ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಗೂಲಿ ಕಾರ್ಮಿಕನಿಗೆ ₹14 ಕೋಟಿ ಪಾವತಿಸುವಂತೆ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

|
Google Oneindia Kannada News

ಪಟ್ನಾ, ಡಿಸೆಂಬರ್‌ 20: ಬಿಹಾರ ಮೂಲದ ದಿನಗೂಲಿ ಕಾರ್ಮಿಕನೋರ್ವನಿಗೆ ಆದಾಯ ತೆರಿಗೆ ಇಲಾಖೆಯು 14 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸುವಂತೆ ನೋಟಿಸ್ ನೀಡಿರುವ ಘಟನೆ ಅಚ್ಚರಿಗೆ ಕಾರಣವಾಗಿದೆ.

'ತಿಂಗಳಿಗೆ 12,000 ರೂಪಾಯಿ ಆದಾಯ ಗಳಿಸಲು ದಿನವಿಡೀ ಹೆಣಗಾಡುತ್ತಿರುವೆ. ಈ ಸಂದರ್ಭದಲ್ಲಿ ತೆರಿಗೆ ಇಲಾಖೆಯ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ' ಎಂದು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.

ಆದಾಯ ಸಂಗ್ರಹದಲ್ಲಿ ನೈಋತ್ಯ ರೈಲ್ವೆ ಹೊಸ ದಾಖಲೆ ನಿರ್ಮಾಣ, ಸಂಪೂರ್ಣ ವಿವರ ಇಲ್ಲಿದೆ ಆದಾಯ ಸಂಗ್ರಹದಲ್ಲಿ ನೈಋತ್ಯ ರೈಲ್ವೆ ಹೊಸ ದಾಖಲೆ ನಿರ್ಮಾಣ, ಸಂಪೂರ್ಣ ವಿವರ ಇಲ್ಲಿದೆ

ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಕುಟುಂಬದೊಂದಿಗೆ ವಾಸವಾಗಿರುವ ಮನೋಜ್ ಯಾದವ್ ಎಂಬುವವರಿಗೆ ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ.

Income Tax Department serves Rs 14 crore notice to Bihar labourer

ಈ ಸುದ್ದಿಯನ್ನು ಕೇಳಿದ ನಂತರ ಯಾದವ್ ಮತ್ತು ಅವರ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ನಾನು ದಿನಗೂಲಿ ಕಾರ್ಮಿಕನಾಗಿದ್ದು, ತಿಂಗಳಿಗೆ 12,000 ರೂಪಾಯಿ ಆದಾಯ ಗಳಿಸಲು ದಿನವಿಡೀ ಹೆಣಗಾಡುತ್ತಿರುವೆ. ಈ ಸಂದರ್ಭದಲ್ಲಿ ತೆರಿಗೆ ಇಲಾಖೆಯ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಮನೋಜ್ ಯಾದವ್ ಅವರು ದೆಹಲಿ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆದರೆ 2020ರಲ್ಲಿ ಕೋವಿಡ್ ಲಾಕ್‌ಡೌನ್ ನಂತರ ಬಿಹಾರದ ತಮ್ಮ ಮನೆಗೆ ಮರಳಿದ್ದರು. ಈ ಸಮಯದಲ್ಲಿ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ಖಾಸಗಿ ಸಂಸ್ಥೆಗಳು ಮನೋಜ್ ಯಾದವ್ ಹೆಸರನ್ನು ದುರುಪಯೋಗ ಪಡಿಸಿಕೊಂಡಿವೆ ಎಂದು ಅವರು ಆರೋಪಿಸಿದ್ದಾರೆ.

ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ, ಅವರು ತಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳ ನಕಲು ಪ್ರತಿಗಳನ್ನು ತೆಗೆದುಕೊಂಡಿದ್ದರು. ನನ್ನ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ವಹಿವಾಟು ನಡೆಸಿದ್ದಾರೆ. ತನ್ನ ಸಂಪೂರ್ಣ ಆಸ್ತಿಯನ್ನು ಹಲವಾರು ಬಾರಿ ಮಾರಾಟ ಮಾಡಿದರೂ ಕೋಟ್ಯಾಂತರ ರೂಪಾಯಿ ತರಿಗೆಯನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಮನೋಜ್ ಯಾದವ್ ನೋಟಿಸ್ ನೀಡಲು ಬಂದಿದ್ದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Income Tax Department serves Rs 14 crore notice to Bihar labourer

14 ಕೋಟಿ ರೂಪಾಯಿ ತೆರಿಗೆ ಯಾಕೆ?

ಮನೋಜ್ ಯಾದವ್ ಅವರ ಬ್ಯಾಂಕ್ ದಾಖಲೆಗಳು ಕೋಟ್ಯಂತರ ರೂಪಾಯಿ ವಹಿವಾಟುಗಳನ್ನು ಮಾಡಿರುವುದನ್ನು ತೋರಿಸಿದೆ. ಇದರಿಂದಾಗಿ ಅವರು ಆದಾಯ ತೆರಿಗೆ ಪಾವತಿಸಬೇಕು ಎಂದು ಪ್ರಧಾನ ಕಚೇರಿಯಿಂದ ನೋಟಿಸ್ ನೀಡಲಾಗಿದೆ ಎಂದು ಸಸಾರಾಮ್ ವಿಭಾಗದ ಆದಾಯ ತೆರಿಗೆ ಅಧಿಕಾರಿ (ಐಟಿಒ) ಸತ್ಯಭೂಷಣ್ ಪ್ರಸಾದ್ ಹೇಳಿದ್ದಾರೆ.

ನೋಟಿಸ್ ಹಿಡಿದು ಬಂದಿದ್ದ ಅಧಿಕಾರಿಗಳಿಗೇ ಶಾಕ್‌

ಕಳೆದ ಶನಿವಾರದಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನೋಟಿಸ್ ಹಿಡಿದು ಮನೋಜ್ ಅವರ ಮನೆಗೆ ಆಗಮಿಸಿದ್ದರು. ಆಗ ಮನೋಜ್ ಯಾದವ್ ಅವರ ಜೋಪಡಿ ಮನೆಯನ್ನು ನೋಡಿದ ಅಧಿಕಾರಿಗಳು ಕ್ಷಣಕಾಲ ದಂಗಾಗಿ ಹೋಗಿದ್ದರು. ಮನೋಜ್ ಕುಮಾರ್ ಬ್ಯಾಂಕಿನ ವಹಿವಾಟಿಗೂ ಮತ್ತು ಅವರ ಜೀವನ ಶೈಲಿಗೂ ಯಾವುದೇ ಹೋಲಿಕೆಗಳು ಸಾಧ್ಯವಾಗದೇ ಇದ್ದಾಗ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.

ಮನೆ ಖಾಲಿ ಮಾಡಿದ ಮನೋಜ್‌ ಯಾದವ್

ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಮನೋಜ್‌ಗೆ ಬಂದೊದಗಿದೆ. 14 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಅಧಿಕಾರಿಗಳು ನೀಡಿರುವ ನೋಟಿಸ್ ಮನೋಜ್‌ಗೆ ದಿಗಿಲುಂಟು ಮಾಡಿದೆ. ಮಧ್ಯರಾತ್ರಿಯೇ ಕುಟುಂಬ ಸಮೇತರಾಗಿ ಮನೋಜ್ ಯಾದವ್‌ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ.

English summary
The Income Tax Department has issued a notice to a Bihar-based daily wage laborer to pay Rs 14 crore in tax which has raised eyebrows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X