ಜೂನ್ 18ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

Recommended Video

      ಜೂನ್ 18ರಿಂದ ದೇಶದಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ | Oneindia Kannada

      ಬೆಂಗಳೂರು, ಜೂನ್ 18: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತು ಥರ್ಡ್ ಪಾರ್ಟಿ ವಿಮೆ ಕಂತು ಹೆಚ್ಚಳ ವಿರೋಧಿಸಿ ಲಾರಿ ಮಾಲೀಕರ ಸಂಘ ದೇಶದಾದ್ಯಂತ ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡಿದೆ.

      ಇಂಧನ ಬೆಲೆ ಏರಿಕೆ ಮತ್ತು ವಿಮೆ ಕಂತು ಹೆಚ್ಚಳದಿಂದಾಗಿ ಲಾರಿ ಮಾಲೀಕರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಇಂಧನ ಬೆಲೆ ಇಳಿಕೆ ಮಾಡಬೇಕು ಹಾಗೂ ಥರ್ಡ್ ಪಾರ್ಟಿ ವಿಮೆಯ ಕಂತು ಕಡಿಮೆ ಮಾಡಬೇಕು ಎಂದು ಲಾರಿ ಮಾಲೀಕರು ಒತ್ತಾಯಿಸಿದ್ದಾರೆ.

      ಲಾರಿ ಮುಷ್ಕರದಿಂದಾಗಿ ಲಕ್ಷಾಂತರ ಲಾರಿಗಳ ಓಡಾಟ ಸ್ಥಗಿತಗೊಂಡಿದೆ. ಪೆಟ್ರೋಲ್, ಡೀಸೆಲ್ ಸರಬರಾಜು, ಮರಳು, ಇನ್ನಿತರೆ ವಸ್ತುಗಳ ಸರಬರಾಜು ಲಾರಿಗಳು ಓಡಾಟ ಸ್ಥಗಿತಗೊಳಿಸಿವೆ.

      Indefinite lorry strike all over India from June 18

      ಔಷದ, ಹಾಲು, ತರಕಾರಿ ಸೇರಿ ಕೆಲವೇ ದಿನಬಳಕೆ ಸರಕುಗಳನ್ನು ಸಾಗಾಟ ಮಾಡುವ ಲಾರಿಗಳು ಮಾತ್ರವೇ ರಸ್ತೆಗಿಳಿಯಲಿವೆ ಎಂದು ಲಾರಿ ಮಾಲೀಕರ ಸಂಘ ಹೇಳಿದೆ.

      ಇಂಧನ ಇಳಿಕೆ, ವಿಮೆ ಕಂತು ಇಳಿಕೆ ಸೇರಿ ಇನ್ನೂ ಕೆಲವು ಬೇಡಿಕೆಗಳನ್ನು ಲಾರಿ ಮಾಲೀಕರ ಸಂಘವು ಸರ್ಕಾರದ ಮುಂದೆ ಇಟ್ಟಿತ್ತು ಆದರೆ ಕೇಂದ್ರವು ಇದರ ಬಗ್ಗೆ ಯಾವುದೇ ನಿರ್ಣಯ ತಳೆದಿಲ್ಲ ಹಾಗಾಗಿ ಮುಷ್ಕರದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+