ಭಾರತದಲ್ಲಿ 3 ದಿನಗಳಲ್ಲಿ ಕೊರೊನಾ ವೈರಸ್‌ನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಳ

9ನವದೆಹಲಿ, ಏಪ್ರಿಲ್ 17: ಮೂರು ದಿನಗಳಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಏರಿಕೆಯಾಗುತ್ತಿದೆ.

ರಿಕವರಿ ರೇಟ್ ಗಮನಿಸಿದರೆ ಸಾಕಷ್ಟು ಮಂದಿ ಕೊರೊನಾದಿಂದ ಗುಣಮುಖರಾಗಿರುವುದು ಗೋಚರವಾಗುತ್ತಿದೆ. ಶುಕ್ರವಾರ 13.06, ಗುರುವಾರ 12.02, ಬುಧವಾರ 11.41 ಇತ್ತು.

ಕಳೆದ 24 ಗಂಟೆಗಳಲ್ಲಿ 260 ಮಂದಿ ಗುಣಮುಖರಾಗಿರುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಆಸ್ಪತ್ರೆಯಿಂದ ಬಿಡುಗಡೆ ಹೊಂಡಿದ್ದಾರೆ. ಗುರುವಾರ 183 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ 1 ಸಾವಿರ ಕೊರೊನಾ ವೈರಸ್ ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆಯಾಗಿದೆ.

437 ಮಂದಿ ಮೃತಪಟ್ಟಿದ್ದಾರೆ. ಮೇ ಮೊದಲ ವಾರದಲ್ಲಿ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗರಿಷ್ಟ ಮಟ್ಟಕ್ಕೆ ತಲುಪಿತ್ತು. ಆದರೆ ಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಮೇ ತಿಂಗಳಿನಲ್ಲಿ ಕೊರೊನಾದಿಂದ ಹೆಚ್ಚು ಅಪಾಯ ಎದುರಾಗಲಿದೆ ಎಂದು ಹೇಳಲಾಗಿತ್ತು. ಆದರೆ ಲಾಕ್‌ಡೌನ್ ವಿಸ್ತರಣೆಯಿಂದಾಗಿ ಕೊಂಚ ಇಳಿಮುಖವಾಗಿದೆ.

ಮುಂದಿನ ಒಂದು ವಾರ ಕಷ್ಟಕರವಾಗಿದ್ದು, ಯಾರ್ಯಾರಿಗೆ ಕೊರೊನಾ ಲಕ್ಷಣಗಳು ಕಂಡು ಬರುತ್ತದೆಯೋ ಅವರೆಲ್ಲರೂ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗಿದೆ.

In 3 Days Coronavirus Recovery Rate Up
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+