ಚಿತ್ರಗಳು : ಗುಜರಾತ್‌ಗೆ ಭೇಟಿ ನೀಡಿದ ರಾಹುಲ್ ಗಾಂಧಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಅಹಮದಾಬಾದ್, ಜುಲೈ 21 : ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಬಗ್ಗೆ ಚರ್ಚೆ ನಡೆಯುವಾಗ ಸಂಸತ್‌ನಲ್ಲಿ ನಿದ್ದೆಗೆ ಜಾರಿ ಸುದ್ದಿ ಮಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಂದು ಗುಜರಾತ್‌ಗೆ ಭೇಟಿ ನೀಡಿದ್ದರು. ಹಲ್ಲೆಗೊಳಗಾದ ದಲಿತ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಗುಜರಾತ್‌ನ ಸೌರಾಷ್ಟ್ರದಲ್ಲಿ ಗೋರಕ್ಷಕ ಸಮಿತಿಯ ಸದಸ್ಯರು ಸತ್ತ ಹಸುವಿನ ಚರ್ಮವನ್ನು ಸಾಗಿಸುತ್ತಿದ್ದ ನಾಲ್ವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಗುಜರಾತ್‌ನಲ್ಲಿ ಬುಧವಾರ ಪ್ರತಿಭಟನೆಗಳು ನಡೆದಿದ್ದವು. ಸಂಸತ್‌ನಲ್ಲಿಯೂ ಈ ವಿಚಾರದ ಬಗ್ಗೆ ಚರ್ಚೆ ನಡೆದಿತ್ತು.[ನಿದ್ದೆ ಮಾಡಿದ ರಾಹುಲ್‌ ಗಾಂಧಿಗೆ ಗುದ್ದು ನೀಡಿದ ಟ್ವಿಟ್ಟರ್]

ಇಂದು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರು, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗಾಯಾಳುಗಳು ತಮ್ಮ ಮೇಲೆ ಆಗಿರುವ ಹಲ್ಲೆಗಳ ಕುರಿತು ರಾಹುಲ್ ಗಾಂಧಿ ಅವರಿಗೆ ವಿವರಣೆ ನೀಡಿದರು. ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.[ಸಂಸತ್ ಕಲಾಪದ ವೇಳೆ 'ಧ್ಯಾನಕ್ಕೆ' ಜಾರಿದ ರಾಹುಲ್ ಗಾಂಧಿ]

ಸಂಸತ್‌ನಲ್ಲಿ ಬುಧವಾರ ಹಲ್ಲೆ ಪ್ರಕರಣದ ಬಗ್ಗೆ ಚರ್ಚೆ ನಡೆಯುವಾಗ ರಾಹುಲ್ ಗಾಂಧಿ ನಿದ್ದೆಗೆ ಜಾರಿದ್ದರು. 'ದಲಿತರಿಗೆ ನ್ಯಾಯ ದೊರಕಿಸಿ ಕೊಡುವ ಉದ್ದೇಶ ರಾಹುಲ್‌ ಗಾಂಧಿ ಅವರಿಗೆ ಇಲ್ಲ. ದಲಿತರಿಗೆ ನ್ಯಾಯ ದೊರಕಿಸಿಕೊಡುವ ಆಸಕ್ತಿ ಅವರಿಗೆ ಇದ್ದಿದ್ದರೆ ನಿದ್ರೆಗೆ ಜಾರುತ್ತಿರಲಿಲ್ಲ' ಎಂದು ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೊಟ್‌ ಟೀಕಿಸಿದ್ದರು. ರಾಹುಲ್ ಗಾಂಧಿ ಗುಜರಾತ್ ಭೇಟಿ ಚಿತ್ರಗಳು.....[ಪಿಟಿಐ ಚಿತ್ರಗಳು]...

ಗುಜರಾತ್‌ಗೆ ರಾಹುಲ್ ಭೇಟಿ

ಗುಜರಾತ್‌ಗೆ ರಾಹುಲ್ ಭೇಟಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಗುಜರಾತ್‌ಗೆ ಭೇಟಿ ನೀಡಿದ್ದರು. ಗೋರಕ್ಷಕ ಸಮಿತಿಯ ಸದಸ್ಯರಿಂದ ಹಲ್ಲೆಗೊಳಗಾದ ದಲಿತ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ದಲಿತರ ಮೇಲೆ ಹಲ್ಲೆ ನಡೆದಿತ್ತು

ದಲಿತರ ಮೇಲೆ ಹಲ್ಲೆ ನಡೆದಿತ್ತು

ಜುಲೈ 11ರಂದು ಗುಜರಾತ್‌ನ ಸೌರಾಷ್ಟ್ರದಲ್ಲಿ ಗೋರಕ್ಷಕ ಸಮಿತಿಯ ಸದಸ್ಯರು ಸತ್ತ ಹಸುವಿನ ಚರ್ಮವನ್ನು ಸಾಗಿಸುತ್ತಿದ್ದ ನಾಲ್ವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ದೇಶಾದ್ಯಂತ ಈ ವಿಚಾರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಮುಖ್ಯಮಂತ್ರಿ ಭೇಟಿ ಮಾಡಿದ್ದರು

ಮುಖ್ಯಮಂತ್ರಿ ಭೇಟಿ ಮಾಡಿದ್ದರು

ಬುಧವಾರ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ದಲಿತ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಕುಟುಂಬಗಳಿಗೆ ಧನಸಹಾಯ ಘೋಷಣೆ ಮಾಡಿದ್ದರು, ಹಲ್ಲೆಗೊಳಗಾದವರಿಗೆ ರಕ್ಷಣೆ ನೀಡುವ ಭರವಸೆ ಕೊಟ್ಟಿದ್ದರು.

ರಾಹುಲ್ ನಿದ್ರೆಗೆ ಜಾರಿದ್ದರು

ರಾಹುಲ್ ನಿದ್ರೆಗೆ ಜಾರಿದ್ದರು

ಬುಧವಾರ ಸಂಸತ್ತಿನಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ಕುರಿತ ಚರ್ಚೆಯ ಬಳಿಕ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉತ್ತರ ನೀಡುತ್ತಿದ್ದಾಗ ರಾಹುಲ್ ನಿದ್ದೆ ಮಾಡುತ್ತಿರುವ ದೃಶ್ಯವನ್ನು ಲೋಕಸಭಾ ಟಿವಿ ಪ್ರಸಾರ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿತ್ತು.

ಸಹಾಯ ಮಾಡುವ ಭರವಸೆ

ಸಹಾಯ ಮಾಡುವ ಭರವಸೆ

ದಲಿತ ಕುಟುಂಬದವರನ್ನು ಭೇಟಿ ಮಾಡಿರುವ ರಾಹುಲ್ ಗಾಂಧಿ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವ ಭರವಸೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress vice president Rahul Gandhi on July 21, 2016 visited Una, Gujarat where atrocities on Dalit youth took place last week.
Please Wait while comments are loading...