ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾದ ಹತ್ತು ಶ್ರೀಮಂತ ಕುಟುಂಬ, ಅದರಲ್ಲಿ ನಮ್ಮವರು ನಾಲ್ವರು

|
Google Oneindia Kannada News

ನ್ಯೂಯಾರ್ಕ್ ಮೂಲದ ಖಾಸಗಿ ಮಾಲೀಕತ್ವದ ಪ್ರಕಾಶನ, ನಿಯತಕಾಲಿಕ ಮತ್ತು ಮಾಧ್ಯಮ ಸಂಸ್ಥೆ ಫೋರ್ಬ್ಸ್, ಏಷ್ಯಾ ಖಂಡದ ಐವತ್ತು ಶ್ರೀಮಂತ ಉದ್ಯಮಿ ಕುಟುಂಬಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಐವತ್ತರ ಪಟ್ಟಿಯಲ್ಲಿನ ಟಾಪ್ ಟೆನ್ ಕುಬೇರ ಕುಟುಂಬಗಳ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಇದ್ದಾರೆನ್ನುವುದು ವಿಶೇಷ. ಐವತ್ತರ ಪಟ್ಟಿಯಲ್ಲಿ ಅರ್ಧದಷ್ಟು ಉದ್ಯಮಿಗಳು ಚೀನಾದವರು.

ಆಗಸ್ಟ್ ತಿಂಗಳಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿತ್ತು. ಪಟ್ಟಿಯಲ್ಲಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಹಾಗೂ ಎಚ್ ಸಿಎಲ್ ಸಂಸ್ಥಾಪಕ ಶಿವ ನಡಾರ್ ಸ್ಥಾನ ಪಡೆದಿದ್ದರು. (ಫೋರ್ಬ್ಸ್ ಶ್ರೀಮಂತ ಕ್ರೀಡಾಪಟು ಪಟ್ಟಿಯಲ್ಲಿ ಧೋನಿ)

ಇದಾದ ನಂತರ ಅಕ್ಟೋಬರ್ ಮೊದಲ ವಾರದಲ್ಲಿ ಭಾರತದ ನೂರು ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿತ್ತು.

ಈ ಪಟ್ಟಿಯಲ್ಲಿ ರಂಜನ್ ಪೈ, ಅಜೀಂ ಪ್ರೇಂಜಿ, ನಾರಾಯಣಮೂರ್ತಿ, ರಾಜೇಶ್ ಮೆಹ್ತಾ, ಬಿ ಆರ್ ಶೆಟ್ಟಿ, ನಂದನ್ ನೀಲೇಕಣಿ, ಕ್ರಿಸ್ ಗೋಪಾಲಕೃಷ್ಣ ಸೇರಿದಂತೆ ಹತ್ತು ಜನ ಕರ್ನಾಟಕದವರು ಸ್ಥಾನ ಪಡೆದಿದ್ದರು.

ಈಗ ಫೋರ್ಬ್ಸ್ ಮೊಟ್ಟ ಮೊದಲ ಬಾರಿಗೆ ಬಿಡುಗಡೆ ಮಾಡಿದ ಏಷ್ಯಾದ ಹತ್ತು ಶ್ರೀಮಂತ ವಂಶಪಾರಂಪರ್ಯ ಉದ್ಯಮಿ ಕುಟುಂಬಗಳು ಯಾವುವು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. (ಚಿತ್ರ ಮತ್ತು ಮಾಹಿತಿ : ಫೋರ್ಬ್ಸ್)

ಮೊದಲನೇ ಸ್ಥಾನ

ಮೊದಲನೇ ಸ್ಥಾನ

ಸ್ಯಾಮ್ ಸಂಗ್ ಗ್ರೂಪಿನ ದಕ್ಷಿಣಕೊರಿಯಾದ ಲೀ ಕುಟುಂಬ. ಈ ಕುಟುಂಬದ ಒಟ್ಟಾರೆ ಆಸ್ತಿ 26.6 ಬಿಲಿಯನ್ ಅಮೆರಿಕನ್ ಡಾಲರ್. ಭಾರತೀಯ ಮೌಲ್ಯದ ಪ್ರಕಾರ ಸುಮಾರು 1.72 ಲಕ್ಷ ಕೋಟಿ.

ಎರಡನೇ ಸ್ಥಾನ

ಎರಡನೇ ಸ್ಥಾನ

ಚೀನಾದಿಂದ ಹಾಂಕಾಂಗಿಗೆ ವಲಸೆ ಹೋದ ಹೆಂಡರ್ಸನ್ ಡೆವಲಪ್ಮೆಂಟ್ ಸಂಸ್ಥೆಯ ಲೀ ಶೌಕೀ ಕುಟುಂಬದ ಆಸ್ತಿ 24.1 ಬಿಲಿಯನ್ ಅಮೆರಿಕನ್ ಡಾಲರ್ ( ಅಂದಾಜು 1.56 ಲಕ್ಷ ಕೋಟಿ ರೂಪಾಯಿ)

ಮೂರನೇ ಸ್ಥಾನ

ಮೂರನೇ ಸ್ಥಾನ

ರಿಲಯನ್ಸ್ ಗ್ರೂಪಿನ ಅಂಬಾನಿ ಕುಟುಂಬದ ಒಟ್ಟು ಆಸ್ತಿ 21.5 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1.39 ಲಕ್ಷ ಕೋಟಿ ರೂಪಾಯಿ)

ನಾಲ್ಕನೇ ಸ್ಥಾನ

ನಾಲ್ಕನೇ ಸ್ಥಾನ

ಸಿಪಿ ಗ್ರೂಪಿನ ಚೆರವಾನಂಟ್ ಕುಟುಂಬ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಕುಟುಂಬದ ಆಸ್ತಿ 19.9 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1.28 ಲಕ್ಷ ಕೋಟಿ ರೂಪಾಯಿ)

ಐದನೇ ಸ್ಥಾನ

ಐದನೇ ಸ್ಥಾನ

ಕ್ವಾಕ್ ಪ್ರಾಪರ್ಟೀಸ್ ಗ್ರೂಪಿನ ಕ್ವಾಕ್ ಕುಟುಂಬದ ಒಟ್ಟಾರೆ ಆಸ್ತಿ 19.5 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1.26 ಲಕ್ಷ ಕೋಟಿ ರೂಪಾಯಿ)

ಆರನೇ ಸ್ಥಾನ

ಆರನೇ ಸ್ಥಾನ

ಸಿಂಗಾಪುರದ ಸಿ ಎಚ್ ಎಲ್ ಗ್ರೂಪಿನ ಕ್ವೆಕ್ ಹಾಂಗ್ ಕುಟುಂಬ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಕುಟುಂಬದ ಒಟ್ಟಾರೆ ಆಸ್ತಿ 18.9 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1.22 ಲಕ್ಷ ಕೋಟಿ ರೂಪಾಯಿ)

ಏಳನೇ ಸ್ಥಾನ

ಏಳನೇ ಸ್ಥಾನ

ವಿಪ್ರೋ ಸಂಸ್ಥೆಯ ಅಜೀಂ ಪ್ರೇಂಜಿ ಕುಟುಂಬ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪ್ರೇಂಜಿ ಕುಟುಂಬದ ಒಟ್ಟಾರೆ ಆಸ್ತಿ 17 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1.10 ಲಕ್ಷ ಕೋಟಿ ರೂಪಾಯಿ)

ಎಂಟನೇ ಸ್ಥಾನ

ಎಂಟನೇ ಸ್ಥಾನ

ಫ್ಯೂಬನ್ ಮತ್ತು ಕ್ಯಾತೆ ಫೈನಾನ್ಸಿಯಲ್ ಗ್ರೂಪಿನ ಥ್ಸಾಯಿ ಕುಟುಂಬ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಈ ಕುಟುಂಬದ ಒಟ್ಟಾರೆ ಆಸ್ತಿ 15.1 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 97.8 ಸಾವಿರ ಕೋಟಿ ರೂಪಾಯಿ)

ಒಂಬತ್ತನೇ ಸ್ಥಾನ

ಒಂಬತ್ತನೇ ಸ್ಥಾನ

ಹಿಂದೂಜಾ ಗ್ರೂಪ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಈ ಕುಟುಂಬದ ಒಟ್ಟಾರೆ ಆಸ್ತಿ 15 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 97.1 ಸಾವಿರ ಕೋಟಿ ರೂಪಾಯಿ)

ಹತ್ತನೇ ಸ್ಥಾನ

ಹತ್ತನೇ ಸ್ಥಾನ

ಶಪೂರ್ಜಿ ಪಲ್ಲೋನ್ಜಿ ಗ್ರೂಪಿನ ಮಿಸ್ತ್ರಿ ಕುಟುಂಬ ಪಟ್ಟಿಯಲ್ಲಿ ಹತ್ತನೇ ಸ್ಥಾನ ಪಡೆದಿದೆ. ಈ ಕುಟುಂಬದ ಒಟ್ಟಾರೆ ಆಸ್ತಿ 14.9 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 96.5 ಸಾವಿರ ಕೋಟಿ ರೂಪಾಯಿ)

English summary
Forbes Asia launched its inaugural ranking of the top 50 Asian business dynasties. South Korea’s Lee family, who controls the Samsung Group, tops the list and four Indians in the top 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X