INDIA ಮೈತ್ರಿಕೂಟ: 'ಭಾರತ'ಕ್ಕೆ ಪ್ರಧಾನಿ ಅಭ್ಯರ್ಥಿಗಳು ಆಯ್ಕೆ ಸಾಕಷ್ಟಿವೆ, ಬಿಜೆಪಿಗೆ ಯಾವ ಆಯ್ಕೆ ಇದೆ?
ನವದೆಹಲಿ, ಆಗಸ್ಟ್ 31: ಮುಂಬೈನ ಖಾಸಗಿ ಹೋಟೆಲ್ ಒಂದರಲ್ಲಿ ನಡೆಯಲಿರುವ ವಿಪಕ್ಷಗಳು ಇಂಡಿಯಾ (INDIA) ಮೈತ್ರಿಕೂಟದ ಮೂರನೇ ಸಭೆ ಇಂದು ಗುರುವಾರ ಆರಂಭವಾಗಿದ್ದು, ಒಟ್ಟು 28 ರಾಜಕೀಯ ಪಕ್ಷಗಳು ಭಾಗವಹಿಸಿವೆ. ಒಟ್ಟು 63 ಪ್ರಕ್ಷಗಳ ಪ್ರತಿನಿಧಿಗಳು ಸಭೆಗೆ ಹಾಜರಿದ್ದು, ಮೊದಲ ದಿನವೇ ವಿರೋಧ ಪಕ್ಷಗಳು ಮೈತ್ರಿಕೂಟದ 'ಲೋಗೋ'ಬಿಡುಗಡೆಗೊಳ್ಳುವ ಸಾಧ್ಯತೆಗಳು ಇವೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಬಾರಿ ಇಂಡಿಯಾ ಮೈತ್ರಿಕೂಟದ ಎರಡನೇ ಸಭೆ ನಡೆದಿತ್ತು. ಅಲ್ಲಿ 26 ಪಕ್ಷಗಳು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (INDIA) ಅನ್ನು ರಚಿಸಿ ಘೋಷಿಸಿದದವು. ಅದಾದ ಬಳಿಕ ಮಹಾರಾಷ್ಟ್ರದ ಮಾರ್ಕ್ಸ್‌ವಾದಿ ರಾಜಕೀಯ ಪಕ್ಷವಾದ 'ರೈತರು ಮತ್ತು ಕಾರ್ಮಿಕರ ಪಕ್ಷ ಆಫ್ ಇಂಡಿಯಾ (PWP)' ಹಾಗೂ ಮತ್ತು ಇನ್ನೊಂದು ಪ್ರಾದೇಶಿಕ ಸಂಘಟನೆ ಸೇರಿ ಒಟ್ಟು ಎರಡು ಪಕ್ಷಗಳು ಹೊಸದಾಗಿ ಉದಯಿಸಿವೆ.

ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಜ್ಜಾಗಿರುವ ಎಲ್ಲ ವಿಪಕ್ಷಗಳು 2024 ರ ಲೋಕಸಭಾ ಚುನಾವಣೆ ತಂತ್ರಗಾರಿಕೆ ಹೆಣೆಯುತ್ತಿವೆ. ಎಲ್ಲರೂ ಒಟ್ಟಾಗಿ ಸ್ಪರ್ಧಿಸಲು ಯೋಜಿಸಿರುವ ಲೋಗೋ ಅನ್ನು ಇಂದು ಅನಾವರಣಗೊಳಿಸುವ ಸಾಧ್ಯತೆಗಳು ಇವೆ. ಅಲ್ಲದೇ ವಿಪಕ್ಷಗಳು ಒಟ್ಟು 11 ಪ್ರಮುಖ ಸದಸ್ಯರನ್ನು ಆಯ್ಕೆ ಮಾಡಿ ಅವರ ನೇತೃತ್ವದಲ್ಲಿ 'ಸಮನ್ವಯ ಸಮಿತಿ' ರಚನೆಯಾಗುವ ಸಾಧ್ಯತೆ ಇದೆ.
ಗುರುವಾರದಿಂದ ಆರಂಭವಾದ ಎರಡು ದಿನಗಳ ಸಭೆಯಲ್ಲಿ ವಿರೋಧ ಪಕ್ಷಗಳು ಎನ್‌ಡಿಎ ವಿರುದ್ಧದ, ಚುನಾವಣೆ ಕುರಿತ ವಿಷಯಗಳು, ಗೆಲ್ಲುವ ಕಾರ್ಯತಂತ್ರ ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ಪ್ರತಿಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು?
ಇನ್ನು ಮುಖ್ಯವಾಗಿ ಎರಡು ಅವಧಿಯಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದ ಸವಾಲು ಇಂಡಿಯಾ ಮೈತ್ರಿಕೂಟದ ಮುಂದಿದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ವಿರೋಧ ಪಕ್ಷಗಳನ್ನು ಯಾರು ಸಮರ್ಥವಾಗಿ ಮುನ್ನಡೆಸುತ್ತಾರೋ ಅವರು ಭಾರತದ (ಪ್ರಧಾನಿ) ಅಭ್ಯರ್ಥಿ ಆಗಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ಅಭ್ಯರ್ಥಿ ಕುರಿತು ಹೇಳಿಕೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು, ಮೈತ್ರಿಕೂಟದಲ್ಲಿ ಅನೇಕ ಪ್ರಧಾನಿ ಅಭ್ಯರ್ಥಿಗಳಾಗುವ ಮುಖಗಳಿವೆ (ಸಮರ್ಥರಿದ್ದಾರೆ). ಆದರೆ ಭಾರತಕ್ಕೆ ಯಾವ ಆಯ್ಕೆ ಇದೆ?. ಕಳೆದ ಹತ್ತು ವರ್ಷದಿಂದ ಅವರು ಏನು ಮಾಡಿದ್ದಾರೆ ಎಂದು ಜನ ನೋಡಿದ್ದಾರೆ ಎಂದರು.
'ಇಂಡಿಯಾ' ದಲ್ಲಿ ಸೀಟು ಹಂಚಿಕೆ ಹೇಗಿರಲಿದೆ?
ಸದ್ಯಕ್ಕೆ ಆಯಾ ರಾಜ್ಯಗಳಲ್ಲಿ ಪಕ್ಷಗಳ ಅರ್ಹತೆಯ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲು ಮೈತ್ರಿಕೂಟ ನಿರ್ಧರಿಸಿದೆ.
ತಾನು ಯಾವುದೇ ಮೈತ್ರಿಯೊಂದಿಗೆ ಇಲ್ಲ ಎಂದು ಯುಪಿ ಮಾಜಿ ಸಿಎಂ ಬಿಎಸ್‌ಪಿ ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಹಿಂದೆ ಅವರು ಬಿಜೆಪಿ ಜತೆಗೆ ಒಂದಷ್ಟು ಮಾತುಕತೆಗಳನ್ನು ನಡೆಸಿದ್ದರು. ಈ ಕಾರಣದಿಂದಲೇ ಅವರು ಮೈತ್ರಿ ಜತೆಗೆ ಕೈ ಜೋಡಿಸಿಲ್ಲ ಎನ್ನಲಾಗುತ್ತಿದೆ.
ಈ ಬಗ್ಗೆ ಶರದ್ ಪವಾರ್ ಅವರು ಎನ್‌ಸಿಪಿ ಬಗ್ಗೆ ಯಾವುದೇ ಅನುಮಾನ ಅಥವಾ ಗೊಂದಲವಿಲ್ಲ. ಬಿಟ್ಟು ಹೋದವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಈ ಭಾರಿ ಪಂಜಾಬ್ ಮೂಲದ ಪಕ್ಷಗಳಿಂದ ಯಾವುದೇ ಭಯ ಇಲ್ಲದಾಗಿದೆ. ಕಾರಣ ಪಂಜಾಬ್‌ನಲ್ಲಿ ಎಎಪಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ಅಧಿಕಾರ ಚುಕ್ಕಾಣೆ ಹಿಡಿದಿದೆ. ಅಲ್ಲಿ ಸ್ಥಳೀಯ ಪಕ್ಷಗಳು ಚುನಾವಣೆ ಹೊತ್ತಲ್ಲಿ ಒಲವು ತೋರಿದ್ದೇ ಆ ಬಗ್ಗೆ ಯೋಚಿಸಬಹುದು ಎಂದು ಪವಾರ್ ತಿಳಿಸಿದರು.
ಪ್ರಧಾನಿ ಅಭ್ಯರ್ಥಿ ರೇಸಿನಲ್ಲಿ ಕೇಜ್ರಿವಾಲ್ ಹೆಸರು
ಎಎಪಿ ರಾಷ್ಟ್ರೀಯ ವಕ್ತಾರ ಪ್ರಿಯಾಂಕಾ ಕಕ್ಕರ್ ಅವರು ಅರವಿಂದ್ ಕೇಜ್ರಿವಾಲ್ ಅವರು ಇಂಡಿಯಾ ಬಣದ ಪ್ರಧಾನಿ ಮಂತ್ರಿ ಅಭ್ಯರ್ಥಿ ಆಗಬೇಕು. ಬಿಜೆಪಿ ವಿರುದ್ಧ ಭಾರತ ದೇಶದ ರಕ್ಷಣೆಗೆ ಮೈತ್ರಿಕೂಟದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಇದ್ದಾರೆ ಎಂದರು.
ಕೇಜ್ರಿವಾಲ್ ಪ್ರಧಾನಿ ಅಭ್ಯರ್ಥಿ ಎಂಬುದು ಅವರ ಅಭಿಪ್ರಾಯವಾಗಿರಬಹುದು. ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ರೇಸ್‌ನ ಭಾಗವಾಗಿಲ್ಲ. ಎಎಪಿ ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ ಎಂದು ದೆಹಲಿ ಸಚಿವ ಅತಿಶಿ ತಿಳಿಸಿದರು.












Click it and Unblock the Notifications