ಮಹಾನ್ ವಿರಾಗಿ ಬುದ್ಧನನ್ನು ಸ್ಮರಿಸಿ, ಕೊಂಡಾಡುವ ಸುದಿನ
ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದೆನಿಸಿರುವ ಬುದ್ಧ ಪೂರ್ಣಿಮಾವನ್ನು ಬುಧವಾರದಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಹುಣ್ಣಿಮೆ ದಿನ ಶ್ರದ್ಧಾ ಭಕ್ತಿಗಳಿಂದ ವಿರಾಗಿಯನ್ನು ಸ್ಮರಿಸಲಾಗಿದೆ.
ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದೆನಿಸಿರುವ ಬುದ್ಧ ಪೂರ್ಣಿಮಾವನ್ನು ಬುಧವಾರದಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಹುಣ್ಣಿಮೆ ದಿನ ಶ್ರದ್ಧಾ ಭಕ್ತಿಗಳಿಂದ ವಿರಾಗಿಯನ್ನು ಸ್ಮರಿಸಲಾಗಿದೆ.
ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು ಬುದ್ಧನೆಂದು ಕರೆಯುತ್ತಾರೆ. ಕೆಲವೊಮ್ಮೆ 'ಬುದ್ಧ' ಪದವನ್ನು ಕೇವಲ ಬೌದ್ಧಧರ್ಮದ ಸ್ಥಾಪಕನಾದ ಸಿದ್ದಾರ್ಥ ಗೌತಮನನ್ನು ಸೂಚಿಸಲು ಉಪಯೋಗಿಸಲ್ಪಡುತ್ತದೆ.
ಸಂಶೋಧನೆ,ತಿಳುವಳಿಕೆ,ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು.ಇದುವೇ ಬುದ್ಧ ಧಮ್ಮ. [ಶುಭಸಂಕಲ್ಪ: ಸುಳ್ಳು ಆಪಾದನೆ ಎಂಬ ಮುಳ್ಳು ಚುಚ್ಚಿದರೆ...]
ಹಿಮಾಲಯದ ತಪ್ಪಲಿನಲ್ಲಿ ಬುದ್ಧ ಪೂರ್ಣಿಮಾ ಆಚರಣೆ ವಿಶೇಷ ವಾಗಿರುತ್ತದೆ. ಹಲವೆಡೆ ಸಾಂಪ್ರದಾಯಿಕ ದಿರಿಸುಗಳಲ್ಲಿ ಬೌದ್ಧ ಮತ ಅವಲಂಬಿಗಳು ಸಾಮ್ರಾಣಿ, ಗಂಧ ಧೂಪಗಳನ್ನು ಹಚ್ಚಿ ಪ್ರಾರ್ಥಿಸುತ್ತಾರೆ. ಗುಡ್ಡಗಾಡು ಪ್ರದೇಶ, ಹಿಮಾಲಯದ ತಪ್ಪಲಿನ ಚೈತಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

ಬುದ್ಧನ ಆದರ್ಶದ ಹಾದಿ ಹಿಡಿಯಿರಿ
ಬುದ್ಧ ರಾಜ ವೈಭೋಗ ತ್ಯಜಿಸಿ ವಿರಾಗಿಯಾದ. ಹತ್ಯೆ ಮಾಡಲು ಬಂದವನಲ್ಲಿ ಪ್ರೀತಿ, ಕರುಣೆ ಹುಟ್ಟಿಸಿದ. ಸಂಘಟನೆಯ ಮಹತ್ವವನ್ನು ಜಗತ್ತಿಗೆ ಸಾರಿ ಹೇಳಿದ ಬುದ್ಧನ ಆದರ್ಶದ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ

ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ
ಧ್ಯಾನದ ಬಗ್ಗೆ ಬುದ್ಧ: ನಮ್ಮ ಆಲೋಚನೆ ಲಹರಿ ಸದಾ ಎಲ್ಲೆಡೆ ಹರಿಯುತ್ತಿರುತ್ತದೆ. ಮನಸ್ಸು ಚಂಚಲ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಈ ಆಲೋಚನೆಗಳನ್ನು ತಡೆಹಿಡಿಯುವ ಕ್ರಮವೇ ಧ್ಯಾನ. ಸಂಪೂರ್ಣ ತಡೆ ಹಿಡಿಯಲ್ಪಟ್ಟ ಸ್ಥಿತಿಯೇ ಧ್ಯಾನಾವಸ್ಥೆ' ಎಂದನು ಬುದ್ಧನ ಪ್ರಕಾರ ಧ್ಯಾನ ಎಂದರೆ "ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ".
ಚಿತ್ರ : ಗುವಾಹಟಿಯ ಅಮಿನ್ ಗಾಂವ್ ನಲ್ಲಿ ಬೌದ್ಧ ಭಿಕ್ಷು ಬುದ್ಧವಿಹಾರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ವಿಶ್ವದೆಲ್ಲೆಡೆ ಸಂಭ್ರಮ
ಬೋಧಿ ಮರದ ಕೆಳಗೆ ಬುದ್ಧನಿಗೆ ಜ್ಞಾನೋದಯವಾಗಿದ್ದು ತಿಳಿದಿರಬಹುದು. ಬಿಹಾರದ ಗಯಾದಲ್ಲಿರುವ ಈ ಪವಿತ್ರ ತಾಣಕ್ಕೆ ವಿಯೆಟ್ನಾಂನಿಂದ ಬಂದಿದ್ದ ಭಕ್ತ ಸಮೂಹ.

ಭಿಕ್ಕುಗಳ ಪ್ರವಚನ
ಬೆಳಗ್ಗೆ ಧ್ವಜಾರೋಹಣ, ವಿಶೇಷ ಪ್ರಾರ್ಥನೆ ನಂತರ ಭಿಕ್ಕುಗಳ ಪ್ರವಚನ ಎಲ್ಲೆಡೆ ಕೇಳಿ ಬಂದಿದೆ. ವಿಶ್ವದೆಲ್ಲಡೆ ಈ ಕ್ರಮ ಅನುಸರಿಸಲಾಗುತ್ತದೆ.
ಚಿತ್ರ: ಕೋಲ್ಕತಾದ ಹೌರಾದಲ್ಲಿ ಬುದ್ಧನ ಬೃಹತ್ ಪ್ರತಿಮೆ ಬಳಿ ಭಿಕ್ಕುಗಳಿಂದ ಪ್ರಾರ್ಥನೆ
|
ಶುಭ ಹಾರೈಸಿದ ಸಿದ್ದರಾಮಯ್ಯ
ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಬುದ್ಧಪೂರ್ಣಿಮಾ ಅಂಗವಾಗಿ ನಾಡಿನ ಜನತೆಗೆ ಶುಭ ಹಾರೈಸಿದರು.












Click it and Unblock the Notifications