ಚಿತ್ರಗಳಲ್ಲಿ: ಶಿವರಾತ್ರಿ ಭಜನೆ, ಜಾಗರಣೆ, ಹಬ್ಬದ ಆಚರಣೆ
ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ವೇದ ಮಂತ್ರ ಘೋಷ, ಪೂಜಾಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ದೇಶದೆಲ್ಲೆಡೆ ಆಯೋಜನೆಗೊಂಡಿದೆ. ದೇಶದ ವಿವಿಧೆಡೆಗಳಿಂದ ಬಂದಿರುವ ಚಿತ್ರಗಳನ್ನು ಇಲ್ಲಿ ನೋಡಿ
ಬೆಂಗಳೂರು,
ಫೆಬ್ರವರಿ 24: ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ವೇದ ಮಂತ್ರ ಘೋಷ, ಪೂಜಾಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ಆಯೋಜನೆಗೊಂಡಿದೆ.ಮಾಘ ಕೃಷ್ಣ ತ್ರಯೋದಶಿ ದಿನವಾದ ಇಂದು (ಫೆಬ್ರವರಿ 24, ಶುಕ್ರವಾರ) ದೇಶ ದೆಲ್ಲೆಡೆ ಮಹಾ ಶಿವರಾತ್ರಿ ಭಯ ಭಕ್ತಿಗಳಿಂದ ಆಚರಿಸಲಾಗುತ್ತಿದೆ. id="toptextpromo"> id='are-slot-1' class='oiad oi-axt oiadv'>ಶಿವರಾತ್ರಿಯ
ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಹಗಲು-ರಾತ್ರಿ ನಾಲ್ಕು ಯಾಮದಲ್ಲಿ ಪೂಜಿಸುವುದು ವಾಡಿಕೆ. ಈ ದಿನ ಶಿವನಿಗೆ ಅತ್ಯಂತ ಇಷ್ಟವಾದ ಬಿಲ್ವಪತ್ರೆಯನ್ನು ಅರ್ಪಿಸಿ, ಉಪವಾಸವನ್ನೂ ಆಚರಿಸಲಾಗುತ್ತದೆ. ಭಕ್ತಾದಿಗಳು ರಾತ್ರಿ ಇಡೀ ಎಚ್ಚರವಿದ್ದು ಶಿವ ಜಪ, ಭಜನೆಗಳನ್ನು ಮಾಡುತ್ತಾ ಆ ಪರಶಿವನ ಕೃಪೆಗೆ ಪಾತ್ರರಾಗುತ್ತಾರೆ.
ಶಿವರಾತ್ರಿ ಶುಭ ಸಂದರ್ಭದಲ್ಲಿ ಯೋಗದ ಮಹತ್ವದ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಿದ್ದಾರೆ. ಕೊಯಮತ್ತೂರಿನ ಈಶಾ ಫೌಂಡೇಶನ್ ನಲ್ಲಿಹೇಳಿದ್ದಾರೆ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಮಾಡಿದರು. ಶಿವರಾತ್ರಿ ಸಂದರ್ಭದಲ್ಲಿ ದೇಶದ ವಿವಿಧೆಡೆ ಭಕ್ತರು ಶಿವನನ್ನು ಆರಾಧಿಸಿದ್ದು, ಅಭಿಷೇಕ, ಪೂಜೆ, ಪುನಸ್ಕಾರ, ಭಜನೆ ಸಲ್ಲಿಸಿದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ... id='are-slot-2' class='oiad oi-axt oiadv'>

ಶಿವ ಮಂದಿರದಲ್ಲಿ ವಿಶೇಷ ಪೂಜೆ
ಬೆಂಗಳೂರಿನ ಎಚ್ ಎಎಲ್ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವ ಮಂದಿರದಲ್ಲಿ ವಿಶೇಷ ಪೂಜೆ ಸಾಂಗವಾಗಿ ನಡೆಯುತ್ತಿದೆ. ಚಿತ್ರಗಳ ಕೃಪೆ: PTI

ಕಾಶಿ ವಿಶ್ವನಾಥನ ಸನ್ನಿಧಿ
ವಾರಣಾಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಶುಕ್ರವಾರದಂದು ನಡೆದ ಅಭಿಶೇಕದ ದೃಶ್ಯ.

ಬೀವಾರ್ ನಲ್ಲಿ ಲಿಂಗ ಪೂಜೆ
ರಾಜಸ್ಥಾನದಲ್ಲಿ ಬೀವಾರ್ ನಲ್ಲಿರುವ ಲಿಂಗರೂಪಿ ಪರಮ ಶಿವನಿಗೆ ಅಭಿಶೇಕ, ಪೂಜೆ ಸಲ್ಲಿಸಲಾಯಿತು.

ಚಿಕ್ಕಮಗಳೂರಿನಲ್ಲಿ ಶಿವನ ಪೂಜೆ
ಕರ್ನಾಟಕದ ಚಿಕ್ಕಮಗಳೂರಿನ ಎಂಜಿ ರಸ್ತೆಯಲ್ಲಿ ಶಿವಲಿಂಗದ ಮೆರವಣಿಗೆ ನಡೆದಿದ್ದು ಹೀಗೆ...

ಮಧ್ಯಪ್ರದೇಶದಲ್ಲಿ ಶಿವಪೂಜೆ
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಶಿವನ ಮೆರವಣಿಗೆ ನಡೆಯಿತು.

ರಣಬೀರೇಶ್ವರ್ ನಿಗೆ ಪೂಜೆ
ಜಮ್ಮುವಿನಲ್ಲಿರುವ ಶಿವ ಮಂದಿರದಲ್ಲಿ ರಣಬೀರೇಶ್ವರನಿಗೆ ಪೂಜೆ

ಭೋಪಾಲ್ ನಲ್ಲಿ ಶಿವರಾತ್ರಿ
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪಶುಪತಿನಾಥನ ದೇಗುಲದಲ್ಲಿ ಯುವಭಕ್ತೆಯೊಬ್ಬರು ತಮ್ಮ ಮನವಿಯನ್ನು ದೇವರಿಗೆ ಸಲ್ಲಿಸುತ್ತಿದ್ದಾರೆ.

ಸುಕ್ರೇಶ್ವರ
ಅಸ್ಸಾಂನಲ್ಲಿ ಗುವಾಹಟಿನಲ್ಲಿ ಸುಕ್ರೇಶ್ವರನ ಸನ್ನಿಧಿಯಲ್ಲಿ ಪೂಜೆ ನಡೆಸಲಾಗುತ್ತಿದೆ.

ಶಿವರಾತ್ರಿ
ಅಮೃತ್ ಸರ್ ದಲ್ಲಿ ಶಿವರಾತ್ರಿ ಆಚರಣೆಗಾಗಿ ಸಾಲುಗಟ್ಟಿ ನಿಂತ ಭಕ್ತಾದಿಗಳು.

ಶಿವಪೂಜೆ
ಮೊರದಾಬಾದಿನಲ್ಲಿ ಶಿವಪೂಜೆ












Click it and Unblock the Notifications