• search

ಚಿತ್ರಗಳು: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರರಿಗೆ ನಮನ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರರಿಗೆ ನಮನ | Oneindia kannada

    ಬೆಂಗಳೂರು, ಜುಲೈ 26: ಕಾರ್ಗಿಲ್ ಯುದ್ಧದಲ್ಲಿ ಶೌರ್ಯ ಮೆರೆದು ಪ್ರಾಣತೆತ್ತ ಭಾರತದ ಹೆಮ್ಮೆಯ ಕಲಿಗಳ ನೆನಪಿಗಾಗಿ ಜುಲೈ 26ರಂದು ಭಾರತ ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಿದೆ.

    ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣಾ ಗಡಿಯನ್ನು ದಾಟಿ ಭಾರತದೊಳಗೆ ಶತ್ರುಪಡೆ ಪ್ರವೇಶಿಸಿದಾಗ 1999ರ ಮೇ 8ರಂದು ಅಧಿಕೃತವಾಗಿ ಯುದ್ಧ ಆರಂಭವಾಗಿತ್ತು.

    ಕಾರ್ಗಿಲ್ ಯುದ್ಧ: ಅನುಜ್ ಎಂಬ ವೀರ ಯೋಧನ ರೋಮಾಂಚನಕಾರಿ ಸಾಹಸಗಾಥೆ

    ಸತತ ಮೂರು ತಿಂಗಳ ಕಾಲ ನಡೆದ ಯುದ್ಧ ಜು.4ರಂದು, ಟೈಗರ್ ಹಿಲ್ ವಶಕ್ಕೆ ಪಡೆಯುವುದರೊಂದಿಗೆ ಕೊನೆಗೊಂಡಿತ್ತು. ದ್ರಾಸ್ ಪ್ರದೇಶ, ಪೂರ್ವ ಶ್ರೀನಗರದ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಭಾರತೀಯ ಸೇನೆ ಜು.26ರಂದು ಟೈಗರ್ ಹಿಲ್ ಮೇಲೆ ತ್ರಿವರ್ಣ ಧ್ವಜ ಹಾರಿಸಿತ್ತು.

    ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಮಧ್ಯಸ್ಥಿಕೆಯಿಂದಾಗಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರು ಪಾಕಿಸ್ತಾನಿ ಸೇನೆಯನ್ನು ಹಿಂತೆಗೆದುಕೊಂಡಿದ್ದರು.

    ವಿಜಯ್ ದಿವಸ್: ಕಾರ್ಗಿಲ್ ಯುದ್ಧದ ಆ ರೋಚಕ ಕ್ಷಣಕ್ಕೆ 19 ವರ್ಷ

    ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜು.26ರನ್ನು 'ಕಾರ್ಗಿಲ್ ವಿಜಯ್ ದಿವಸ್' ಎಂದು ಷೋಘಿಸಿದರು. ಯುದ್ಧದಲ್ಲಿ ಮಡಿದ 527 ಹುತಾತ್ಮ ಯೋಧರ ನೆನಪಿಗಾಗಿ ಈ ದಿನವನ್ನು ಸಮರ್ಪಿಸಲಾಗಿದೆ. ಯೋಧರ ನೆನಪಿಗಾಗಿ ದ್ರಾಸ್ ನಲ್ಲಿ ಯುದ್ಧ ಸ್ಮಾರಕ ಸ್ಥಾಪಿಸಲಾಗಿದೆ.

    ಭಾರತದ ಹೆಮ್ಮೆಯ ಕಲಿಗಳ ನೆನಪಿನ ದಿನ

    ಭಾರತದ ಹೆಮ್ಮೆಯ ಕಲಿಗಳ ನೆನಪಿನ ದಿನ

    ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಹಾಗೂ ಜಲ ಸೇನೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಅವರ ಜತೆ ಅಮರ್ ಜವಾನ್ ಸ್ಮಾರಕದ ಬಳಿ ಗ್ರೂಪ್ ಫೋಟೊ.

    ಪಾಟ್ನದಲ್ಲಿ ಕಾರ್ಗಿಲ್ ಯೋಧರಿಗೆ ನಮನ

    ಪಾಟ್ನದಲ್ಲಿ ಕಾರ್ಗಿಲ್ ಯೋಧರಿಗೆ ನಮನ

    ಪಾಟ್ನ: ಎನ್ ಸಿ ಸಿ ಕೆಡೆಟ್ ಗಳು ಷಹೀದ್ ಇ ಕಾರ್ಗಿಲ್ ಸ್ಮಾರಕದ ಬಳಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಮನ ಸಲ್ಲಿಸಿದರು.

    ಶ್ವೇತಾಶ್ವ ತಂಡದಿಂದ ಯೋಧರಿಗೆ ನಮನ

    ಶ್ವೇತಾಶ್ವ ತಂಡದಿಂದ ಯೋಧರಿಗೆ ನಮನ

    ನವದೆಹಲಿ : ಭಾರತೀಯ ಸೇನೆಯ ಶ್ವೇತಾಶ್ವ ತಂಡ ಸದಸ್ಯರು ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ಗುಂಪಿನ ಫೋಟೋ ತೆಗೆಸಿಕೊಂಡಿದ್ದು ಹೀಗೆ...

    ನಾಗಪುರದಲ್ಲಿ ಹುತಾತ್ಮರಿಗೆ ನಮನ

    ನಾಗಪುರದಲ್ಲಿ ಹುತಾತ್ಮರಿಗೆ ನಮನ

    ನಾಗಪುರ್ : ಮೇಜರ್ ಜನರಲ್ ರಾಜೇಶ್ ಕುಂದ್ರಾ, ಅವರು 'ಆಪರೇಷನ್ ವಿಜಯ್' ಯಶಸ್ವಿಯಾಗಿ ಪೂರೈಸಿದ ಸವಿನೆನಪಿಗಾಗಿ ಜುಲೈ 26ರಂದು ಆಚರಿಸುವ ಕಾರ್ಗಿಲ್ ವಿಜಯ್ ದಿವಸ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

    ಹುತಾತ್ಮ ಯೋಧರ ಕುಟುಂಬದವರಿಗೆ ಸನ್ಮಾನ

    ಹುತಾತ್ಮ ಯೋಧರ ಕುಟುಂಬದವರಿಗೆ ಸನ್ಮಾನ

    ಜಮ್ಮು : ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರು ಕಾರ್ಗಿಲ್ ಹುತಾತ್ಮರ ಕುಟುಂಬದವರಿಗೆ ಸನ್ಮಾನ ಮಾಡುವ ಮೂಲಕ ಕಾರ್ಗಿಲ್ ವಿಜಯ್ ದಿವಸ ಆಚರಿಸಿದರು.

    ಜಮ್ಮುವಿನಲ್ಲಿ ಯೋಧರಿಗೆ ನಮನ

    ಜಮ್ಮುವಿನಲ್ಲಿ ಯೋಧರಿಗೆ ನಮನ

    ಜಮ್ಮು : ಯುದ್ಧದಲ್ಲಿ ಪ್ರಾಣತೆತ್ತ ವೀರ ಯೋಧರಿಗೆ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಮಿಸಿದ ಯೋಧರು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Top Army officials and families of martyrs were among those who today paid tributes to the brave soldiers who laid down their lives but ensured the country's victory in the Kargil conflict over Pakistan.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more