ಭಾಗಗಳಲ್ಲಿ ಸಹ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಈ ಭಾಗದಲ್ಲಿ ವಿವಿಧ ಜಿಲ್ಲೆಗಳ ಶಾಲೆಗಳಿಗೆ ರಜೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಉಳಿದಂತೆ ಕೆಲವು ರಾಜ್ಯಗಳಲ್ಲಿ ಮಬ್ಬು ವಾತಾವರಣ ಕಂಡು ಬರಲಿದ್ದು, ಕಡಿಮೆ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+