ಚಿತ್ರಗಳು : ಸ್ವಕ್ಷೇತ್ರ ಅಮೇಥಿಯಲ್ಲಿ ರಾಹುಲ್ ಗಾಂಧಿ ಪ್ರವಾಸ
ಅಮೇಥಿ, ಮೇ 18 : 'ನರೇಂದ್ರ ಮೋದಿ ಅವರಿಗೆ ಚೀನಾ, ಮಂಗೋಲಿಯಾ ಪ್ರವಾಸಕ್ಕೆ ತೆರಳಲು ಸಮಯವಿರುತ್ತದೆ. ಆದರೆ, ನಮ್ಮ ದೇಶದಲ್ಲಿರುವ ರೈತರನ್ನು ಭೇಟಿ ಮಾಡಲು ಅವರಿಗೆ ಸಮಯವಿಲ್ಲ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಸೋಮವಾರ ರಾಹುಲ್ ಗಾಂಧಿ ತಮ್ಮ ಸ್ವ ಕ್ಷೇತ್ರ ಉತ್ತರ ಪ್ರದೇಶದ ಅಮೇಥಿಗೆ ಭೇಟಿ ನೀಡಿದ್ದರು. ಎರಡು ತಿಂಗಳಿನಿಂದ ಕ್ಷೇತ್ರದ ಜನರಿಂದ ದೂರವಾಗಿ ಅವರ ಆಕ್ರೋಶಕ್ಕೆ ಕಾರಣವಾಗಿದ್ದ ಅವರು ಮೂರು ದಿನಗಳ ಕಾಲ ಸ್ವ ಕ್ಷೇತ್ರದಲ್ಲಿಯೇ ಸಂಚಾರ ನಡೆಸಿ ಜನರ ಸಂಕಷ್ಟಗಳನ್ನು ಆಲಿಸಲಿದ್ದಾರೆ. [ಕೈ-ಕಮಲದ ನಡುವೆ ಸೂಟು ಬೂಟಿಗೆ ಕಿತ್ತಾಟ]
'ರೈತರ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ ಅವರು, ಸರ್ಕಾರಕ್ಕೆ 10ಕ್ಕೆ 0 ಅಂಕ ಕೊಡುತ್ತೇನೆ. ಅದೇ ಉದ್ಯಮಿಗಳ ಹಿತವನ್ನು ಸರ್ಕಾರ ಕಾಯುತ್ತಿದ್ದು, ವಾಣಿಜ್ಯೋದ್ಯಮಿಗಳ ಪರವಾಗಿ ಸರ್ಕಾರ ಮಾಡಿರುವ ಕೆಲಸಕ್ಕೆ 10ಕ್ಕೆ 10 ಅಂಕ ಕೊಡುತ್ತೇನೆ ಎಂದು ವ್ಯಂಗ್ಯವಾಡಿದರು.
'ಅಮೇಥಿಯಲ್ಲಿನ ಫುಡ್ ಪಾರ್ಕ್ ಸ್ಥಾಪನೆಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರ ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಅಮೇಥಿಯಲ್ಲಿ ಫುಡ್ ಪಾರ್ಕ್ ಸ್ಥಾಪನೆಯಾಗುವ ತನಕ ಹೋರಾಟ ನಡೆಸುತ್ತೇನೆ ಎಂದು ಘೋಷಿಸಿದರುಚಿತ್ರಗಳಲ್ಲಿ ನೋಡಿ ರಾಹುಲ್ ಅಮೇಥಿ ಪ್ರವಾಸ [ಪಿಟಿಐ ಚಿತ್ರಗಳು]

ಸ್ವ ಕ್ಷೇತ್ರಕ್ಕೆ ಬಂದ ರಾಹುಲ್ ಗಾಂಧಿ
ಸೋಮವಾರ ರಾಹುಲ್ ಗಾಂಧಿ ತಮ್ಮ ಸ್ವ ಕ್ಷೇತ್ರ ಉತ್ತರ ಪ್ರದೇಶದ ಅಮೇಥಿಗೆ ಭೇಟಿ ನೀಡಿದ್ದರು. ಎರಡು ತಿಂಗಳಿನಿಂದ ಕ್ಷೇತ್ರದ ಜನರಿಂದ ದೂರವಾಗಿ ಅವರ ಆಕ್ರೋಶಕ್ಕೆ ಕಾರಣವಾಗಿದ್ದ ಅವರು ಮೂರು ದಿನಗಳ ಕಾಲ ಸ್ವ ಕ್ಷೇತ್ರದಲ್ಲಿಯೇ ಸಂಚಾರ ನಡೆಸಿ ಜನರ ಸಂಕಷ್ಟಗಳನ್ನು ಆಲಿಸಲಿದ್ದಾರೆ.

ಮೋದಿಗೆ ರೈತರನ್ನು ಭೇಟಿ ಮಾಡಲು ಸಮಯವಿಲ್ಲ
'ನರೇಂದ್ರ ಮೋದಿ ಅವರಿಗೆ ಚೀನಾ, ಮಂಗೋಲಿಯಾ ಪ್ರವಾಸಕ್ಕೆ ತೆರಳಲು ಸಮಯವಿರುತ್ತದೆ. ಆದರೆ, ನಮ್ಮ ದೇಶದಲ್ಲಿರುವ ರೈತರನ್ನು ಭೇಟಿ ಮಾಡಲು ಅವರಿಗೆ ಸಮಯವಿಲ್ಲ' ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರಕ್ಕೆ 0 ಅಂಕ ಕೊಟ್ಟ ರಾಹುಲ್
'ಅಮೇಥಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರೈತ ವಿರೋಧಿಯಾದ ನರೇಂದ್ರ ಮೋದಿ ಸರ್ಕಾರಕ್ಕೆ 10ಕ್ಕೆ0 ಅಂಕ ನೀಡುತ್ತೇನೆ ಎಂದರು. ಸರ್ಕಾರ ಉದ್ಯಮಿಗಳ ಪರವಾಗಿದೆ, ಉದ್ಯಮಿಗಳ ಪರವಾದ ಕೆಲಸಕ್ಕೆ ಅವರು 10 ಕ್ಕೆ 10 ಅಂಕಗಳಿಸುತ್ತಾರೆ' ಎಂದು ರಾಹುಲ್ ಲೇವಡಿ ಮಾಡಿದರು.

ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ
'ನನ್ನ ಮೇಲಿನ ಕೋಪದಿಂದ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಮೇಥಿಗೆ ಬರಬೇಕಾಗಿದ್ದ ಮೆಗಾ ಫುಡ್‌ಪಾರ್ಕ್ ಯೋಜನೆಯನ್ನು ಕೈಬಿಡಲಾಗಿದೆ. ಅಮೇಥಿಯಲ್ಲಿ ಫುಡ್‌ಪಾರ್ಕ್ ಸ್ಥಾಪನೆ ಮಾಡುವ ತನಕ ಹೋರಾಟ ನಡೆಸುತ್ತೇನೆ' ಎಂದು ಜನರಿಗೆ ರಾಹುಲ್ ಭರವಸೆ ನೀಡಿದರು.

ವಿರಾಮದಲ್ಲಿ ಭೋಜನ ಸವಿದ ಯುವರಾಜ
ರೈತರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ, ವಿರಾಮದ ಸಮಯದಲ್ಲಿ ರಸ್ತೆ ಬದಿಯಲ್ಲಿಯೇ ಭೋಜನ ಸವಿದರು. ಇನ್ನೂ ಎರಡು ದಿನ ರಾಹುಲ್ ಅಮೇಥಿಯಲ್ಲಿ ಸಂಚಾರ ನಡೆಸಲಿದ್ದಾರೆ.

ರೈತರಿಂದ ಫುಡ್‌ಪಾರ್ಕ್ ಕಸಿದುಕೊಂಡಿದೆ
'ಅಮೇಥಿಯಲ್ಲಿ ಫುಡ್‌ಪಾರ್ಕ್ ನಿರ್ಮಾಣಗೊಂಡಿದ್ದರೆ ರೈತರಿಗೆ ನೆರವಾಗುತ್ತಿತ್ತು. ಫುಡ್‌ಪಾರ್ಕ್ ಅನ್ನು ರದ್ದುಗೊಳಿಸುವ ಮೂಲಕ ಮೋದಿ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ಫುಡ್‌ಪಾರ್ಕ್ ಮರಳಿ ಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ' ಎಂದು ರಾಹುಲ್ ಹೇಳಿದರು.












Click it and Unblock the Notifications