Rain Alert: ಈ ಭಾಗಗಳಲ್ಲಿ ಮಳೆ ಆರ್ಭಟ, ಉಳಿದೆಡೆ ಶಾಖದ ಅಲೆ ಎಚ್ಚರಿಕೆ: Monsoon Rain 2025
IMD Weather Forecast: ಒಂದೆಡೆ ಮುಂಗಾರು ಮಳೆ (Monsoon Rain 2025) ಈ ಬಾರಿ ಬೇಗನೇ ಸಕ್ರಿಯವಾಗಲಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಶುರುವಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಸುರಿಯುತ್ತಿದ್ದ ಪೂರ್ವ ಮುಂಗಾರು ಮಳೆ ತಣ್ಣಗಾಗಿದೆ. ಕರ್ನಾಟಕದ ಮಲೆನಾಡಿನ ಭಾಗದಲ್ಲಿ ಹಾಗೂ ಕೇರಳದ ಒಂದಷ್ಟು ಕಡೆಗೆ ಆಗಾಗ ಕೊಂಚ ಮಳೆ ಬರುತ್ತಿದೆ. ಉಳಿದಂತೆ ಒಣಹವೆ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಹವಾಮಾನ ವರದಿ ಮುನ್ಸೂಚನೆ ಪ್ರಕಾರ, ದೇಶದ ವಿವಿಧ ಪ್ರದೇಶಗಳಲ್ಲಿ ಹಳದಿ ಎಚ್ಚರಿಕೆ ಕೊಡಲಾಗಿದೆ. ಇದರಲ್ಲಿ ಉಷ್ಣ ಅಲೆಯ ಎಚ್ಚರಿಕೆಯು ಇದೆ. ಜೊತೆಗೆ ಕೆಲವೆಗಡೆ ಗುಡುಗು ಸಹಿತ ಭಾರೀ ಮಳೆ ಬರಲಿದೆ. ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂಗಳಲ್ಲಿ ಭಾರೀ ಮಳೆ ಆಗುವ ಸಂಭವವಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳ ಅನೇಕ ಭಾಗಗಳಲ್ಲಿ ಮುಂದಿನ ಐದಾರು ದಿನಗಳ ಕಾಲ ಶಾಖದ ಅಲೆ ಎಚ್ಚರಿಕೆ ನೀಡಲಾಗಿದೆ. ಸೋಮವಾರ (ಮೇ 12) ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ತಮಿಳುನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ಹೆಚ್ಚಿನ ಬಿಸಿಲು ಕಂಡು ಬರಲಿದೆ. ತೀವ್ರ ತಾಪಮಾನಕ್ಕೆ ಜನರು ಬಸವಳಿಯಲಿದ್ದಾರೆ. ಮೈಸುಡುವ ಬಿಸಿಲಿನ ತಾಪ ಕಂಡು ಬರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ದೆಹಲಿ ಹವಾಮಾನ ವರದಿ
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ರಾಷ್ಟ್ರ ರಾಜಧಾನಿಯ ಜನರಿಗೆ ಸದ್ಯಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಬಿಸಿಲಿನ ಶಾಖಕ್ಕೆ ತತ್ತರಿಸಿದ್ದ ಇಲ್ಲಿನ ನಿವಾಸಿಗಳು ಕೊಂಚ ಮಳೆ ಕಾಣಲಿದ್ದಾರೆ. ದೆಹಲಿಯಲ್ಲಿ ಭಾನುವಾರದಿಂದ ಮುಂದಿನ ಕೆಲವು ದಿನಗಳ ಕಾಲ ಮಳೆ ಬರುವ ಮುನ್ಸೂಚನೆ ಇದೆ. ಇಲ್ಲಿ ಶಾಖದ ಅಲೆ ಇಲ್ಲ. ವಾತಾವರಣದಲ್ಲಿ ಬದಲಾದರೆ ಮುಂದಿನ ವಾರ ಮತ್ತೆ ಬಿಸಿಲು ಎದುರಾದರೂ ಆಗಬಹುದು. ಸದ್ಯಕ್ಕೆ ನಗರಾದ್ಯಂತ ಮಬ್ಬು ವಾತಾವರಣ, ಅಲ್ಲಲ್ಲಿ ಹಗುರ ಮಳೆ ಸಾಧ್ಯತೆ ಇದೆ.
ದೆಹಲಿಯಲ್ಲಿ ಪ್ರತಿ ಗಂಟೆಗೆ 30 - 40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಭಾಗಶಃ ಮೋಡ ಕವಿದ ಆಕಾಶ ಕಂಡು ಬರಲಿದೆ. ಅನೇಕ ಕಡೆಗಳಲ್ಲಿ ಭಾನುವಾರ ಸಂಜೆಯಿಂದ ಸೋಮವಾರವರೆಗೆ ಮಿಂಚು ಸಹಿತ ಅತ್ಯಂತ ಹಗುರವಾದ ಮಳೆ ಆಗಲಿದೆ. ಇನ್ನು ಇಲ್ಲಿನ ಗಾಳಿ ಪ್ರಮಾಣ ಮುಂದಿನ 24 ಗಂಟೆಗಳಲ್ಲಿ 50 ಕಿಲೋ ಮೀಟರ್ ವರೆಗೆ ಹೆಚ್ಚಾಗಲಿದೆ.
ಗರಿಷ್ಠ ತಾಪಮಾನ, ವಿವರ
ದೇಶದಲ್ಲಿ ಗರಿಷ್ಠ ತಾಪಮಾನವು 37-39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನವು ಸುಮಾರು 24-26 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಉಳಿದಂತೆ ಹವಾಮಾನ ವೈಪರೀತ್ಯಗಳು, ಗಂಭೀರ ಸ್ವರೂಪ ವಾತಾವರಣದಲ್ಲಿನ ಬದಲಾವಣೆಗಳು ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಇನ್ನೂ ಕೇರಳವು ಮುಂಗಾರು ಮಳೆಯ ಆಗಮನ ಎದುರು ನೋಡುತ್ತಿದೆ. ಜೂನ್ ಗೆ ಬರುವ ಮುಂಗಾರು ಮಳೆ ಸುರಿಸುವ ಮಾರುತಗಳ ಈ ಭಾರಿ ನಾಲ್ಕು ದಿನ ಮೊದಲೇ ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ. ಜೂನ್ ನಿಂದ ಸೆಪ್ಟಂಬರ್ ವರೆಗೆ ಮುಂಗಾರು ಮಳೆಯ ಅವಧಿಯಾಗಿದ್ದು, ರೈತರು ಬಿತ್ತನೆ, ಇತರ ಕೃಷಿ ಚುಟುವಟಿಕೆಗಾಗಿ ಜಮೀನು ಹದ ಮಾಡಿಕೊಂಡು ಮುಂಗಾರು ಮಳೆಗೆ ಕಾಯುತ್ತಿದ್ದಾರೆ.
2025 ಮುಂಗಾರು ಮಳೆ ಅಪ್ಡೇಟ್ಸ್
ದಕ್ಷಿಣ ರಾಜ್ಯದಾದ್ಯಂತ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳು ಪೂರೈಸಿದ ನಂತರ IMD ಔಪಚಾರಿಕವಾಗಿ ಮಾನ್ಸೂನ್ ಆರಂಭವನ್ನು ಘೋಷಿಸುತ್ತದೆ. ಅಲ್ಲಿಂದ, ಮಾನ್ಸೂನ್ ಸಾಮಾನ್ಯವಾಗಿ ಜುಲೈ 8 ರ ವೇಳೆಗೆ ಇಡೀ ದೇಶಾದ್ಯಂತ ಹರಡುತ್ತದೆ, ಸೆಪ್ಟೆಂಬರ್ 17 ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ ಮತ್ತು ಅಕ್ಟೋಬರ್ 15 ರ ವೇಳೆಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ.
ಕೇಳೆ ಮಾರ್ಗವಾಗಿ ಬರುವ ಮುಂಗಾರು ಮಳೆ ಕೆಲವೇ ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶವ್ಯಾಪಿ ರಾಜ್ಯಗಳಿಗೆ ವಿಸ್ತರಣೆ ಗೊಳ್ಳಲಿದೆ. ಮಳೆಯಿಂದ ಕೃಷಿ, ಕೃಷಿಯಿಂದ ದೇಶದ ಆಹಾರ ಪೂರೈಕೆ ನಿರ್ಧಾರವಾಗುತ್ತದೆ. ಮುಂಗಾರು ಮಳೆ ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತದೆ.












Click it and Unblock the Notifications