ಮದ್ಯಪಾನ ಮಾಡುವಾಗ 2 ವಯಾಗ್ರ ಮಾತ್ರೆ ಸೇವಿಸಿ ಸಾವನ್ನಪ್ಪಿದ ವ್ಯಕ್ತಿ- ವರದಿ, ವಿವರ
ಅಪರೂಪದ ಘಟನೆಯೊಂದರಲ್ಲಿ, 41 ವರ್ಷದ ವ್ಯಕ್ತಿಯೊಬ್ಬರು ಮದ್ಯಪಾನ ಮಾಡುವಾಗ ಎರಡು ವಯಾಗ್ರ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ವರದಿ ಓದಿ
ಮುಂಬೈ, ಮಾರ್ಚ್ 07: ಅಪರೂಪದ ಘಟನೆಯೊಂದರಲ್ಲಿ, 41 ವರ್ಷದ ವ್ಯಕ್ತಿಯೊಬ್ಬರು ಮದ್ಯಪಾನ ಮಾಡುವಾಗ ಎರಡು ವಯಾಗ್ರ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ವರದಿಯು ಜರ್ನಲ್ ಆಫ್ ಫೋರೆನ್ಸಿಕ್ ಮತ್ತು ಲೀಗಲ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ. ಇದರ ಅಧ್ಯಯನವನ್ನು ಉಲ್ಲೇಖಿಸಿ news.au.comreported ವರದಿ ಮಾಡಿದೆ.
ಪುರುಷನು ಮಹಿಳಾ ಸ್ನೇಹಿತೆಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದನು. ಅಲ್ಲಿ ಅವನು ವಯಾಗ್ರ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಸಿಲ್ಡೆನಾಫಿಲ್‌ನ ಎರಡು 50mg ಮಾತ್ರೆಗಳನ್ನು ತೆಗೆದುಕೊಂಡಿದ್ದಾನೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಯಾವುದೇ ಗಮನಾರ್ಹ ಆರೋಗ್ಯ ತೊಂದರೆ ಮತ್ತು ಶಸ್ತ್ರಚಿಕಿತ್ಸಾ ಇತಿಹಾಸವನ್ನು ಹೊಂದಿರದ ವ್ಯಕ್ತಿ ಆ ಸಮಯದಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮರುದಿನ ಬೆಳಿಗ್ಗೆ, 41 ವರ್ಷ ವಯಸ್ಸಿನ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತು. ಅವರು ವಾಂತಿ ಮಾಡುತ್ತಿದ್ದರು. ಅವರ ಮಹಿಳಾ ಸ್ನೇಹಿತೆ ವೈದ್ಯಕೀಯ ಸಹಾಯವನ್ನು ಪಡೆಯುವಂತೆ ಒತ್ತಾಯಿಸಿದರು. ಆದಾಗ್ಯೂ, ಅವರು ನಿಷ್ಕಾಳಜಿ ಮಾಡಿದ್ದಾರೆ. ಈ ಹಿಂದೆ ಇದೇ ರೀತಿಯ ರೋಗಲಕ್ಷಣಗಳನ್ನು ಅನುಭವಿಸಿದ್ದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.
ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿದ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ದುರದೃಷ್ಟವಶಾತ್, ಯಾವುದೇ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅಧ್ಯಯನದ ಪ್ರಕಾರ, ವ್ಯಕ್ತಿಯು ಸೆರೆಬ್ರೊವಾಸ್ಕುಲರ್ ರಕ್ತಸ್ರಾವದಿಂದ ಮರಣಹೊಂದಿದ್ದಾರೆ. ಮೆದುಳಿಗೆ ಆಮ್ಲಜನಕದ ಕೊರತೆ ಉಂಟಾದಾಗ ಈ ರೀತಿಯಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

41 ವರ್ಷದ ಪುರುಷ ಮಹಿಳಾ ಸ್ನೇಹಿತೆಯೊಂದಿಗೆ ಹೋಟೆಲ್ ಕೋಣೆಯಲ್ಲಿ ಉಳಿದುಕೊಂಡಿದ್ದರು. ಅವರು ರಾತ್ರಿಯಲ್ಲಿ 2 ಸಿಲ್ಡೆನಾಫಿಲ್ (ತಲಾ 50 ಮಿಗ್ರಾಂ) ಮತ್ತು ಆಲ್ಕೋಹಾಲ್ ಅನ್ನು ಸೇವಿಸಿದ್ದರು. ಮರುದಿನ ಬೆಳಿಗ್ಗೆ ಅವರು ತೊಂದರೆಗೆ ಒಳಗಾದರು. ಆತಂಕದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಎಂದು ವರದಿಯಾಗಿದೆ.
ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು 300 ಗ್ರಾಂ ಹೆಪ್ಪುಗಟ್ಟಿದ ರಕ್ತವನ್ನು ಕಂಡುಕೊಂಡಿದ್ದಾರೆ. ಆಲ್ಕೋಹಾಲ್ ಮತ್ತು ಔಷಧಿಗಳ ಮಿಶ್ರಣ, ಅಧಿಕ ರಕ್ತದೊತ್ತಡವನ್ನು ಉಂಟು ಮಾಡಿದೆ. ಇದೇ ಅವರ ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ತೀರ್ಮಾನಿಸಿದ್ದಾರೆ.
ವೈದ್ಯಕೀಯ ಸಲಹೆಯಿಲ್ಲದೆ ವಯಾಗ್ರದಂತಹ ಮಾತ್ರೆಯನ್ನು ತೆಗೆದುಕೊಳ್ಳಬಾರದು. ಅದರಲ್ಲೂ ಮಧ್ಯಪಾನ ಮಾಡಿದ ನಂತರ ಇಂತಹ ಸಾಹಸಕ್ಕೆ ಯಾರೂ ಕೈಹಾಕಬಾರದು. ಇದರ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಅಪರೂಪದ ಪ್ರಕರಣವನ್ನು ಬಹಿರಂಗ ಪಡಿಸಿರುವುದಾಗಿ ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.












Click it and Unblock the Notifications