ವಾರಣಾಸಿಯಲ್ಲಿ ಮೋದಿ ವಿರುದ್ಧ ಕೇಜ್ರಿವಾಲ್ ಸ್ಪರ್ಧೆ
ವಾರಣಾಸಿ, ಮಾ.25: ಆಮ್ ಆದ್ಮಿ ಪಕ್ಷದ ಸಂಚಾಲಕ, ಮುಖ್ಯಸ್ಥ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ. ಇತ್ತೀಚೆಗೆ ಕರ್ನಾಟಕ ಪ್ರವಾಸ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಬಗ್ಗೆ ಕೇಜ್ರಿವಾಲ್ ಸುಳಿವು ನೀಡಿದ್ದರು.
ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ ಸವಾಲು ಸ್ವೀಕರಿಸುತ್ತೇನೆ ಎಂದ ಅರವಿಂದ್ ಕೇಜ್ರಿವಾಲ್. ಆದರೆ, ನನ್ನ ಬಳಿ ಹಣವಿಲ್ಲ. ದೇಶದ ಜನರು ಅವರ ವಿರುದ್ಧ ನಿಲ್ಲಬೇಕು. ನಾನು ಈ ಕ್ಷೇತ್ರಕ್ಕೆ ಹೊಸಬನಿರಬಹುದು, ಇದೇನು ಲೋಕಲ್ ಎಲೆಕ್ಷನ್ ಅಲ್ಲ. ನಮ್ಮ ಗುರಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರನ್ನು ಮಣಿಸುವುದಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ದೆಹಲಿ ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಕರ್ನಾಟಕದ ಹಗರಣಗಳು, ಭ್ರಷ್ಟರ ಜಾತಕವನ್ನು ಎಳೆ ಎಳೆಯಾಗಿ ಮತ್ತೊಮ್ಮೆ ಬಿಚ್ಚಿಟ್ಟರು. ವಾರಣಾಸಿಯಲ್ಲಿ ಆಗಮಿಸಿದ ಮೇಲೆ ಕೇಜ್ರಿವಾಲ್ ಅವರು ಗಂಗಾಸ್ನಾನ ಮಾಡಿ ದೇಗುಲಗಳಿಗೆ ಭೇಟಿ ನೀಡಿದರು. ಈ ನಡುವೆ ಮೊಟ್ಟೆ, ಇಂಕು ಎಸೆತ ಘಟನೆ ನಡೆಯಿತು[ವಿವರ ಇಲ್ಲಿದೆ] ವಾರಣಾಸಿ ಭೇಟಿ ಚಿತ್ರಗಳು ಮುಂದಿವೆ ನೋಡಿ...

ಅರವಿಂದ್ ಕೇಜ್ರಿವಾಲ್ ಗೆ ಸಿಕ್ಕ ಸ್ವಾಗತ ಹೀಗಿತ್ತು
ಪಕ್ಷದ ಸಮಾವೇಶಕ್ಕಾಗಿ ದೇವಾಲಯ ನಗರಿ ವಾರಣಾಸಿಗೆ ಬಂದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೇಲೆ ದುಷ್ಕರ್ಮಿಗಳು ಮೊಟ್ಟೆ ಎಸೆದ ಘಟನೆ ನಡೆದಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಅವರ ಮೇಲೆ ಕಪ್ಪುಮಸಿ ಎರಚಿದ ಪ್ರಸಂಗವೂ ನಡೆಯಿತು.

ಕಪ್ಪುಮಸಿ ಎರಚಿದ ಪ್ರಸಂಗ
ಕಪ್ಪುಮಸಿ ಎರಚಿದ ಪ್ರಸಂಗ ನಡೆದ ನಂತರವೂ ವಾರಣಾಸಿಯಲ್ಲಿ ಚುನಾವಣಾ ಪ್ರಚಾರ ಮೆರವಣಿಗೆ ಮುಂದುವರೆಸಿದ ಅರವಿಂದ್ ಕೇಜ್ರಿವಾಲ್

ಸಮಾವೇಶಕ್ಕೂ ಮುನ್ನ ಗಂಗಾ ಸ್ನಾನ, ಪೂಜೆ
ಜನ ಸಾಮಾನ್ಯನಂತೆ ನಾನು ಪವಿತ್ರ ನದಿ ಗಂಗೆಯಲ್ಲಿ ಮಿಂದು ಪೂಜೆಗೆ ತೆರಳುತ್ತಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಅರವಿಂದ್ ಕೇಜ್ರಿವಾಲ್ ಮಾಧ್ಯಮಗಳಿಗೆ ಮನವಿ ಮಾಡಿಕೊಂಡರು

ತುಳಸಿ ಘಾಟ್ ಗೆ ಅರವಿಂದ್ ಭೇಟಿ
ವಾರಣಾಸಿಯ ಪವಿತ್ರ ಘಾಟ್ ಗಳಲ್ಲಿ ಈಗ ದೇಶದ ಭವಿಷ್ಯ ಅಡಗಿದೆ ಎಂದು ಜನ ಮಾತನಾಡಿಕೊಳ್ಳುವ ವೇಳೆಗೆ ಅರವಿಂದ್ ಕೇಜ್ರಿವಾಲ್ ಅವರು ತುಳಸಿ ಘಾಟ್ ಗೆ ಭೇಟಿ ನೀಡಿದರು. ವಾರಣಾಸಿಯ ಕಾಶಿ ವಿಶ್ವೇಶ್ವರ ದೇವರ ದರ್ಶನ ಪಡೆದರು.

ಅರವಿಂದ್ ಕೇಜ್ರಿವಾಲ್ ಗೆ ಸ್ಮರಣಿಕೆ
ವಾರಣಾಸಿಯ ಕಾಶಿ ವಿಶ್ವೇಶ್ವರ ದೇವರ ದರ್ಶನ ಪಡೆದ ಅರವಿಂದ್ ಕೇಜ್ರಿವಾಲ್ ಗೆ ಸ್ಮರಣಿಕೆ












Click it and Unblock the Notifications