‘ಲೆನೊವೊ’ ಕಂಪನಿಗೆ ಆದಾಯ ತೆರಿಗೆ ಇಲಾಖೆ ಆಘಾತ? ಮಾಹಿತಿ ತಿಳಿಯಿರಿ
ಭಾರತದಲ್ಲಿ ತನ್ನ ಉತ್ಪನ್ನಗಳ ಮೂಲಕವೇ ಗ್ರಾಹಕರನ್ನು ಸೆಳೆಯುತ್ತಿರುವ 'ಲೆನೊವೊ'ಗೆ ಇಂದು ಐಟಿ ಶಾಕ್ ಸಿಕ್ಕಿದೆ. ಈ ಕುರಿತು ರಾಯಿಟರ್ಸ್ ವರದಿ ಮಾಡಿದ್ದು, 'ಲೆನೊವೊ'ಗೆ ಸೇರಿದ ಉತ್ಪನ್ನಗಳ ಘಟಕಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಚೀನಾ ಮೂಲದ 'ಲೆನೊವೊ' ಸಂಸ್ಥೆಯ ಪುದುಚೆರಿ ಫ್ಯಾಕ್ಟರಿಯು ಸೇರಿದಂತೆ ಕರ್ನಾಟಕ ರಾಜಧಾನಿ ಬೆಂಗಳೂರಿನ ಕಚೇರಿಯಲ್ಲೂ ಪರಿಶೀಲನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಉನ್ನತ ಮೂಲಗಳನ್ನ ಉಲ್ಲೇಖಿಸಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿದ ಸಮಯದಲ್ಲಿ, ಲೆನೊವೊ ಉದ್ಯೋಗಿಗಳ ಲ್ಯಾಪ್‌ಟಾಪ್ ಕೂಡ ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಇಲ್ಲಿವರೆಗೂ ಐಟಿ ಪರಿಶೀಲನೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.

ಉನ್ನತ ಅಧಿಕಾರಿಗಳ ಜೊತೆ ಚರ್ಚೆ?
'ಲೆನೊವೊ' ಸಂಸ್ಥೆ ಚೀನಾ ಮೂಲದ್ದು, ಹೀಗಾಗಿಯೇ ಇದೀಗ ದಿಢೀರ್ ಐಟಿ ಇಲಾಖೆಯ ಈ ದಾಳಿ ಗಮನ ಸೆಳೆದಿದೆ. ಪುದುಚೆರಿ ಫ್ಯಾಕ್ಟರಿ ಸೇರಿದಂತೆ ಬೆಂಗಳೂರಿನ ಕಚೇರಿಯಲ್ಲೂ ಪರಿಶೀಲನೆ ನಡೆಸಿದ ನಂತರ, ಸಂಸ್ಥೆಯ ಉನ್ನತ ಅಧಿಕಾರಿಗಳ ಜೊತೆ ತನಿಖೆ ಭಾಗವಾಗಿ ಸಂಪರ್ಕಿಸಲು ಯತ್ನಿಸಲಾಗಿದೆ ಎನ್ನಲಾಗಿದೆ. ಹಾಗೇ ಸಂಸ್ಥೆಯ ಅಧಿಕಾರಿಗಳು ಕೂಡ ಈ ತನಿಖೆಗೆ ಸಹಕರಿಸಿದ್ದು, ಐಟಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ತೆರಳಿದ್ದಾರೆಂದು ವರದಿಯಾಗಿದೆ.
ಭಾರತದಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ತಯಾರಿಸುವ 'ಲೆನೊವೊ' ಸಂಸ್ಥೆ ಸಾಕಷ್ಟು ಖ್ಯಾತಿ ಗಳಿಸಿದೆ. ಆದರೆ ಇದೀಗ ದಿಢೀರ್ ಐಟಿ ಅಧಿಕಾರಿಗಳು ಹೀಗೆ 'ಲೆನೊವೊ' ಸಂಸ್ಥೆಯಲ್ಲಿ ಪರಿಶೀಲನೆ ನಡೆಸಿರುವುದು ಏಕೆ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ 'ಲೆನೊವೊ' ಸಂಸ್ಥೆ ಅಧಿಕಾರಿಗಳು ಐಟಿ ಅಧಿಕಾರಿಗಳ ಭೇಟಿ ವೇಳೆ ಅಗತ್ಯ ಇರುವ ದಾಖಲೆಗಳನ್ನ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಸಂಪೂರ್ಣ ಮಾಹಿತಿ ಹೊರಬೀಳಬೇಕಿದೆ.












Click it and Unblock the Notifications