INDIA: ಚುನಾವಣೆ ಹೊತ್ತಲ್ಲೇ 'ಇಂಡಿಯಾ' ಮೈತ್ರಿಯಲ್ಲಿ ಕಿತ್ತಾಟ: ಒಮರ್ ಅಬ್ದುಲ್ಲಾ
ಬೆಂಗಳೂರು, ಅಕ್ಟೋಬರ್ 30: ಬಿಜೆಪಿಯನ್ನು ದೇಶದ ಅಧಿಕಾರ ಚುಕ್ಕಾಣೆಯಿಂದ ದೂರ ಇಡುವ ಸಂಬಂಧ ಕೇಂದ್ರ ವಿರೋಧ ಪಕ್ಷಗಳು ಎಲ್ಲವು ಒಟ್ಟಾಗಿ INDIA ಮೈತ್ರಿಕೂಟ ರಚಿಸಿದ್ದವು. ಇದೀಗ ಮೈತ್ರಿಯ ಪಕ್ಷಗಳು ಪರಸ್ಪರ ವಿರುದ್ಧ ನಿರ್ಧಾರ ಕಗೊಳ್ಳುವ ಮೂಲಕ ಮೈತ್ರಿಯೊಳಗೆ ಎಲ್ಲವು ಸರಿ ಇಲ್ಲ ಎಂಬುದನ್ನು ಸಾಬೀತು ಮಾಡಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಅವರು ಇಂಡಿಯಾ ಮೈತ್ರಿಕೂಟದೊಳಗಿನ ಆಂತರಿಕ ಭಿನ್ನಾಪ್ರಾಯ ಎದ್ದಿದೆ. ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ರಚನೆಯಾಗಿರುವ ಮೈತ್ರಿಕೂಟದಲ್ಲಿನ ವಿವಿಧ ಪಕ್ಷಗಳಲ್ಲಿ ಪಂಚ ರಾಜ್ಯ ಚುನಾವಣೆ ಎದುರಿಸುವಲ್ಲಿ ಹೊಂದಾಣಿಕೆ ಕೊರತೆ ಕಂಡು ಬಂದಿವೆ. ಲೋಕಸಭಾ ಚುನಾವಣೆಗೂ ಮೊದಲೇ ಹೀಗಾದರೆ ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ.
ಪಕ್ಷಗಳ ಮಧ್ಯೆ ಒಡಕು
ಮಧ್ಯಪ್ರದೇಶದ ವಿಧಾನಸಾ ಚುನಾವಣೆ ನಿಮಿತ್ತ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಭಿನ್ನ ನಿಲುವು ಹೊಂದಿವೆ. ಇದರಿಂದಾಗಿ ಉಭಯ ಪಕ್ಷಗಳ ಮಧ್ಯೆ ಒಡಕು ಉಂಟಾಗಿದೆ. ಆಂತರಿಕ ಕಚ್ಚಾಟಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷವು ಕಿತ್ತಾಡಿಕೊಂಡಿವೆ. ಅಲ್ಲದೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಒಟ್ಟಾಗಿ ಅಲ್ಲದೇ ಪ್ರತ್ಯೇಕವಾಗಿ ಸ್ಪರ್ಧಿಸಲು ಮನಸ್ಸು ಮಾಡಿವೆ. ಇದು ಮೈತ್ರಿ ನೀತಿಗೆ ವಿರುದ್ಧವಾಗಿಲ್ಲದೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಇದೆಲ್ಲ ಗಮನಿಸಿ ಮತ್ತೆ ಮತ್ರಿ ಪಕ್ಷಗಳ ಮುಖಂಡರು ಸಭೆ ಕರೆದು ಭಿನ್ನಮತ ಶಮನ ಮಾಡಬೇಕಿದೆ ಎಂದರು.
ಮೈತ್ರಿಕೂಟದಲ್ಲಿ ಚುನಾವಣೆ ಹೊತ್ತಿನಲ್ಲಿ ಇಂತಹ ಆಂತರಿಕ ಭಿನ್ನಾಭಿಪ್ರಾಯಗಳು ಇರಬಾರದಿತ್ತು. ಆದರೆ ವಿಧಾನಸಭಾ ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಯಲ್ಲಿ ಜಗಳಗಳನ್ನು ನಾವು ಕಾಣುತ್ತಿದ್ದೇವೆ. ಈ ರೀತಿಯ ಬೆಳವಣಿಗೆಗಳಿಂದ ಬಹುಶಃ ಮೈತ್ರಿಕೂಟಕ್ಕೆ ಒಳಿತಾಗಲ್ಲ. ಚುನಾವಣೆ ಬಳಿಕ ಮತ್ತೆ ನಾಯಕ ಸೇರಬೇಕಿದೆ ಎಂದು ತಿಳಿಸಿದರು.












Click it and Unblock the Notifications