ಕುಂಭಮೇಳ: ಉಜ್ಜಯಿನಿ ಕಾಲ್ತುಳಿತದ ದಾರುಣ ಚಿತ್ರಗಳು
ಉಜ್ಜಯಿನಿ, ಮೇ 06: ಮಧ್ಯಪ್ರದೇಶದ ಉಜ್ಜಿಯಿನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭಮೇಳದ ವೇಳೆ ಗಾಳಿ-ಮಳೆ ಪರಿಣಾಮ ಟೆಂಟ್ ಕುಸಿದು ಕಾಲ್ತುಳಿತ ಸಂಭವಿಸಿ 7 ಮಂದಿ ಸಾವನ್ನಪ್ಪಿ, ಸುಮಾರು 70 ಮಂದಿ ಗಾಯಗೊಂಡಿದ್ದಾರೆ.
ಕುಂಭಮೇಳ ನಡೆಯುತ್ತಿರುವ ಉಜ್ಜಿಯಿನಿಯ ಕ್ಷಿಪ್ರಾ ನದಿ ಪ್ರಾಂತ್ಯದಲ್ಲಿ ಗುರುವಾರ ಏಕಾಏಕಿ ಗುಡುಗು ಸಹಿತ ಭಾರೀ ಮಳೆಯುಂಟಾಯಿತು. ಈ ವೇಳೆ ಸಾಧುಗಳು, ಯಾತ್ರಾರ್ಥಿಗಳ ವಾಸಕ್ಕೆಂದು ಹಾಕಲಾಗಿದ್ದ ಭಾರೀ ಟೆಂಟ್ ಕುಸಿಯಿತು. ಇದರಿಂದ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸೇರಿ 6 ಮಂದಿ ಸಾವಿಗೀಡಾದರು.[ಉಜ್ಜಯಿನಿ ಕುಂಭಮೇಳದಲ್ಲಿ ಕಾಲ್ತುಳಿತ: 7 ಸಾವು]

ಕೇರಳದ ಪಟಾಕಿ ಅವಘಡದ ನಂತರ ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ಮತ್ತೊಂದು ದುರಂತ ಇದಾಗಿದೆ. ಕೇರಳದಲ್ಲಿ ಹೊಸ ವರ್ಷಾಚರಣೆ ವೇಳೆ ಪಟಾಕಿ ಗೋಡೌನ್ ಸ್ಫೋಟಗೊಂಡು ನೂರಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಉಜ್ಜಯಿನಿ ದುರಂತದ ಕೆಲ ಚಿತ್ರಗಳು...[ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು]












Click it and Unblock the Notifications