ಪೂರ್ವ ಲಾಡಖ್‌ನಿಂದ ಸಂಪೂರ್ಣ ಸೇನೆ ಹಿಂತೆಗೆತಕ್ಕೆ ಭಾರತ-ಚೀನಾ ಸಮ್ಮತಿ

ನವದೆಹಲಿ, ಜುಲೈ 24: ಪೂರ್ವ ಲಡಾಖ್‌ನಲ್ಲಿ ಚೀನಾದ 40 ಸಾವಿರ ಸೈನಿಕರ ಜಮಾವಣೆಯಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ವಿವಾದಿತ ಸ್ಥಳದಿಂದ ಸೇನೆಯನ್ನು ಸಂಪೂರ್ಣ ಹಿಂತೆಗೆದುಕೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ.

Recommended Video

      The Indian Premier League (IPL) 2020 is all set to kick-off | Oneindia Kannada

      ಸೇನೆ ಹಾಗೂ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳ ಹಂತದಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.

      ಪೂರ್ವ ಲಡಾಖ್ ಭಾಗದಲ್ಲಿ ಸೇನೆಯನ್ನು ಕೂಡಲೇ ಹಾಗೂ ಸಂಪೂರ್ಣವಾಗಿ ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಬಗ್ಗೆ ಸಭೆಯನ್ನು ಉಭಯ ದೇಶಗಳು ನಿರ್ಧರಿಸಿದ್ದು ಇದಕ್ಕೆ ಕ್ಷಿಪ್ರ ವೇಗ ನೀಡುವ ಸಲುವಾಗಿ ಉನ್ನತ ಮಟ್ಟದ ಇನ್ನೊಂದು ಹಂತದ ಸಭೆ ನಡೆಯಲಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.

      India-China Agree On Early And Complete Disengagement Of Troops From Ladakh

      ಕಳೆದ ಜುಲೈ 5 ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಚೀನಾದ ಅಧಿಕಾರಿಗಳ ನಡುವೆ ನಡೆದ ಸಭೆಯ ಬಳಿಕ ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ಶಾಂತವಾಗಿತ್ತು.

      ಉಭಯ ದೇಶಗಳು ತಮ್ಮ ಸೇನೆಯನ್ನು ವಿವಾದಿತ ಸ್ಥಳದಿಂದ ದೂರಕ್ಕೆ ತೆಗೆದುಕೊಂಡು ಹೋಗಲು ಪರಸ್ಪರ ಸಮ್ಮತಿಸಿದ್ದವು ಆದರೆ ಮತ್ತೆ ಚೀನಾ ಸೇನಾ ಜಮಾವಣೆ ಮಾಡುತ್ತಿದೆ ಎನ್ನುವ ಸುದ್ದಿ ಬಂದಿದೆ. ಮತ್ತೆ ಶುಕ್ರವಾರ ಸಭೆ ನಡೆದು ಈ ತೀರ್ಮಾನಕ್ಕೆ ಬರಲಾಗಿದೆ.

      ಜುಲೈ 14-15ರಂದು ಕಮಾಂಡರ್ ಹಂತದ ಮಾತುಕತೆಯಲ್ಲಿ ಎರಡೂ ದೇಶದ ಸೈನಿಕರು ಆ ಪ್ರದೇಶದಲ್ಲಿ ಇರಕೂಡದು, ತಮ್ಮ ಶಾಶ್ವತ ನೆಲೆಗೆ ತೆರಳಬೇಕು. ಒಂದು ವಾರದ ಬಳಿಕ ಮತ್ತೆ ಎರಡೂ ಸೇನೆಯು ಮರು ಪರಿಶೀಲನೆ ಮಾಡಬೇಕು ಎಂದು ಹೇಳಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+