ಕಾಳ ಧನಿಕರ ಬೇಟೆಯಿಂದ ಈವರೆಗೆ ಸಿಕ್ಕಿರೋದು ರು. 4,807 ಕೋಟಿ !

Posted By: Chethan
Subscribe to Oneindia Kannada

ನವದೆಹಲಿ, ಜ. 8: ಅಪನಗದೀಕರಣದ ನಂತರ ಆದಾಯ ತೆರಿಗೆ ಇಲಾಖೆಯು ದೇಶಾದ್ಯಂತ ಜ. 5ರವರೆಗೆ ನಡೆಸಿರುವ ಕಾಳ ಧನಿಕರ ಬೇಟೆಯಲ್ಲಿ ಒಟ್ಟು. 4,807 ಕೋಟಿ ರು. ನಗದು ಜಪ್ತಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ಹೇಳಿವೆ. ಇಷ್ಟು ಹಣದಲ್ಲಿ 112 ಕೋಟಿಯಷ್ಟು ಹೊಸ ನೋಟುಗಳಾಗಿವೆ ಎಂದು ಇಲಾಖೆ ತಿಳಿಸಿದೆ.

Income Tax department detects Rs 4,807 cr black income

ಮೂಲಗಳ ಪ್ರಕಾರ, ಈವರೆಗೆ ದೇಶಾದ್ಯಂತ ದಾಳಿ, ಸರ್ವೆ, ತನಿಖೆ ಸೇರಿದಂತೆ ಕಪ್ಪು ಹಣವನ್ನು ಮಟ್ಟಹಾಕಲು 1, 138 ಪ್ರಯತ್ನಗಳನ್ನು ಮಾಡಲಾಗಿದೆ. ಹವಾಲಾ ಮತ್ತಿತರ ದುರ್ಮಾರ್ಗಗಳ ಮೂಲಕ ಹಣ ಸಂಗ್ರಹಿಸಿದವರಿಗೆ ಇಲಾಖೆಯ ವತಿಯಿಂದ 5,148 ನೋಟಿಸ್ ಗಳನ್ನು ರವಾನಿಸಲಾಗಿದೆ. ಇನ್ನು, ಕಾಳಧನಿಕರ ಮೇಲಿನ ದಾಳಿಯ ವೇಳೆ ವಶಪಡಿಸಿಕೊಳ್ಳಲಾಗಿರುವ ಚಿನ್ನಾಭರಣಗಳ ಮೌಲ್ಯ ರು. 97.8 ಕೋಟಿಯಷ್ಟಿದೆ ಎಂದು ಹೇಳಲಾಗಿದೆ.

ಇದರ ಜತೆಯಲ್ಲೇ, ಕಪ್ಪು ಹಣ ದಂಧೆ ಸಂಬಂಧಿಸಿದ 526 ಪ್ರಕರಣಗಳನ್ನು ತೆರಿಗೆ ಇಲಾಖೆಯು ತನ್ನ ಸೋದರ ಸಂಸ್ಥೆಗಳಾದ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯಕ್ಕೆ (ಇಡಿ) ವರ್ಗಾಯಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After demonetisation, Rs 4,807 cr black income detected says Income tax department.
Please Wait while comments are loading...