Jammu & Kashmir: ಮೂವರು ಉಗ್ರರ ಹತ್ಯೆ, ಮುಂದುವರಿದ ಸೇನಾ ಕಾರ್ಯಾಚರಣೆ

ನವದೆಹಲಿ, ಮೇ 15: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಳಿಕ ನಡೆ ಪಾಕಿಸ್ತಾನ-ಭಾರತ ಯುದ್ಧವು ಕದನ ವಿರಾಮ ಬಳಿಕ ಸ್ಥಗಿತಗೊಂಡಿದೆ. ಆದರೆ ಭಾರತೀಯ ಸೇನೆ ಪಹಲ್ಗಾಮ್ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈವರೆಗೆ ಮತ್ತೆ ಉಗ್ರರನ್ನು ಹತ್ಯೆ ಮಾಡಲಾಗಿದೆ. ಈವರೆಗೆ ಒಟ್ಟು 03 ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ.

ರಾಜಸ್ಥಾನದ ಗಡಿಯಲ್ಲಿ ಡ್ರೋನ್ ಪತ್ತೆಯಾಗಿದೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಮೊನ್ನೆಯಷ್ಟೇ ಶೋಫಿಯಾನ್ ಜಿಲ್ಲೆಯ ಕೆಲ್ಲಾರ್ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಲಾಗಿತ್ತು. ಒಬ್ಬ ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿತ್ತು. ಇಂದು ಮತ್ತಿಬ್ಬರ ಹತ್ಯೆ ಮಾಡಲಾಗಿದೆ. ಭಾರತದ ಟಾರ್ಗೆಟ್ ಲಿಸ್ಟನಲ್ಲಿ ಒಟ್ಟು 14 ಮಂದಿ ಉಗ್ರರಿದ್ದಾರೆ. ಅರಣ್ಯ ಪ್ರದೇಶದಲ್ಲಿ ಉಳಿದವರಿಗೆ ಶೋಧ ಕಾರ್ಯ ಮುಂದುವರಿದಿದೆ.

India Encounter 3 Terrorists in Jammu-Kashmir Total Target 14 Terrorists by Indian Army

ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರಿಗೆ ಮೇಲೆ ಫೈರಿಂಗ್ ಮಾಡಿದ್ದರು. ಈ ಉಗ್ರ ದಾಳಿಯಲ್ಲಿ ಒಟ್ಟು 26 ಮಂದಿ ಸಾವಿಗೀಡಾಗಿದ್ದರು. ಇದರ ನಂತರ ಭಾರತ ಮತ್ತು ಪಾಕ್ ಸಂಘರ್ಷ ಉಂಟಾಗಿದೆ. ಭಾರತ-ಪಾಕಿಸ್ತಾನ ಮೇಲೆ ದಾಳಿ ಮಾಡಿ ನೂರಾರು ಪಾಕ್ ಸೈನಿಕರನ್ನು, ಉಗ್ರರನ್ನು ಹೆಡೆಮುರಿ ಕಟ್ಟಿದೆ. ಗಡಿ ಭಾಗದಲ್ಲಿ ಉದ್ವಿಗ್ನತೆ ಎದುರಾಗಿ ಎಲ್ಲವು ಸಹಜ ಸ್ಥಿತಿಗೆ ಬಂದಿದೆ.

ಇದೀಗ ರಾಜಸ್ಥಾನದ ಅನುಫ್‌ಗಢನಲ್ಲಿ ಮತ್ತೊಂದು ಡ್ರೋನ್ ಪತ್ತೆಯಾಗಿದೆ. ಡ್ರೋನ್ ಅವಶೇಷ ಪತ್ತೆಯಾಗಿದೆ. ಜನರಿಗೆ ಆತಂಕ ಶುರುವಾಗಿದೆ. ನೆಲಕ್ಕೆ ಬಿದ್ದ ಡ್ರೋನ್ ನೋಡಿ ಸ್ಥಳೀಯರು ಭಯ ಭೀತರಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ಮಾಡಿದ್ದಾರೆ. ಖಾಲಿ ಜಮೀನಿನಲ್ಲಿ ಬಿದ್ದಿರುವ ಡ್ರೋನ್. ಎಲ್ಲಿಂದ ಬಂತು? ಹೇಗೆ ಬಂದಿದೆ. ಇದರ ಮೂಲ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಸೇನೆಯು ಸಹ ಸ್ಥಳಕ್ಕೆ ಬಂದು ಅವಶೇಷ ಒಯ್ದು ಪರಿಶೀಲಿಸಲಿದೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಪಾಕಿಸ್ತಾನ ಸೇನೆ ಇಲ್ಲವೇ ಉಗ್ರರಿಂದ ಮತ್ತೆ ಡ್ರೋನ್ ದಾಳಿ ನಡೆದಿದೆ ಎಂದು ಸಾಬೀತಾದಲ್ಲಿ ಭಾರತವು ಅಪರೇಷನ್ ಸಿಂಧೂರ ಮುಂದುವರಿಸಲಿದೆ. ಈಗಾಗಲೇ ಪ್ರಧಾನಿ ಮೋದಿಯವರು, ಪಾಕ್‌ನಿಂದ ಭಾರತದ ಗಡಿಯ ಯಾವೊಂದು ಕಡೆಯಲ್ಲಾದರೂ ಸಣ್ಣ ದಾಳಿ ನಡೆದರೂ ಅದನ್ನು ಯುದ್ಧವೆಂದು ಪರಿಗಣಿಸಿ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದ್ದಾರೆ. ಹೀಗಿದ್ದರೂ ದೇಶದ ರಾಜಸ್ಥಾನದ ಗಡಿಯಲ್ಲಿ ಡ್ರೋನ್ ಪತ್ತೆ ಆಗಿದೆ. ತನಿಖೆಯಿಂದ ಅದರ ಪೂರ್ಣ ಮಾಹಿತಿ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+