ಗಣತಂತ್ರ ದಿನಕ್ಕಾಗಿ ಕಣ್ಮನ ಸೆಳೆಯುವ ತಯಾರಿ
ನವದೆಹಲಿ, ಜ.23: ಭಾರತದ ಗಣರಾಜ್ಯೋತ್ಸವ ದಿನದಂದು ಪಥ ಸಂಚಲನ ನೋಡುವುದು ಕಣ್ಣಿಗೆ ಹಬ್ಬ. 65ನೇ ಗಣತಂತ್ರ ದಿನಕ್ಕೆ ನವದೆಹಲಿಯಲ್ಲಿ ಭರ್ಜರಿ ತಯಾರಿ ನಡೆದಿದೆ.
65ನೇ ಗಣತಂತ್ರ ದಿನ ಮುಖ್ಯ ಅತಿಥಿಯಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಅವರ ಪತ್ನಿ ಅಕಿ ಅಬೆ ಅವರು ಆಗಮಿಸಿದ್ದಾರೆ. ಜಪಾನ್ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಮಾತುಕತೆಗೂ ಇದರ ಬೆನ್ನಲ್ಲೇ ಚಾಲನೆ ಸಿಗಲಿದೆ.
ಪರೇಡ್ ನೋಡಲು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತರಿರುತ್ತಾರೆ. ದೆಹಲಿಯಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದ್ದು, ಭೂ ಸೇನಾ ಮುಖ್ಯಸ್ಥ ವಿಕ್ರಮ್ ಸಿಂಗ್ ಅವರು ತಾಲೀಮು ನಿರತ ಪಥಸಂಚಲನ ತಂಡಗಳನ್ನು ಭೇಟಿ ಮಾಡಿ ಹುರುಪು ತುಂಬಿದ್ದಾರೆ. ದೆಹಲಿ ಐಜಿಐ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲ್ವೆ ಸ್ಟೇಷನ್, ಬಸ್ ಡಿಪೋ ಗಳಲ್ಲಿ ಕಮಾಂಡೋ ಪಡೆ ಗಸ್ತು ತಿರುಗುತ್ತಿದ್ದಾರೆ.
ಎಲ್ಲಾ ಭದ್ರತೆ, ಆತಂಕದ ನಡುವೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಕೊರೆಯುವ ಚಳಿಯಲ್ಲಿ ತಾಲೀಮು ನಡೆಸುತ್ತಿದ್ದಾರೆ. ಗಣತಂತ್ರದಿನದಂದು ಕಾಣ ಸಿಗುವ ಪಥ ಸಂಚಲನ, ಸ್ತಬ್ದ ಚಿತ್ರಗಳು, ಸಾಂಸ್ಕೃತಿಕ ನೃತ್ಯಗಳ ಚಿತ್ರ ದರ್ಶನ ನಿಮ್ಮ ಮುಂದಿದೆ. ಇನ್ನಷ್ಟು ಚಿತ್ರಗಳು ಗಣರಾಜ್ಯೋತ್ಸವ ಸಂಭ್ರಮದ ನಡುವೆ ನೋಡುವಿರಂತೆ....

ಗಣತಂತ್ರದಿನಕ್ಕಾಗಿ ದೇಶದೆಲ್ಲೆಡೆ ಸಂಭ್ರಮದ ತಯಾರಿ
ಅಲಹಾಬಾದಿನಲ್ಲಿ ಮಾಘ ಮೇಳದ ನಡುವೆ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯಿಂದ ಓಡುತ್ತಿರುವ ದೃಶ್ಯ

ಸ್ವಚ್ಛ ಗಂಗೆ ಅಭಿಯಾನಕ್ಕಾಗಿ ಮ್ಯಾರಾಥಾನ್
ಅಲಹಾಬಾದ್ ನಲ್ಲಿ ಗಣತಂತ್ರದಿನದ ಅಂಗವಾಗಿ National Mission for Clean Gangaಆಯೋಜಿಸಿದ್ದ ಮ್ಯಾರಥಾನ್

ಎನ್ ಸಿಸಿ ಕ್ಯಾಡೆಟ್ಸ್ ಹಾಗೂ ವಾಯುಸೇನೆ ಮುಖ್ಯಸ್ಥ
ತಾಲೀಮಿನ ನಡುವೆ ವಾಯುಸೇನೆ ಮುಖ್ಯಸ್ಥ ಅರುಪ್ ರಹಾ ಹಾಗೂ ಅವರ ಪತ್ನಿ ಜತೆ ಎನ್ ಸಿಸಿ ಕ್ಯಾಡೆಟ್ಸ್ ಹಾಗೂ ಎನ್ ಸಿಸಿ ಡಿಜಿ ಅನಿರುದ್ಧ ಚಕ್ರವರ್ತಿ

ಗಣರಾಜ್ಯೋತ್ಸವ ದಿನಕ್ಕಾಗಿ ಶಾಲಾ ಮಕ್ಕಳು
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಕ್ಕಾಗಿ ಶಾಲಾ ಮಕ್ಕಳು ಹುಲಿವೇಷ ಧರಿಸಿ ತಾಲೀಮು ನಡೆಸಿದ್ದಾರೆ

ಬಿಎಸ್ ಎಫ್ ಡೇರ್ ಡೇವಿಲ್ಸ್ ಗಳ ಪ್ರದರ್ಶನ
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದ ಪಥ ಸಂಚಲನ ಕಾರ್ಯಕ್ರಮಕ್ಕಾಗಿ ಬಿಎಸ್ ಎಫ್ ಡೇರ್ ಡೇವಿಲ್ಸ್ ಗಳು

ಪರೇಡ್ ನಲ್ಲಿ ಜನರಲ್ ವಿಕ್ರಮ್ ಸಿಂಗ್
ಭೂ ಸೇನೆ ಮುಖ್ಯಸ್ಥ ಜನರಲ್ ವಿಕ್ರಮ್ ಸಿಂಗ್ ಅವರು ಎನ್ ಸಿಸಿ ಕ್ಯಾಂಪಿನಲ್ಲಿ ಗೌರವ ಸ್ವೀಕರಿಸುತ್ತಿದ್ದಾರೆ.

ಅರುಣಾಚಲಪ್ರದೇಶದಿಂದ ಬಂದ ಮಕ್ಕಳಿಂದ ನೃತ್ಯ
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಕ್ಕಾಗಿ ರಾಜಪಥದಲ್ಲಿ ಅರುಣಾಚಲಪ್ರದೇಶದಿಂದ ಬಂದ ಶಾಲಾ ಮಕ್ಕಳಿಂದ ಸಾಂಪ್ರದಾಯಿಕ ನೃತ್ಯ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರ
ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ರಾಜ್ಯದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರ

ಅರುಣಾಚಲಪ್ರದೇಶದಿಂದ ಬಂದ ಮಕ್ಕಳಿಂದ ನೃತ್ಯ
ಗಣರಾಜ್ಯೋತ್ಸವ ದಿನಕ್ಕಾಗಿ ಉತ್ತರಾಖಂಡ್ ನ ಸ್ತಬ್ದ ಚಿತ್ರ ನಿರ್ಮಿಸಲು ಬಂದಿರುವ ಕಲಾವಿದೆ

ಗಣತಂತ್ರ ದಿನಕ್ಕೂ ಮುನ್ನ ಜಾಗ್ವರ್ ದುರಂತ
ಗಣರಾಜ್ಯೋತ್ಸವ ದಿನದ ಅಭ್ಯಾಸ ನಿರತ ಜಾಗ್ವರ್ ಯುದ್ಧ ವಿಮಾನ ಬಿಕಾನೇರ್ ನ ಭೋಲಾಸಾರ್ ಗ್ರಾಮದ ಬಳಿ ಉರುಳಿ ಬಿದ್ದಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications