• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾವೈರಸ್ ಕಥೆ: ಕರ್ನಾಟಕ ಸೇರಿದಂತೆ 7 ರಾಜ್ಯಗಳ ಸ್ಥಿತಿ ಹೀಗೇಕೆ?

|

ನವದೆಹಲಿ, ಮಾರ್ಚ್ 01: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿಲ್ಲ ಎನ್ನುವುದು ಇತ್ತೀಚಿನ ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪ್ರತಿನಿತ್ಯ 15 ಸಾವಿರಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ದೇಶಾದ್ಯಂತ ಕೊರೊನಾವೈರಸ್ ಲಸಿಕೆಯ ಎರಡನೇ ಅಭಿಯಾನ ಮಾರ್ಚ್.01ರಿಂದ ಆರಂಭವಾಗಿದೆ. ಇನ್ನೊಂದು ಕಡೆಯಲ್ಲಿ ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಕೆ ಮುಂದುವರಿದಿದೆ.

ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ: ಆದರೆ ವಿರೋಧ ಪಕ್ಷದವರು ಯಾಕೆ ಹೀಗೆ?

ಕಳೆದ ವಾರ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಿತ್ತು. ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ 100ಕ್ಕಿಂತ ಹೆಚ್ಚಾಗಿತ್ತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಕುರಿತು ನೀಡಿರುವ ವರದಿಯ ಮಾಹಿತಿ ಇಲ್ಲಿದೆ ನೋಡಿ.

 ದೇಶದಲ್ಲಿ ಕೊರೊನಾವೈರಸ್ ಕುರಿತು ಮಾಹಿತಿ

ದೇಶದಲ್ಲಿ ಕೊರೊನಾವೈರಸ್ ಕುರಿತು ಮಾಹಿತಿ

ಭಾರತದಲ್ಲಿ ಒಂದೇ ದಿನ 15510 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,10,96,731ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 106 ಜನರು ಮಹಾಮಾರಿಗೆ ಪ್ರಾಣ ಬಿಟ್ಟಿದ್ದರೆ, ಒಟ್ಟು ಸಾವಿನ ಸಂಖ್ಯೆ 1,57,157ಕ್ಕೆ ಏರಿಕೆಯಾಗಿದೆ. ಇನ್ನು, ಒಂದು ದಿನದಲ್ಲಿ 11,288 ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಈವರೆಗೂ 1,07,86,457 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ ಒಟ್ಟು 1,68,627 ಸಕ್ರಿಯ ಕೊವಿಡ್-19 ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 24 ಗಂಟೆಗಳಲ್ಲಿ 6 ರಾಜ್ಯಗಳಲ್ಲೇ ಅತಿಹೆಚ್ಚು ಕೇಸ್

24 ಗಂಟೆಗಳಲ್ಲಿ 6 ರಾಜ್ಯಗಳಲ್ಲೇ ಅತಿಹೆಚ್ಚು ಕೇಸ್

ಭಾರತದಲ್ಲಿ ಒಂದೇ ದಿನ ಪತ್ತೆಯಾದ ಒಟ್ಟು 15510 ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ಶೇ.87ರಷ್ಟು ಸೋಂಕಿತ ಪ್ರಕರಣಗಳು ದೇಶದ ಆರು ರಾಜ್ಯಗಳಿಗೆ ಸೇರಿವೆ. ಮಹಾರಾಷ್ಟ್ರ - 8293, ಕೇರಳ - 3254, ಪಂಜಾಬ್ - 579, ಕರ್ನಾಟಕ - 521, ತಮಿಳುನಾಡು - 479 ಮತ್ತು ಗುಜರಾತ್ - 407 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ.

 ದೇಶದ 5 ರಾಜ್ಯಗಳಲ್ಲೇ ಶೇ.84ರಷ್ಟು ಸಕ್ರಿಯ ಪ್ಪಕರಣ

ದೇಶದ 5 ರಾಜ್ಯಗಳಲ್ಲೇ ಶೇ.84ರಷ್ಟು ಸಕ್ರಿಯ ಪ್ಪಕರಣ

ಭಾರತದಲ್ಲಿ ಒಟ್ಟು 168627 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಶೇ.84ರಷ್ಟು ಸಕ್ರಿಯ ಪ್ರಕರಣಗಳು ದೇಶದ ಆರು ರಾಜ್ಯಗಳಲ್ಲೇ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಶೇ.46.39, ಕೇರಳದಲ್ಲಿ 29.49, ಕರ್ನಾಟಕದಲ್ಲಿ 3.45, ಪಂಜಾಬ್ ನಲ್ಲಿ 2.75 ಮತ್ತು ತಮಿಳುನಾಡಿನಲ್ಲಿ 2.39ರಷ್ಟು ಸಕ್ರಿಯ ಕೊವಿಡ್-19 ಪ್ರಕರಣಗಳಿವೆ. ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.15.52ರಷ್ಟು ಸಕ್ರಿಯ ಪ್ರಕರಣಗಳಿವೆ.

 ದೇಶದ 15 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊವಿಡ್-19

ದೇಶದ 15 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊವಿಡ್-19

ಭಾರತದ 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1000ಕ್ಕಿಂತ ಅಧಿಕ ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಮಹಾರಾಷ್ಟ್ರ ಮತ್ತು ಕೇರಳದಲ್ಲಿ 10,000ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಹರಿಯಾಣ, ರಾಜಸ್ಥಾನ, ದೆಹಲಿ, ಅಸ್ಸಾಂ, ತೆಲಂಗಾಣ, ಉತ್ತರ ಪ್ರದೇಶ, ಗುಜರಾತ್, ಛತ್ತೀಸ್ ಗಢ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಪಂಜಾಬ್, ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ 1000ಕ್ಕಿಂತ ಹೆಚ್ಚು ಕೊವಿಡ್-19 ಪ್ರಕರಣಗಳಿವೆ.

 6 ರಾಜ್ಯಗಳಲ್ಲಿ ಶೇ.85ರಷ್ಟು ಸೋಂಕಿತರು ಗುಣಮುಖ

6 ರಾಜ್ಯಗಳಲ್ಲಿ ಶೇ.85ರಷ್ಟು ಸೋಂಕಿತರು ಗುಣಮುಖ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ನಿಂದ ಗುಣಮುಖರಾದ ಒಟ್ಟು 11,288 ಪ್ರಕರಣಗಳಲ್ಲಿ ಶೇ.85ರಷ್ಟು ಪ್ರಕರಣಗಳು ಆರು ರಾಜ್ಯಗಳಲ್ಲಿ ವರದಿಯಾಗಿವೆ. ಕೇರಳ - 4,333, ಮಹಾರಾಷ್ಟ್ರ - 3753, ತಮಿಳುನಾಡು 490, ಪಂಜಾಬ್ - 376, ಕರ್ನಾಟಕ - 350 ಮತ್ತು ಗುಜರಾತ್ - 301 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಈವರೆಗೂ 1,07,86,457 ಸೋಂಕಿತರು ಗುಣಮುಖರಾಗಿದ್ದಾರೆ.

 ಐದು ರಾಜ್ಯಗಳಲ್ಲಿ ಶೇ.87ರಷ್ಟು ಸಾವಿನ ಪ್ರಕರಣ

ಐದು ರಾಜ್ಯಗಳಲ್ಲಿ ಶೇ.87ರಷ್ಟು ಸಾವಿನ ಪ್ರಕರಣ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 106 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ದೇಶದ ಐದು ರಾಜ್ಯಗಳಲ್ಲೇ ಶೇ.87ರಷ್ಟು ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ - 62, ಕೇರಳ - 15, ಪಂಜಾಬ್ -7, ಕರ್ನಾಟಕ -5, ತಮಿಳುನಾಡು - 3 ಜನರು ಮೃತಪಟ್ಟಿದ್ದಾರೆ. ಕೊವಿಡ್-19 ಮಹಾಮಾರಿಗೆ ಈವರೆಗೂ 1,57,157 ಜನರು ಬಲಿಯಾಗಿದ್ದಾರೆ.

English summary
India: 7 States Continue To Report An Upsurge In Coronavirus Daily New Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X