ಯುಎಸ್‌ಎಐಡಿ ನೆರವು ಕುರಿತು ಭಾರತದ ಸ್ಪಷ್ಟನೆ, ಅಸ್ಥಿರಗೊಳಿಸುವ ಕಾಂಗ್ರೆಸ್‌ನ ಉದ್ದೇಶ

ಭಾರತದಲ್ಲಿ ಅಮೆರಿಕದ ಅಂತರರಾಷ್ಟ್ರೀಯ ನೆರವು ಏಜೆನ್ಸಿ (ಯುಎಸ್‌ಎಐಡಿ) ಹಣಕಾಸು ನೆರವು ಕುರಿತು ಕಾವೇರಿದ ರಾಜಕೀಯ ಚರ್ಚೆಗಳು ಆರಂಭಗೊಂಡಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್‌ಎಐಡಿ ಹಣಕಾಸು ನೆರವನ್ನು ಭಾರತದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಬಳಕೆ ಮಾಡಲಾಗಿದೆ ಎಂಬ ಹೇಳಿಕೆಯನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.

India Clears Air On USAID Funding As Congress Pushes Its Destabilisation Agenda

ಹಣಕಾಸು ಸಚಿವಾಲಯದ ಅಂಕಿ ಅಂಶಗಳು ಯುಎಸ್‌ಎಐಡಿ ಹಣಕಾಸು ನೆರವನ್ನು ಭಾರತದಲ್ಲಿ ನಿರ್ದಿಷ್ಟ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ, ಚುನಾವಣಾ ಪ್ರಕ್ರಿಯೆಗೆ ಬಳಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದಾಗ್ಯೂ ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ಸರ್ಕಾರದ ವಿರೋಧಿ ಅಭಿಪ್ರಾಯ ಮೂಡಿಸಲು ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ, ಇದು ಭಾರತವನ್ನು ಅಸ್ಥಿರಗೊಳಿಸುವ ಅದರ ಪ್ರಯತ್ನದ ಭಾಗವಾಗಿದೆ.

India Clears Air On USAID Funding As Congress Pushes Its Destabilisation Agenda

ಭಾರತಕ್ಕೆ ಯುಎಸ್‌ಎಐಡಿ ನೆರವು ಸತ್ಯ, ಆರೋಪಗಳು

2023-24ನೇ ಸಾಲಿನ ಹಣಕಾಸು ಸಚಿವಾಲಯದ ವಾರ್ಷಿಕ ವರದಿಯಲ್ಲಿ ಯುಎಸ್‌ಎಐಡಿ ನೆರವನ್ನು ಭಾರತದಲ್ಲಿ 7 ಯೋಜನೆಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಒಟ್ಟು ಸುಮಾರು $750 ಮಿಲಿಯನ್ ಹಣಕಾಸು ಸಹಾಯವನ್ನು ಒದಗಿಸಲಾಗಿತ್ತು. ಈ ಯೋಜನೆಗಳು ಮುಖ್ಯವಾಗಿ ಕೃಷಿ, ನೀರಿನ ಸ್ವಚ್ಛತೆ, ನವೀಕರಿಸಬಹುದಾದ ಇಂಧನ, ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವು. ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಯಾವುದೇ ಆರ್ಥಿಕ ನೆರವು ಹಂಚಿಕೆ ಮಾಡಿದ ಬಗ್ಗೆ ಉಲ್ಲೇಖಗಳಿಲ್ಲ.

ಟ್ರಂಪ್ ಆರೋಪಗಳಿಗೆ ತಿರುಗೇಟು ನೀಡುವಂತೆ ತನಿಖಾ ವರದಿಗಳು 2022ರಲ್ಲಿ ಬಾಂಗ್ಲಾದೇಶಕ್ಕೆ $21 ಮಿಲಿಯನ್ ನೆರವನ್ನು ವಿದ್ಯಾರ್ಥಿಗಳನ್ನು, ರಾಜಕೀಯ ಮತ್ತು ಜನರ ತೊಡಗಿಸಿಕೊಳ್ಳುವಿಕೆ ಬೆಂಬಲಿಸಲು 2024ರ ಚುನಾವಣೆಗೆ ಮುನ್ನ ನೀಡಲಾಗಿತ್ತು ಎಂದು ಬಹಿರಂಗಪಡಿಸಿದ್ದವು. ಇದರಲ್ಲಿ $13.4 ಮಿಲಿಯನ್ ಈಗಾಗಲೇ ಟ್ರಂಪ್ ಅವರ ಹೇಳಿಕೆಗೂ ಮೊದಲೇ ಬಿಡುಗಡೆ ಮಾಡಲಾಗಿತ್ತು. ಈ ಸ್ಪಷ್ಟೀಕರಣಗಳ ನಂತರವೂ, ಟ್ರಂಪ್ ತಮ್ಮ ನಿಲುವನ್ನು ಬದಲಿಸಲಿಲ್ಲ, ಇದರಿಂದ ರಾಜತಾಂತ್ರಿಕ ಪರಿಸ್ಥಿತಿ ಇನ್ನಷ್ಟು ಸಂಕೀರ್ಣಗೊಂಡಿದೆ.

India Clears Air On USAID Funding As Congress Pushes Its Destabilisation Agenda

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ವಿಚಾರದ ಕುರಿತು ಮಾತನಾಡಿದರು, ಯುಎಸ್‌ಎಐಡಿ ನೆರವನ್ನು ಭಾರತದಲ್ಲಿ ಉತ್ತಮ ನಂಬಿಕೆಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ, ಚುನಾವಣೆ ಮೇಲೆ ಪ್ರಭಾವ ಬೀರಲು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ನಿರಾಧಾರ ಎಂದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ರಂಪ್ ಅವರ ಹೇಳಿಕೆ ಭಾರತದ ಸ್ವತಂತ್ರ ಮತ್ತು ಸಾರ್ವಭೌಮ ಚುನಾವಣಾ ಪ್ರಕ್ರಿಯೆಗಳಿಗೆ ಕಳವಳವನ್ನು ತಂದಿದೆ ಎಂದಿತು.

ಭಾರತ ವಿರೋಧಿ ಅಭಿಪ್ರಾಯ ಮೂಡಿಸುವಲ್ಲಿ ಕಾಂಗ್ರೆಸ್ ಪಾತ್ರ?

ಯುಎಸ್‌ಎಐಡಿ ಹಣಕಾಸು ನೆರವು ಕುರಿತು ಈ ಸ್ಪಷ್ಟೀಕರಣಗಳ ನಂತರವೂ ವಿರೋಧ ಪಕ್ಷವಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿತು, ಚುನಾವಣೆಯಲ್ಲಿ ವಿದೇಶಿ ಬೆಂಬಲಿತ ಹಸ್ತಕ್ಷೇಪವಿದೆ ಎಂದು ಹೇಳಿತು. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಂತರಾಷ್ಟ್ರೀಯ ಸಂಸ್ಥೆಗಳ ಜೊತೆ ಗುರುತಿಸಿಕೊಂಡು ಭಾರತ ವಿರೋಧಿ ಅಸ್ತಿರತೆ ಆರೋಪ ಮಾಡುತ್ತಿದೆ ಎಂದು ಹಲವರು ಹೇಳಿದರು.

ಒಸಿಸಿಆರ್‌ಪಿಯ ಸಂಚು

ಕಾಂಗ್ರೆಸ್ ನಿರಂತರವಾಗಿ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆ (ಒಸಿಸಿಆರ್‌ಪಿ) ವರದಿಯನ್ನು ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಲು ಮತ್ತು ಭಾರತದ ಪ್ರಮುಖ ಉದ್ಯಮಗಳನ್ನು ಟೀಕಿಸಲು ಬಳಕೆ ಮಾಡಿಕೊಳ್ಳುತ್ತಿದೆ. ಈ ವರದಿಗಳನ್ನು ಕೋರ್ಟ್‌ ಮತ್ತು ತನಿಖಾ ಸಂಸ್ಥೆಗಳು ತಳ್ಳಿ ಹಾಕಿದ್ದರೂ ಸಹ ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಲು ಇದನ್ನು ಮಂಡನೆ ಮಾಡಲಾಯಿತು. ಪೆಗಾಸಸ್ ಸ್ಪೈವೇರ್ ವಿವಾದ ಮತ್ತು ಆರೋಪಗಳು ಒಸಿಸಿಆರ್‌ಪಿ ವರದಿ ಅನ್ವಯ ಮಾಡಿದ್ದಾಗಿದ್ದವು, ಕಾಂಗ್ರೆಸ್ ನಾಯಕರು ಅದರಲ್ಲೂ ರಾಹುಲ್ ಗಾಂಧಿ ದೇಶದ ಆರ್ಥಿಕತೆ ಮತ್ತು ರಾಜಕೀಯ ಪರಿಸ್ಥಿತಿಯನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸಿದರು.

India Clears Air On USAID Funding As Congress Pushes Its Destabilisation Agenda

ಅಚ್ಚರಿಯ ಸಂಗತಿ ಎಂದರೆ ರಾಹುಲ್ ಗಾಂಧಿ ಬಾಂಗ್ಲಾದೇಶದ ಪತ್ರಕರ್ತ ಮತ್ತು ಒಸಿಸಿಆರ್‌ಪಿ ಮಾಜಿ ಫೆಲೋ ಮುಶ್ಫಿಕುಲ್ ಫಜಲ್ ಅಂಸಾರೆ ಜೊತೆ ಸಂಪರ್ಕ ಹೊಂದಿದ್ದಾರೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ನಂತರ 2024ರಲ್ಲಿ ಅವರನ್ನು ರಾಯಭಾರಿಯಾಗಿ ನೇಮಿಸಿತು. ಇದು ದಕ್ಷಿಣ ಏಷ್ಯಾವನ್ನು ಅಸ್ಥಿರಗೊಳಿಸಲು ಕೆಲಸ ಮಾಡುತ್ತಿರುವ ಜಾಗತಿಕ ಸಂಸ್ಥೆಗಳೊಂದಿಗೆ ಕಾಂಗ್ರೆಸ್‌ನ ಸಂಬಂಧದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ.

ಏಷ್ಯಾ ಫೌಂಡೇಷನ್ ಮತ್ತು ಅದರ ಸಿಐಎ ಸಂಪರ್ಕಗಳು

ಈ ಮಾದರಿ ಹಸ್ತಕ್ಷೇಪ ಇರುವ ಮತ್ತೊಂದು ಸಂಸ್ಥೆ ಏಷ್ಯಾ ಫೌಂಡೇಶನ್. 1954ರಲ್ಲಿ ಗುಪ್ತ ಸಿಐಎ ಕಾರ್ಯಾಚರಣೆಯಾಗಿಯೇ ಇದನ್ನು ಸ್ಥಾಪಿಸಲಾಯಿತು. ಇದು ಜಾರ್ಜ್ ಸೋರೊಸ್‌ನ ಜಾಲದ ಭಾಗವಾದ ಫೋರ್ಡ್ ಫೌಂಡೇಶನ್ ಮೂಲಕ ಹಣಕಾಸು ಸಹಾಯ ಪಡೆದಿದೆ. ಇದು ಜಮ್ಮು & ಕಾಶ್ಮೀರ ಕುರಿತು ಪಾಕಿಸ್ತಾನದ ನಿಲುವಿಗೆ ಐತಿಹಾಸಿಕವಾಗಿ ಬೆಂಬಲ ನೀಡುತ್ತಿದೆ ಎಂದು ತಿಳಿದುಬಂದಿದೆ. ಇಂತಹ ಸಂಸ್ಥೆಗಳೊಂದಿಗೆ ಕಾಂಗ್ರೆಸ್‌ನ ಪರೋಕ್ಷ ಹೊಂದಾಣಿಕೆ ಭಾರತದ ಸ್ವಾಯತ್ತತೆಗೆ ಅದರ ಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಫ್ರೀಡಂ ಹೌಸ್ ಮತ್ತು ಜಾಗತಿಕ ಕಳಂಕದ ಅಭಿಯಾನ

India Clears Air On USAID Funding As Congress Pushes Its Destabilisation Agenda

ಫ್ರೀಡಂ ಹೌಸ್‌ಗೆ ಜಾರ್ಜ್ ಸೋರೊಸ್‌ ನೇತೃತ್ವದ ಓಪನ್ ಸೊಸೈಟಿ ಫೌಂಡೇಶನ್ (ಒಎಸ್ಎಫ್) ಭಾರೀ ಹಣಕಾಸು ನೆರವು ನೀಡಿದೆ, ಇದು 2021ರಿಂದ ಭಾರತವನ್ನು ಭಾಗಶಃ ಸ್ವತಂತ್ರ ಎಂದು ಬಿಂಬಿಸುತ್ತಿದೆ. ಸರ್ಕಾರ ಅಲ್ಪಸಂಖ್ಯಾತರನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸುತ್ತಿದೆ. ಈ ಸಂಘಟನೆ ಫೈವ್ ಐಸ್‌ ದೇಶಗಳ ಅಂತಾರಾಷ್ಟ್ರೀಯ ಮಾಧ್ಯಮದೊಂದಿಗೆ ಕೆಲಸ ಮಾಡಿ ಭಾರತದ ವಿರುದ್ಧ ಅಭಿಯಾನವನ್ನು ನಡೆಸುತ್ತಿದೆ. ಅಮೆರಿಕಾದ ಆಧಾರಿತ ಸಂಸ್ಥೆಯಾಗಿದ್ದರೂ, ಫ್ರೀಡಂ ಹೌಸ್ ಯುಎಸ್‌ಎಐಡಿ ಜೊತೆಗೂಡಿ, ದೇಶೀಯ ರಾಜಕೀಯ ಚರ್ಚೆಯಲ್ಲಿ ವಿದೇಶಿ ಪ್ರಭಾವವನ್ನು ಇನ್ನಷ್ಟು ಸೇರಿಕೊಳ್ಳುವಂತೆ ಮಾಡುತ್ತಿದೆ.

ಅನೇಕ ವಿಮರ್ಶಕರು ಕಾಂಗ್ರೆಸ್ ಅಧಿಕಾರವನ್ನು ಪುನಃ ಪಡೆಯಲು ಭಾರೀ ಆಸಕ್ತಿ ಹೊಂದಿದ್ದು, ಚುನಾವಣಾ ಹಸ್ತಕ್ಷೇಪಕ್ಕಾಗಿ ಪ್ರಸಿದ್ಧವಾಗಿರುವ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಅನೇಕರು ಹೇಳುತ್ತಿದ್ದಾರೆ.

India Clears Air On USAID Funding As Congress Pushes Its Destabilisation Agenda

ಸಿಇಪಿಪಿಎಸ್ ನೆರವು ಮತ್ತು ಮತದಾರರ ಮೇಲೆ ಪ್ರಭಾವ

ಚುನಾವಣೆಗಳು ಮತ್ತು ರಾಜಕೀಯ ಪ್ರಕ್ರಿಯೆ ಬಲವರ್ಧನೆಗಾಗಿ ಒಕ್ಕೂಟ (ಸಿಇಪಿಪಿಎಸ್) ಯುಎಸ್‌ಎಐಡಿ ಬೆಂಬಲಿತವಾಗಿದೆ. ಇದು ಜಗತ್ತಿನಾದ್ಯಂತ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತದೆ ಎಂಬ ಆರೋಪಗಳಿವೆ. ವರದಿಗಳ ಪ್ರಕಾರ ಯುಎಸ್‌ಎಐಡಿ 2014ರ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಇಪಿಪಿಎಸ್ ಮೂಲಕ ಮತದಾನದ ಮೇಲೆ ಪ್ರಭಾವ ಬೀರಲುಭಾರತಕ್ಕೆ 21 ಮಿಲಿಯನ್ ನೆರವು ನೀಡಿದೆ.

ಯುಎಸ್‌ಸಿಐಆರ್‌ಎಫ್‌ ಧಾರ್ಮಿಕ ಸ್ವಾತಂತ್ರ್ಯದ ವರದಿ

ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (ಯುಎಸ್‌ಸಿಐಆರ್‌ಎಫ್‌) ಭಾರತೀಯ ಅಮೆರಿಕನ್‌ ಮುಸ್ಲಿಂ ಕೌನ್ಸಿಲ್‌ (ಐಎಎಂಸಿ) ಲಾಬಿ ಮೂಲಕ ಭಾರತವನ್ನು ವಿಶೇಷ ಚಿಂತೆಯ ದೇಶ ಎಂದು ವರ್ಗೀಕರಿಸಲು ಪ್ರಯತ್ನಿಸಿದೆ. ಅಮೆರಿಕಾದ ಬೆಂಬಲ ಆಧಾರಿತ ಗುಂಪುಗಳಿಂದ ಲಾಬಿ ಮಾಡುವ ಮೂಲಕ ಭಾರತದ ವಿರುದ್ಧ ಜಾಗತಿಕ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.

India Clears Air On USAID Funding As Congress Pushes Its Destabilisation Agenda

ವಿದೇಶಿ ಹಸ್ತಕ್ಷೇಪದ ವಿರುದ್ದ ನಿಂತ ಭಾರತ

ನವದೆಹಲಿ ಹಲವು ಸಲ ಮತ್ತು ಪುನಃ ಪುನಃ ಚುನಾವಣೆ ಮತ್ತು ಸರ್ಕಾರದ ಪ್ರಕ್ರಿಯೆಗಳಲ್ಲಿ ವಿದೇಶಿ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಯುಎಸ್‌ಎಐಡಿ ನೆರವು ಮತ್ತು ಚುನಾವಣಾ ಹಸ್ತಕ್ಷೇಪದ ಕುರಿತು ಆರೋಪಗಳಿಗೆ ಸ್ಪಷ್ಟನೆ ನೀಡಿವೆ. ಬಿಜೆಪಿ ಸರ್ಕಾರವು ಸಹ ಕಾಂಗ್ರೆಸ್ ಹೇಗೆ ವಿದೇಶಿ ಬೆಂಬಲಿತ ಸಂಘಟನೆಗಳ ಜೊತೆ ಸೇರಿದೆ ಎಂಬುದನ್ನು ಬಹಿರಂಗಗೊಳಿಸಿದೆ.

ಪ್ರಜಾಪ್ರಭುತ್ವದ ನಿಯಮಗಳನ್ನು ಪಾಲಿಸುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್ ಅನೇಕ ಗುಪ್ತಚರ ಸಂಸ್ಥೆಗಳು ಮತ್ತು ವಿದೇಶಿ ಬೆಂಬಲಿತ ಸಂಘಟನೆಗಳ ಜೊತೆ ನಂಟು ಹೊಂದಿದೆ. ಇದು ಅದರ ನಿಜವಾದ ಉದ್ದೇಶ, ಚಿಂತೆಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಕಾರಾತ್ಮಕ, ತಪ್ಪು ಕಲ್ಪನೆಗಳನ್ನು ಮತ್ತು ಜಾಗತಿಕ ವರದಿಗಳನ್ನು ಅಸ್ತ್ರವಾಗಿ ಬಳಸುವ ಮೂಲಕ, ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದೆ ಮಾತ್ರವಲ್ಲದೆ, ಭಾರತದ ಚಿತ್ರಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಸುಕುಗೊಳಿಸುವ ಪ್ರಯತ್ನ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+