India Weather: ಸೆಪ್ಟಂಬರ್ 3ರವರೆಗೆ ಈ ಭಾಗಗಳಲ್ಲಿ ಭಾರೀ ಮಳೆ- ಪ್ರವಾಹ ಎಚ್ಚರಿಕೆ...Rain Alert
India Rain Alert: ಭಾರತದ ವಿವಿಧ ಕಡೆಗಳಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ, ಚಂಡಮಾರುತ ಪರಿಚಲನೆ ಪ್ರಮಾಣ ಸ್ವಲ್ಪ ದುರ್ಬಲಗೊಂಡಿದೆ. ಹೀಗಿದ್ದರೂ ಸಹಿತ ಜಮ್ಮು ಮತ್ತು ಕಾಶ್ಮೀರದ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳ ಮೇಲೆ ಬಿರುಗಾಳಿ ಸಹಿತ ರಣ ಮಳೆ ಆಗಲಿದೆ. ಪ್ರವಾಹದ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಶನಿವಾರ ನೀಡಿದೆ.
ಹವಾಮಾನ ತಜ್ಞರ ಪ್ರಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ಭಾರಿ ಮಳೆ ಆಗಲಿದ್ದು, ರೆಡ್ ಅಲರ್ಟ್ ನೀಡಲಾಗಿದೆ. ಮಾತ್ರವಲ್ಲದೇ ಉತ್ತರಾಖಂಡ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಿಜೋರಾಂ, ಒಡಿಶಾ, ಅಸ್ಸಾಂ, ಮೇಘಾಲಯ ಹಾಗೂ ಆಂಧ್ರಪ್ರದೇಶದ ಪ್ರದೇಶಗಳಲ್ಲಿಯೂ ಇದೇ ರೀತಿಯ ಧಾರಾಕಾರ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ.

ಪಶ್ಚಿಮ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಈಗಾಗಲೇ ಬಂದ ಮಳೆಗೆ ಜನರು ಹೈರಾಣಾಗಿದ್ದಾರೆ. ಪ್ರವಾಹದಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಚಳಿ ಹಾಗೂ ತೇವಾಂಶ ಭರಿತ ಗಾಳಿ ಬೀಸುವಿಕೆ ಹೆಚ್ಚಾಗುತ್ತದೆ. ಗಾಳಿಯ ವೇಗದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಅಲ್ಲಲ್ಲಿ ಬಿರುಗಾಳಿ ಸಹಿರ ವ್ಯಾಪಕ ಮಳೆ ಸಂಭವವಿದೆ.
ಜಮ್ಮು- ಕಾಶ್ಮೀರದಲ್ಲಿ ಮೇಘಸ್ಫೋಟ: ಮೂವರು ಸಾವು
ಕೇರಳದಿಂದ ಜಮ್ಮು ಮತ್ತು ಕಾಶ್ಮೀರವರೆಗೆ ಸ್ಟ್ರಫ್ ಉಮಟಾಗಿದೆ. ಇದರಿಂದಾಗಿ ಈ ಭಾಗಗಳಲ್ಲಿ ಸಂಚರಿಸುವ 58 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಕೆಲವೆಡೆ ಪ್ರವಾಸಿಗರು ಸಿಕ್ಕಿಬಿದ್ದಿದ್ದು, ಅವರನ್ನು ರಕ್ಷಿಸಲಾಗುತ್ತಿದೆ. ಉಪ ಹಿಮಾಲಯ ಪ್ರದೇಶಗಳು, ಪಶ್ಚಿಮ ಬಂಗಾಳ, ಸಿಕ್ಕಿಂ, ಉತ್ತರ ಬಿಹಾರ, ಪೂರ್ವ ಮಧ್ಯಪ್ರದೇಶ, ಉತ್ತರ ಮಧ್ಯ ಮಹಾರಾಷ್ಟ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಗೆ ಪ್ರವಾಹ ಸ್ಥಿತಿ ಉಂಟಾಗಿದೆ. ಈ ಭಾಗಗಳಲ್ಲಿ ಮುಂದಿನ 5 ದಿನ ಮಳೆ ಮುಂದುವರಿಯಲಿದೆ.
ಸೆಪ್ಟೆಂಬರ್ 2ಕ್ಕೆ ಹೆಚ್ಚು ಮಳೆ ನಿರೀಕ್ಷೆ
ಆಗಸ್ಟ್ 30 ರಿಂದ ಸೆಪ್ಟೆಂಬರ್ 2 ರ ನಡುವೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿಯೂ ಸಹ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಆಗಸ್ಟ್ 31 ರಾಜಸ್ಥಾನದಲ್ಲಿ ಧಾರಾಕಾರ ಮಳೆ ಬೀಳಲಿದೆ. ಸೆಪ್ಟೆಂಬರ್ 2 ರಂದು ಅತ್ಯಧಿಕ ಮಳೆಯ ನಿರೀಕ್ಷೆ ಇದೆ. ಇದಕ್ಕೆಲ್ಲ ಮಧ್ಯ ಪ್ರದೇಶ, ಅರಬ್ಬಿ ಸಮುದ್ರ ಹಾಗೂ ಒಡಿಶಾ ಕರಾವಳಿ ಸಮೀಪ ಬಂಗಾಳಕೊಲ್ಲಿ ಭಾಗದಲ್ಲಿ ಉಂಟಾಗಿರುವ ವಾಯು ಚಂಡಮಾರುತ ಪರಿಚಲನೆ ಕಾರಣ ಎಂಬ ಮುನ್ಸೂಚನೆ ನೀಡಲಾಗಿದೆ.
ಉತ್ತರ ಪಾಕಿಸ್ತಾನ ಮತ್ತು ಪಕ್ಕದ ಪಂಜಾಬ್‌ನಲ್ಲಿ ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದ್ದು, ಇದು ಸಮುದ್ರ ಮಟ್ಟಕ್ಕಿಂತ 3.1 ಮತ್ತು 9.6 ಕಿ.ಮೀ ನಡುವೆ ವಿಸ್ತರಣೆ ಆಗಿದೆ.
ವಿದರ್ಭ ಮತ್ತು ನೆರೆಹೊರೆಗಳ ಮೇಲಿನ ಮೇಲಿನ ವಾಯುಭಾರವು ದಕ್ಷಿಣ ಮಧ್ಯಪ್ರದೇಶದ ಮಧ್ಯ ಭಾಗಗಳಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ ವರೆಗೆ ವಿಸ್ತರಿಸಿದೆ. ಉತ್ತರ ಕೊಂಕಣ ಕರಾವಳಿಯಲ್ಲಿ ಸಮುದ್ರ ಮಟ್ಟಕ್ಕಿಂತ 5.8 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಇದೆ. ಇನ್ನೂ ಈಶಾನ್ಯ ಅಸ್ಸಾಂ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ಎತ್ತರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ತೀವ್ರತೆ ಹೆಚ್ಚಾಗುವ ನಿರೀಕ್ಷೆ ಇದೆ.
ವಿದರ್ಭ ಮತ್ತು ನೆರೆಹೊರೆ ಮತ್ತು ಕರ್ನಾಟಕದ ಒಳನಾಡಿನ ಮೇಲೆ ಚಂಡಮಾರುತದ ಪರಿಚಲನೆಯು ಮುಂದುವರಿದಿದೆ. ಇದು ಛತ್ತೀಸ್‌ಗಢದಿಂದ ಉತ್ತರ ಕೇರಳದವರೆಗೆ ಸಮುದ್ರ ಮಟ್ಟಕ್ಕಿಂತ 5.8 ಕಿಲೋ ಮೀಟರ್ ಎತ್ತರದಲ್ಲಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ತೀವ್ರ ಕೊಂಚ ತಣ್ಣಗಾಗಿದೆ. ಇದೆಲ್ಲ ಬದಲಾವಣೆಗಳಿಂದಲೇ ಕರ್ನಾಟಕ, ತಮಿಳುನಾಡು ಒಳಗೊಂಡಂತೆ ಉತ್ತರ ಭಾರತದಲ್ಲಿ ರಣ ಮಳೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications