ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪ್ರಮುಖ ಹೇಳಿಕೆಗಳು

ನವದೆಹಲಿ, ಆಗಸ್ಟ್ 24: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ(ಆಗಸ್ಟ್ 24)ರಂದು ನಿಧನರಾಗಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿದ್ದ ಅರುಣ್ ಜೇಟ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಪ್ರಮುಖರಾಗಿದ್ದರು. ಹಣಕಾಸು ಮತ್ತು ರಕ್ಷಣಾ ಖಾತೆಗಳನ್ನು ನಿರ್ವಹಿಸಿದ್ದರು.

ಪ್ರಧಾನಿ ಮೋದಿ ತೆಗೆದುಕೊಂಡ ನೋಟು ರದ್ದು ನಿರ್ಧಾರದ ಬಳಿಕ ಉಂಟಾದ ಏರುಪೇರುಗಳನ್ನು ನಿಭಾಯಿಸುವ ಜೊತೆಗೆ ಸರ್ಕಾರದ ನಿರ್ಧಾರವನ್ನು ಬಹುವಾಗಿ ಸಮರ್ಥಿಸಿಕೊಂಡಿದ್ದರು.

arun jaitley

ಅನಾರೋಗ್ಯದ ಕಾರಣದಿಂದಾಗಿ ಅವರು 2019ರ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದರು. ಅವರು ಹೇಳಿರುವ ಪ್ರಮುಖ ಹೇಳಿಕೆಗಳು ಇಲ್ಲಿವೆ.

-ಸರ್ಕಾರದ ಭಾಗವಾಗಿರುವ ನಾವು ಠೀಕೆಗೆ ಅರ್ಹರು
-ಸಂಸತ್ತಿನಲ್ಲಿ ಚರ್ಚೆ ಮುಖ್ಯವಾಗಿದ್ದು, ಸಂಸದೀಯ ಅಡಚಣೆಯನ್ನು ನಾವು ತಪ್ಪಿಸಬೇಕು. ಇದು ಅತಿ ಅಪರೂಪದ ಪ್ರಕರಣಗಳಲ್ಲಿ ಬಳಸಬೇಕಾದ ವಿಚಾರ. ಸಂಸತ್ತಿನಲ್ಲಿ ಹೊಣೆಗಾರಿಕೆ ಹಾಗೂ ಚರ್ಚೆ ಎರಡೂ ಒಂದಾಗಿ ಸಾಗಬೇಕು.
-ಏಕರೂಪದ ತೆರಿಗೆ ಭಾರತದಲ್ಲಿ ಸಾಧ್ಯವಿಲ್ಲ, ಹವಾಯಿ ಚಪ್ಪಲಿಗೂ ಹಾಗೂ ಮರ್ಸಿಡಿಸ್ ಕಾರಿಗೂ ಒಂದೇ ದರದಲ್ಲಿ ತೆರಿಗೆ ಕಟ್ಟುವ ವ್ಯವಸ್ಥೆಯನ್ನು ಭಾರತದಲ್ಲಿ ತಲು ಸಾಧ್ಯವಿಲ್ಲ.
-ನಾವು ಸಬ್ಸಿಡಿಯಲ್ಲಿ ಆಗುತ್ತಿರುವ ಸೋರಿಕೆಗೆ ಕತ್ತರಿ ಹಾಕಬೇಕಿದೆ. ನೇರವಾಗಿ ಸಬ್ಸಿಡಿಗೆ ಕತ್ತರಿ ಹಾಕುವುದಲ್ಲ.
-ಹಳೆ ಭಾರತ ಆರ್ಥಿಕವಾಗಿ ಛಿದ್ರಗೊಂಡಿತ್ತು. ಹೊಸ ಭಾರತ ಒಂದೇ ತೆರಿಗೆ , ಒಂದು ಮಾರುಕಟ್ಟೆ ಒಂದೇ ರಾಷ್ಟ್ರವನ್ನು ಸೃಷ್ಟಿ ಮಾಡಿದೆ. ಕೇಂದ್ರ ಮತ್ತು ರಾಜ್ಯಗಳು ದೇಶದ ಉನ್ನತಿಯ ಕಡೆಗೆ ಹೋಗಲು ಶ್ರಮಿಸುತ್ತಿರುವುದನ್ನು ಕಾಣಲು ಭಾರತದಲ್ಲಿ ಮಾತ್ರ ಸಾಧ್ಯ.
-ಚರ್ಚೆಗಳನ್ನು ನಡೆಸುವುದು ಸಂಸತ್ತಿನ ಕೆಲಸ. ಆದರೆ ಅನೇಕ ಸಲ ಸಂಸತ್ತಿನಲ್ಲಿ ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಕಲಾಪಕ್ಕೆ ತಡೆ ಒಡ್ಡಿದರೆ ಅದು ಪ್ರಜಾಪ್ರಭುತ್ವದ ಪರವಾಗಿದೆ ಎಂದರ್ಥ, ಆದ್ದರಿಂದ ಕಲಾಪಕ್ಕೆ ತಡೆ ಒಡ್ಡುವುದನ್ನು ಅಸಂವಿಧಾನಿಕ ಎಂದು ಹೇಳಲಾಗದು.
-ಕೆಲವೊಂದು ಬಾರಿ ಕಲಾಪಕ್ಕೆ ತಡೆ ಒಡ್ಡುವುದು ಒಳ್ಳೆಯದು. ಏಕೆಂದರೆ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ ಅನೇಕ ಸಂದರ್ಭಗಳಲ್ಲಿ ಅದರಿಂದ ದೇಶಕ್ಕೆ ಒಳಿತೇ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+