ಕೇಂದ್ರ ಬಜೆಟ್: ಐಎಂಎಫ್‌ನ ಗೀತಾ ಗೋಪಿನಾಥ್ ಸಲಹೆಗಳಿವು..
ನವದೆಹಲಿ, ಜನವರಿ 26: ಇನ್ನು ಕೆಲವೇ ದಿನಗಳಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಕೊಂಚ ಚೇತರಿಸಿಕೊಳ್ಳುತ್ತಿದ್ದ ಆರ್ಥಿಕತೆಯು ಕೊರೊನಾ ವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದಿಂದಾಗಿ ಅಲುಗಾಡುತ್ತಿರುವಾಗ ಮಂಡನೆ ಮಾಡಲಾಗುವ ಈ ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆಯನ್ನು ಎಲ್ಲಾ ವಲಯದವರು ಹೊಂದಿದ್ದಾರೆ.
ಇತ್ತೀಚೆಗೆ ಕೊರೊನಾ ವೈರಸ್‌ನ ರೂಪಾಂತರ ಓಮಿಕ್ರಾನ್ ಕಾರಣದಿಂದಾಗಿ ಹಲವಾರು ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಹಿನ್ನೆಲೆಯಿಂದಾಗಿ ಐಎಂಎಫ್ ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ತಗ್ಗಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯು ದೇಶದಲ್ಲಿ ಶೇಕಡ 9ರಷ್ಟು ಆರ್ಥಿಕ ಬೆಳವಣಿಗೆಯನ್ನು ಅಂದಾಜು ಮಾಡಿದೆ. ಇನ್ನು ಮುಂದಿನ ಹಣಕಾಸು ವರ್ಷ ಅಂದರೆ 2023ರಲ್ಲಿ ಹೂಡಿಕೆಗಳ ಉತ್ತೇಜನದ ಜೊತೆಗೆ ಆರ್ಥಿಕತೆ ಬೆಳವಣಿಗೆ ದರವು ಶೇಕಡ 7.1ರಷ್ಟು ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ನಿರೀಕ್ಷೆ ಹೊಂದಿದೆ.
ಇನ್ನು ಈ ಬಜೆಟ್‌ನಲ್ಲಿ ಸರ್ಕಾರವು ಆರ್ಥಿಕತೆಯ ಉತ್ತೇಜನದ ನಿಟ್ಟಿನಲ್ಲಿ ಹಲವಾರು ವಲಯಗಳಿಗೆ ಅಧಿಕ ಬಜೆಟ್ ಇರಿಸುವ ಸಾಧ್ಯತೆ ಇದೆ. ಈ ರೀತಿಯಾಗಿ ಸರ್ಕಾರವು ಆರ್ಥಿಕತೆಯ ಮೇಲೆ ಹೆಚ್ಚು ಆಧ್ಯತೆ ನೀಡಿ ಬಜೆಟ್ ಮಂಡನೆ ಮಾಡಿದರೆ, ಉದ್ಯೋಗ ಸೃಷ್ಟಿಗೆ ಸಹಕಾರಿ ಆಗುವ ಸಾಧ್ಯತೆಗಳು ಇದೆ.

ಐಎಂಎಫ್‌ನ ಗೀತಾ ಗೋಪಿನಾಥ್ ಹೇಳುವುದು ಏನು?
ಈ ದೃಷ್ಟಿಕೋನವನ್ನು ಐಎಂಎಫ್‌ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಹೊಂದಿದ್ದಾರೆ. ಕೇಂದ್ರ ಸರ್ಕಾರವು ಆರ್ಥಿಕ ಉತ್ತೇಜನದ ಕಾರ್ಯ ಕ್ರಮ, ಯೋಜನೆಯ ಜೊತೆಗೆಯೇ ಮೂಲಸೌಕರ್ಯ ಹೂಡಿಕೆಯನ್ನು ಮುಂದುವರಿಸುತ್ತದೆ ಎಂದು ಗೀತಾ ಗೋಪಿನಾಥ್ ನಿರೀಕ್ಷೆ ಹೊಂದಿದ್ದಾರೆ.
BloombergQuint ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಮರ್ಪಕವಾಗಿ ಹಣ ನೀಡುವ ಮೂಲಕ ಮತ್ತು ಮಾರ್ಚ್‌ನ ನಂತರ ಉಚಿತ ಆಹಾರ ಪಡಿತರವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಬಜೆಟ್ ಮಂಡನೆ ಮಾಡುವುದರಿಂದಾಗಿ ದೇಶದಲ್ಲಿನ ಅಸಮಾನ ಆರ್ಥಿಕ ಚೇತರಿಕೆಯತ್ತ ಸರ್ಕಾರ ಗಮನ ಹರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ನಡುವೆ ಸರ್ಕಾರವು ಉಚಿತ ಆಹಾರ ಯೋಜನೆಯಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅನ್ನು ಮಾರ್ಚ್, 2022 ರವರೆಗೆ ವಿಸ್ತರಿಸಿದೆ.
ಆರೋಗ್ಯ, ಶಿಕ್ಷಣ ಕ್ಷೇತ್ರದೆಡೆ ಸರ್ಕಾರದ ಗಮನ ಅಗತ್ಯ ಎಂದ ಗೀತಾ
"ಭಾರತ ಸರ್ಕಾರವು ಆರೋಗ್ಯ ಕ್ಷೇತ್ರದೆಡೆ ಹೆಚ್ಚು ಗಮನಹರಿಸಬೇಕು ಮತ್ತು ಶಿಕ್ಷಣಕ್ಕೆ ನೀಡುವ ಬಜೆಟ್ ಅನ್ನು ಹೆಚ್ಚಿಸಬೇಕು," ಎಂಬುವುದು ಭಾರತೀಯ-ಅಮೆರಿಕನ್ ಗೀತಾ ಗೋಪಿನಾಥ್ ನಿರೀಕ್ಷೆಯಾಗಿದೆ.
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗಿದೆ. ಇದರ ಮಧ್ಯೆ ಜನವರಿ 31 ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೊವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕೊರೊನಾವೈರಸ್ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಂಸತ್ ಅನ್ನು ಎರಡು ಪ್ರತ್ಯೇಕ ಪಾಳೆಗಳಲ್ಲಿ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಮೊದಲಾರ್ಧದ 5 ಗಂಟೆಗಳಲ್ಲಿ ರಾಜ್ಯಸಭೆ ಮತ್ತು ದ್ವಿತೀಯಾರ್ಧದ 5 ಗಂಟೆಗಳಲ್ಲಿ ಲೋಕಸಭೆ ಕಲಾಪಗಳು ನಡೆಸಲಿವೆ.
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಗಾಗಿ ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಸಭೆ ಸೇರಲಾಗುತ್ತಿದ್ದು, ಫೆಬ್ರವರಿ 2 ರಿಂದ ಫೆಬ್ರವರಿ 11 ರವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಸಂಜೆ 4 ರಿಂದ ರಾತ್ರಿ 9 ರವರೆಗೆ ಲೋಕಸಭೆ ಕಲಾಪಗಳು ನಡೆಯಲಿದೆ. ರಾಜ್ಯಸಭೆಯ ಕಲಾಪದ ನಿಖರವಾದ ಸಮಯವನ್ನು ಇನ್ನೂ ಔಪಚಾರಿಕವಾಗಿ ತಿಳಿಸಬೇಕಾಗಿದ್ದರೂ, ಸಂಸತ್ತಿನ ಮೇಲ್ಮನೆಯು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ. (ಒನ್‌ಇಂಡಿಯಾ ಸುದ್ದಿ)
Recommended Video
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications