ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕಿನಿಂದ ಗುಣಮುಖರಾದ ನಂತರ ರೋಗನಿರೋಧಕ ಶಕ್ತಿ ಹೆಚ್ಚಳ

|
Google Oneindia Kannada News

ನವದೆಹಲಿ, ಜನವರಿ 08: ಕೊರೊನಾ ಸೋಂಕಿನಿಂದ ಗುಣಮುಖರಾದ ಕನಿಷ್ಠ ಎಂಟು ತಿಂಗಳ ನಂತರ ರೋಗನಿರೋಧಕ ಶಕ್ತಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ ಎಂದು ಸಂಶೋಧಕರು ಅಧ್ಯಯನದ ಮೂಲಕ ತಿಳಿಸಿದ್ದಾರೆ.

ಸೈನ್ಸ್ ಜರ್ನಲ್ ನಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು, ಇದರಲ್ಲಿ ಸೋಂಕು ಕಾಣಿಸಿಕೊಂಡ ನಂತರವೂ ಮಾನವನ ರೋಗನಿರೋಧಕ ಶಕ್ತಿಯು ಸ್ಥಿರವಾಗಿರುತ್ತದೆ ಎಂದು ತಿಳಿಸಿದೆ. ಇದುವರೆಗೂ ಅಧ್ಯಯನಕ್ಕೊಳಪಟ್ಟ ಸುಮಾರು 90% ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯು ಸ್ಥಿರವಾಗಿರುವುದು ಕಂಡುಬಂದಿದೆ ಎಂದು ಅಧ್ಯಯನ ಸಾಬೀತುಪಡಿಸಿದೆ.

ಯಾವ ವಯಸ್ಸಿನವರಿಗೆ ಯಾವ ಕೊರೊನಾ ಲಸಿಕೆ ನೀಡಲಾಗುತ್ತಿದೆ?ಯಾವ ವಯಸ್ಸಿನವರಿಗೆ ಯಾವ ಕೊರೊನಾ ಲಸಿಕೆ ನೀಡಲಾಗುತ್ತಿದೆ?

ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಾಗಿನಿಂದಲೂ ಜನರಲ್ಲಿ ಅನಿಶ್ಚಿತತೆ ಮನೆ ಮಾಡಿದೆ. ವೈರಸ್ ಬಗ್ಗೆ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ. ಅದರಲ್ಲಿ ಪ್ರಮುಖವಾದುದು ಎಂದರೆ, ಸೋಂಕಿನಿಂದ ಗುಣಮುಖವಾದ ನಂತರ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಳ್ಳಬಹುದೇ ಎಂಬುದು. ಹೌದು ಎಂದಾದರೆ, ಎಷ್ಟು ಅವಧಿಯಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು ಎಂಬುದು.

 Immune Response To Virus Builds Gradually Said Scientists

ಕೊರೊನಾ ವೈರಸ್ ಎರಡನೇ ಬಾರಿ ಕಾಣಿಸಿಕೊಂಡ ಪ್ರಕರಣಗಳು ಕೆಲವೆಡೆ ದಾಖಲಾಗಿದೆ. ಆದರೆ ಅದು ಅಪರೂಪದ್ದಾಗಿದೆ. ಸೋಂಕು ಕಾಣಿಸಿಕೊಂಡ ನಂತರವೂ ರೋಗನಿರೋಧಕ ಶಕ್ತಿ ಸ್ಥಿರವಾಗಿರುತ್ತದೆ ಎಂದಿದೆ ಅಧ್ಯಯನ. ಇದನ್ನು ಸಾಬೀತುಪಡಿಸಲು ಸುಮಾರು 200 ರೋಗಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ ವೈರಸ್ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಸ್ಥಿರವಾಗಿದ್ದು, ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಇರುವುದಾಗಿ ತಿಳಿದುಬಂದಿದೆ.

ಕೊರೊನಾ ವೈರಸ್ ನ ರೂಪಾಂತರಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಎದ್ದಿದ್ದು, ಈ ರೂಪಾಂತರಗಳ ವಿರುದ್ಧವೂ ರೋಗನಿರೋಧಕ ಶಕ್ತಿ ನಿಲ್ಲಬಲ್ಲದು, ಗುಣಮುಖರಾದ ನಂತರ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಆದರೆ ಕೊರೊನಾ ಸೋಂಕಿಗೆ ಒಳಗಾದ ಸುಮಾರು 10% ಜನರಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿರುವುದು ಕಂಡುಬಂದಿದೆ. ಯಾವ ಕಾರಣಕ್ಕೆ ಕುಗ್ಗಿದೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

English summary
Human body typically retains a robust immune response to the coronavirus for at least eight months after an infection researchers said in a study published in the journal Science
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X