ಪ್ಯಾಂಗಾಂಗ್ ಸರೋವರದಿಂದ ಸೇನೆ ಹಿಂದೆಗೆತ ಸಂಪೂರ್ಣ: ಭಾರತ-ಚೀನಾ ನಾಳೆ ಮತ್ತೆ ಮಾತುಕತೆ

ನವದೆಹಲಿ, ಫೆಬ್ರವರಿ 19: ಪ್ಯಾಂಗಾಂಗ್ ತ್ಸೊ ಸರೋವರದ ಎರಡೂ ತೀರಗಳಲ್ಲಿನ ಉಭಯ ದೇಶಗಳ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತ ಮತ್ತು ಚೀನಾ ನಡುವೆ ನಡೆದಿದ್ದ ಒಪ್ಪಂದಕ್ಕೆ ಅನುಗುಣವಾಗಿ ಎಲ್ಲ ಸೈನಿಕರನ್ನೂ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಅದರ ಬೆನ್ನಲ್ಲೇ ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 10ನೇ ಸುತ್ತಿನ ಸಭೆ ಶನಿವಾರ ನಡೆಯಲಿದೆ.

ಪೂರ್ವ ಲಡಾಖ್‌ನಲ್ಲಿ ಒಂಬತ್ತು ತಿಂಗಳಿನಿಂದ ಉಂಟಾಗಿರುವ ಉಭಯ ದೇಶಗಳ ನಡುವಿನ ಸೇನಾ ಬಿಕ್ಕಟ್ಟನ್ನು ತಿಳಿಗೊಳಿಸುವ ಮೊದಲ ಪ್ರಯತ್ನ ಯಶಸ್ವಿಯಾಗಿದೆ. ಕಳೆದ ತಿಂಗಳು ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ನಡೆದ ಒಂಬತ್ತನೇ ಸುತ್ತಿನ ಮಾತುಕತೆಯ ವೇಳೆ ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಲ್ಲಿನ ತಮ್ಮ ತಮ್ಮ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲು ಹಾಗೂ ಅಲ್ಲಿ ಈ ಒಂಬತ್ತು ತಿಂಗಳಲ್ಲಿ ನಿರ್ಮಿಸಿದ ಎಲ್ಲ ಕಟ್ಟಡ ರಚನೆಗಳನ್ನು ನಾಶಪಡಿಸಲು ಒಪ್ಪಂದಕ್ಕೆ ಬರಲಾಗಿತ್ತು.

ಪ್ಯಾಂಗಾಂಗ್‌ನ ದಕ್ಷಿಣ ತೀರದ ಚುಷುಲ್ ಸಮೀಪ ಇರುವ ಮೊಲ್ಡೊದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಾತುಕತೆ ಆರಂಭವಾಗಲಿದೆ. ಈ ಸಭೆ ಎಷ್ಟು ಸಮಯದವರೆಗೂ ನಡೆಯಲಿದೆ ಎನ್ನುವುದು ತಿಳಿದಿಲ್ಲ. ಕಳೆದ ಬಾರಿಯ ಸಭೆ ಬೆಳಿಗ್ಗೆ ಆರಂಭವಾಗಿ ಮಧ್ಯರಾತ್ರಿಯವರೆಗೂ ನಡೆದಿತ್ತು.

India, China Disengagement Complete In Pangong Tso: 10th Round Talks Tomorrow

ಸಭೆ ಯಶಸ್ವಿಯಾದ ಬಳಿಕ ಹಂತ ಹಂತವಾಗಿ ಸರೋವರದ ತೀರಗಳಿಂದ ನಿರ್ದಿಷ್ಟ ಪ್ರದೇಶದವರೆಗೂ ಸೇನೆಗಳು, ಟ್ಯಾಂಕ್ ಹಾಗೂ ಇತರೆ ಸಾಧನಗಳನ್ನು ಹಿಂದಕ್ಕೆಕರೆಸಿಕೊಳ್ಳಲು ಎರಡೂ ದೇಶಗಳು ಒಪ್ಪಿಗೆ ಸೂಚಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+