ದೇಶ ಕಾಯುವ ವೀರ ಯೋಧರಿಗೆ ರಕ್ಷಾ ಬಂಧನ ಸಂಭ್ರಮ

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 17: ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುವ ರಕ್ಷಾ ಬಂಧನ ಹಬ್ಬಕ್ಕೆ ದೇಶವೇ ಸಜ್ಜಾಗಿದೆ. ದೇಶದ ಗಡಿ ಕಾಯುವ ಸೈನಿಕರಿಗೆ ಮಕ್ಕಳು ರಾಖಿ ಕಟ್ಟಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.

ರಕ್ಷಾ ಬಂಧನವನ್ನು ಆಚರಿಸುವ ರಾಖಿ ಶ್ರಾವಣ ಹುಣ್ಣಿಮೆ ಭಾರತದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ರಾಖಿ ಕಟ್ಟುವುದರ ಜೊತೆಗೆ ಈ ಪೌರ್ಣಮಿಯಂದು ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದು ಸಹ ಕರೆಯುತ್ತಾರೆ. ಈ ಸಮಯದಲ್ಲಿ ಗೋಧಿ ಮತ್ತು ಬಾರ್ಲಿಯನ್ನು ಬಿತ್ತಲಾಗುತ್ತದೆ ಮತ್ತು ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ.[ಸಹೋದರಿಯ ಮನಗೆಲ್ಲಲು ಎಲ್ಲಿಯೂ ಹೋಗಬೇಕಿಲ್ಲ!]

ಪಶ್ಚಿಮ ಭಾರತದಲ್ಲಿ ಇದನ್ನು ನಾರಿಯಲ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಅಂದು ಸಮುದ್ರ ದೇವನಾದ ವರುಣನಿಗೆ ತೆಂಗಿನ ಕಾಯಿಯನ್ನು ಅರ್ಪಿಸಲಾಗುತ್ತದೆ. ಇನ್ನು ದಕ್ಷಿಣ ಭಾರತದಲ್ಲಿ ಇದನ್ನು ಶ್ರಾವಣ ಪೌರ್ಣಮಿಯೆಂದು ಆಚರಿಸಲಾಗುತ್ತದೆ. ಹಬ್ಬದ ಚಿತ್ರಗಳನ್ನು ಮುಂದೆ ನೋಡಿ..(ಪಿಟಿಐ ಚಿತ್ರಗಳು)

ಮಕ್ಕಳ ರಾಖಿ ಹಬ್ಬ

ಮಕ್ಕಳ ರಾಖಿ ಹಬ್ಬ

ಸೂರತ್ ನ ಶಾಲೆಯಲ್ಲಿ ಮಕ್ಕಳು ರಾಖಿ ಹಬ್ಬವನ್ನು ಆಚರಿಸಿದರು.

ಸೈನಿಕರಿಗೆ ವಂದನೆ

ಸೈನಿಕರಿಗೆ ವಂದನೆ

ದೇಶದ ಗಡಿಯನ್ನು ಹಗಲಿರುಳು ಕಾಯುವ ಸೈನಿಕರಿಗೆ ಗೌರವ ಸಲ್ಲಿಕೆ ಮಾಡಿದ ಮಕ್ಕಳು.

ಕೇಂದ್ರ ಸಚಿವೆ

ಕೇಂದ್ರ ಸಚಿವೆ

ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರಮೀತ್ ಕೌರ್ ಸೇನಾಪಡೆಯ ಯೋಧರೊಂದಿಗೆ ಹಬ್ಬ ಆಚರಿಸಿದರು.

ಸೇನೆಯಲ್ಲೂ ಹಬ್ಬ

ಸೇನೆಯಲ್ಲೂ ಹಬ್ಬ

ಮಹಿಳಾ ಸೈನಿಕರು ಭಾರತೀಯ ಸೇನೆಯ ಪುರುಷ ಸೈನಿಕರಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆದುಕೊಂಡರು.

ಪಾಟ್ನಾ

ಪಾಟ್ನಾ

ಬಿಹಾರದ ಪಾಟ್ನಾದಲ್ಲಿ ಮಕ್ಕಳಿಂದ ಪೊಲೀಸ್ ಸಿಬ್ಬಂದಿಗೆ ರಾಖಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Pics: School children tying rakhis on the wrists of BSF jawans during the celebrations of Raksha Bandhan festival at R S Pura in Jammu on Wednesday. Union Minister of Food Processing Industries Harsimrat Kaur Badal celebrating Rakhi with BSF soldiers at Attari- Wagah international border on the eve of Raksha Bandhan festival.
Please Wait while comments are loading...