ಗುರು ಪೂರ್ಣಿಮಾ: ಸನ್ಮಾರ್ಗ ತೋರಿದವರಿಗೆ ನಮೋ ನಮಃ
ಆಷಾಢ ಶುದ್ಧ ಹುಣ್ಣಿಮೆಯ ದಿನವಾದ ಇಂದು ಗುರು ಪೂರ್ಣಿಮಾ ಹಬ್ಬವಾಗಿದ್ದು, ದೇಶದೆಲ್ಲೆಡೆ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಂಭ್ರಮಾಚರಣೆಯನ್ನು ಕಾಣಬಹುದು, ಟೀಚರ್ಸ್ ಡೇ ಆಚರಣೆಗೂ ಭಿನ್ನವಾಗಿದೆ. ಗುರು ಪೂರ್ಣಿಮಾ ದಿನದಂದು ಸನ್ಮಾರ್ಗ ತೋರಿದ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ವಂದಿಸಲಾಗುತ್ತದೆ. ಗುರು ಪೂರ್ಣಿಯಾ ಅಂಗವಾಗಿ ವೈವಿಧ್ಯಮಯ ಟ್ವೀಟ್ ಗಳು ಬಂದಿವೆ.
ಗು" ಎಂದರೆ ಕತ್ತಲು ಅಥವಾ ಅಜ್ಞಾನ , "ರು" ಎಂದರೆ ಕತ್ತಲನ್ನು ತೊಲಗಿಸುವವನು ಎಂದರ್ಥ. ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವನು 'ಗುರು' ಎನಿಸಿಕೊಳ್ಳುತ್ತಾನೆ. ಬೌದ್ಧ ಧರ್ಮಗುರು ಗೌತಮ ಬುದ್ಧ ಹಾಗೂ ಮಹಾಭಾರತದ ಕರ್ತೃ ವೇದವ್ಯಾಸ ಮಹರ್ಷಿ ಇಬ್ಬರು ಇದೇ ದಿನದಂದು ಜನಿಸಿರುವುದು ವಿಶೇಷ.[ಹೀಗಿದ್ದರು ನಮ್ಮ ಎಚ್ಚೆನ್ ಮೇಷ್ಟ್ರು]
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ" ಎಂದು ಪುರಂದಾಸರು ಹೇಳಿದ್ದಾರೆ. ಹೀಗಾಗಿ ಈ ದಿನದಂದು ಹಲವೆಡೆ ಗುರುಕೃಪೆ, ಆಶೀರ್ವಾದ ಬೇಡಿ ಗುರುಗಳೇ ಪ್ರತ್ಯಕ್ಷ ದೈವ ಎಂದು ಪೂಜಿಸುವುದನ್ನು ಕಾಣಬಹುದು.
ಯಾರಿಂದಲೂ ಅಪಹರಿಸಲಾಗದ ಸಂಪತ್ತಾದ 'ವಿದ್ಯೆ' ಯನ್ನು ಧಾರೆ ಎರೆಯುವ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನು ರೂಪಿಸುವ ಕಿಂಗ್ ಮೇಕರ್ ಗಳಾದ ಗುರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಟ್ವಿಟ್ಟರ್ ನಲ್ಲಿ ವಂದನೆ ಸಲ್ಲಿಸಿದ್ದಾರೆ...

ಶಿಕ್ಷಕರಿಗೆ ಕೃತಜ್ಞತೆ ಅರ್ಪಿಸಿದ ವಿದ್ಯಾರ್ಥಿನಿಯರು
ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಸೂರತ್ ನ ಶಾಲೆಯೊಂದರಲ್ಲಿ ಕಂಡ ಬಂದ ದೃಶ್ಯ ಪಿಟಿಐ ಚಿತ್ರ

ಚಾತುರ್ಮಾಸ್ಯ ವ್ರತ ಆರಂಭ ಕಾಲ
ಈ ಗುರು ಪೂರ್ಣಿಮಾ ದಿನದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುವವರಿಗೆ ಇದು ಪ್ರಸಕ್ತ ಕಾಲ.
|
ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಕೆ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಜನತೆಗೆ ಶುಭ ಹಾರೈಕೆ.
|
ಇಕ್ಬಾಲ್ ರಿಂದ ಒಂದು ವಿಶಿಷ್ಟ ರೀತಿ ಗುರುವಂದನೆ
ಇಕ್ಬಾಲ್ ರಿಂದ ಅವರ ಇತಿಹಾಸದ ಪ್ರೊಫೆಸರ್ ವೇಣುಗೋಪಾಲ್ ಅವರಿಗೆ ಒಂದು ವಿಶಿಷ್ಟ ರೀತಿ ಗುರುವಂದನೆ

ಪರಮಶಿವನೇ ಪ್ರಥಮ ಗುರು
ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಚಿತ್ರದಲ್ಲಿ ಚಿಕ್ಕಮಗಳೂರಿನ ಶಾಲೆಯೊಂದರಲ್ಲಿ ಪ್ರತಿ ವರ್ಷ ಕಂಡು ಬರುವ ದೃಶ್ಯ.
|
ರವಿಶಂಕರ್ ಗುರೂಜಿ ಭಕ್ತರಿಂದ ಗುರುವಂದನೆ
ರವಿಶಂಕರ್ ಗುರೂಜಿ ಭಕ್ತರಿಂದ ಗುರುವಂದನೆ, ಗುರುವಿಗೆ ಪ್ರಣಾಮ.
|
ಅಸಾರಾಮ್ ಬಾಪುವನ್ನು ಮರೆಯದ ಭಕ್ತರು
ವಿವಾದಿತ ಗುರು ಅಸಾರಾಮ್ ಬಾಪುವನ್ನು ಮರೆಯದ ಭಕ್ತರು ಗುರುವಿನ ಕೊಡುಗೆಯನ್ನು ಸ್ಮರಿಸುತ್ತಿದ್ದಾರೆ.
|
ಅಮೆರಿಕದಲ್ಲಿ ಪೆರಿಸ್ಕೋಪ್ ಬಳಸಿ ಬ್ಲಾಗಿಂಗ್
ಅಮೆರಿಕದಲ್ಲಿ ಪೆರಿಸ್ಕೋಪ್ ಅಪ್ಲಿಕೇಷನ್ ಬಳಸಿ ಲೈವ್ ಬ್ಲಾಗಿಂಗ್ ಮೂಲಕ ಗುರು ಪೂರ್ಣಿಮಾ ಕಾರ್ಯಕ್ರಮ ಪ್ರಸಾರ.
|
ಅಬ್ದುಲ್ ಕಲಾಂರನ್ನು ಮರೆಯದ ಜನತೆ
ಅಬ್ದುಲ್ ಕಲಾಂರನ್ನು ಮರೆಯದ ಜನತೆ, ನೀವೇ ನಮ್ಮ ಮಹಾನ್ ಗುರು ಎಂದಿದ್ದಾರೆ.












Click it and Unblock the Notifications