ಮುಲಾಯಂ ಬಂಗ್ಲೆ ಮೇಲೆ ವಿದ್ಯುತ್ ಇಲಾಖೆ ದಾಳಿ

Posted By:
Subscribe to Oneindia Kannada

ಲಖ್ನೋ, ಏಪ್ರಿಲ್ 21: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಮನೆ ಮೇಲೆ ಉತ್ತರ ಪ್ರದೇಶದ ವಿದ್ಯುತ್ ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ಹಠಾತ್ ದಾಳಿ ನಡೆಸಿದ್ದಾರೆ.

ಮಿತಿಮೀರಿದ ವಿದ್ಯುತ್ ಉಪಯೋಗ ಹಾಗೂ ಲಕ್ಷಾನುಗಟ್ಟಲೆ ವಿದ್ಯುತ್ ಬಿಲ್ ಬಾಕಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಈ ಬಂಗಲೆಯಿಂದ ಸುಮಾರು 4 ಲಕ್ಷ ರು. ವಿದ್ಯುತ್ ಬಿಲ್ ಬಾಕಿಯಿದೆ ಎಂದು ಇಲಾಖೆ ಹೇಳಿದೆ.

In Electricity 'Raid', Mulayam Singh's Home Is Busted

ಮುಲಾಯಂ ಅವರ ಕ್ಷೇತ್ರವಾದ ಇಟಾವಾ ನಗರದಲ್ಲಿ ಇರುವ ಅವರ ಬೃಹತ್ ಬಂಗ್ಲೆ ಆ ನಗರದಲ್ಲೇ ಅತಿ ದೊಡ್ಡ ಬಂಗಲೆ ಎಂಬ ಹೆಗ್ಗಳಿಕೆ ಪಡೆದಿದೆ. ಸುಮಾರು 12 ಕೊಠಡಿಗಳಿವೆ. ಈ ಬಂಗಲೆಯು ತನ್ನದೇ ಆದ ಏರ್ ಕಂಡೀಷನಿಂಗ್ ವ್ಯವಸ್ಥೆ ಹೊಂದಿದ್ದು, ಉಷ್ಣಾಂಶ ನಿಯಂತ್ರಣ ಸೌಲಭ್ಯವುಳ್ಳ ಈಜುಕೊಳ ಹೊಂದಿದೆ. ಅಲ್ಲದೆ, ಮನೆಯಲ್ಲಿ ಹತ್ತಾರು ಕಡೆ ಲಿಫ್ಟ್ ಗಳೂ ಇವೆ.

ದಾಖಲೆಗಳ ಪ್ರಕಾರ, ಈ ಮನೆಗೆ ಮಂಜೂರಾಗಿರುವುದು ದಿನಕ್ಕೆ 5 ಕಿಲೋ ವ್ಯಾಟ್. ಆದರೆ, ಇಲ್ಲಿ ಉಪಯೋಗವಾಗುತ್ತಿರುವುದು ದಿನಕ್ಕೆ ಸರಾಸರಿ 40 ಕಿಲೋ ವ್ಯಾಟ್.

ದಾಳಿಯ ವೇಳೆ ಇದನ್ನು ಗಮನಿಸಿದ ಅಧಿಕಾರಿಗಳು, ಈ ಮನೆಯ ಮೀಟರ್ ಅನ್ನು 40 ಕಿಲೋ ವ್ಯಾಟ್ ಗಳ ಪ್ರವಾಹಕ್ಕೆ ಅನುಗುಣವಾಗಿ ಪರಿವರ್ತಿಸಿದ್ದಾರಲ್ಲದೆ, ಈ ತಿಂಗಳ ಅಂತ್ಯದ ವೇಳೆಗೆ ಬಾಕಿಯಿರುವ ವಿದ್ಯುತ್ ಬಿಲ್ ಪಾವತಿಸಲು ಗಡುವು ನೀಡಿದ್ದಾರೆ. ಇಲ್ಲವಾದರೆ, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 'No VIP' emphasis of Yogi Adityanath's new government in Uttar Pradesh extended on Thursday to former Chief Minister Mulayam Singh Yadav - one of his homes failed a surprise inspection and was found to be guilty of using way more electricity than allowed.
Please Wait while comments are loading...