Rain Alert: ಮತ್ತೆ ಚಂಡಮಾರುತ ಪ್ರಸರಣ! ಈ ಭಾಗಗಳಲ್ಲಿ ಮುಂದಿನ 5 ದಿನ ಭಾರೀ ಮಳೆ, ಮುನ್ಸೂಚನೆ

IMD Weather Forecast: ಭಾರತಾದ್ಯಂತ ಚುರುಕಾಗಿದ್ದ ಮುಂಗಾರು ಮಳೆ ದಕ್ಷಿಣ ಭಾಗದ ರಾಜ್ಯಗಳಲ್ಲಿ ತುಸು ದುರ್ಬಲಗೊಂಡಿದೆ. ಉತ್ತರ ಭಾರತದ ರಾಜ್ಯಗಳ ಅನೇಕ ಕಡೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ. ಆ ಭಾಗಗಳಲ್ಲಿ ಹಾಗೂ ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ಪರಿಚಲನೆ, ವಾಯುಭಾರ ಕುಸಿತದಂತಹ ವೈಪರೀತ್ಯಗಳ ಪ್ರಭಾವವು ಮತ್ತೆ ಧಾರಾಕಾರ ಮಳೆಗೆ ಕಾರಣವಾಗಿದೆ. ಹಾಗಾದ್ರೆ ಯಾವೆಲ್ಲ ಭಾಗಗಳಲ್ಲಿ ಸಾಧಾರಣ, ಭಾರೀ ಮತ್ತು ಅತೀ ಭಾರಿ ಮಳೆ ಆಗಲಿದೆ ಎಂಬ ವಿವರ ಇಲ್ಲಿದೆ.

ಭಾರತೀಯ ಹವಾಮಾನ ಇಲಾಖೆ ಸೋಮವಾರ ನೀಡಿರುವ ಮಾಹಿತಿ ಪ್ರಕಾರ, ಮಧ್ಯಪ್ರದೇಶದ ಈಶಾನ್ಯ ಪ್ರದೇಶಗಳಲ್ಲಿ ಇಂದು ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ. ಇದು ಉತ್ತರ ಪ್ರದೇಶದ ಕಡೆ ಓರೆಯಾಗಿದೆ. ಈ ವಾಯು ಚಂಡಮಾರುತ ಪ್ರಸರಣವು ಸಮುದ್ರ ಮಟ್ಟದಿಂದ 5.8 ಕಿಲೋ ಮೀಟರ್‌ವರೆಗೆ ವಿಸ್ತರಣೆ ಆಗಿದೆ. ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ-ವಾಯುವ್ಯಕ್ಕೆ ಚಲಿಸುವ ಸಾಧ್ಯತೆ ಇದೆ.

IMD Predication Heavy Rain Alert Many North Parts of India Due to Cyclonic Circulation

ಮುಂಗಾರು ಸ್ಟ್ರಫ್ ಜೈಪುರ ಮೂಲಕ ಹಾದು ಹೋಗಲಿದೆ. ದಕ್ಷಿಣ ಉತ್ತರ ಪ್ರದೇಶದ ಮಧ್ಯ ಭಾಗಗಳು ಮತ್ತು ಪಕ್ಕದ ಉತ್ತರ ಮಧ್ಯಪ್ರದೇಶ, ಪ್ರಯಾಗರಾಜ್, ಡಾಲ್ಟೊಂಗಂಜ್, ಬಂಕುರಾ, ದಿಘಾ ಮತ್ತು ಬಂಗಾಳ ಕೊಲ್ಲಿ ಈಶಾನ್ಯ ಭಾಗದಲ್ಲಿ ಕಡಿಮೆ ಒತ್ತಡವು ಸೃಷ್ಟಿಯಾಗಲಿದೆ. ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಸಮುದ್ರ ಮಟ್ಟದಿಂದ 1.5 ಮತ್ತು 5.8 ಕಿ.ಮೀ ಎತ್ತರದಲ್ಲಿ ಚಂಡಮಾರುತ ಪ್ರಸರಣ ನಿರ್ಮಾಣವಾಗಿದೆ.

ರಾಜಸ್ಥಾನ, ಪಶ್ಚಿಮ ಬಂಗಾಳ ಕರಾವಳಿಯ ವಾಯುವ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದ ಪ್ರಸರಣದ ಗಾಳಿ ತೀವ್ರಗೊಂಡಿದೆ. ಉತ್ತರ ಮಧ್ಯಪ್ರದೇಶ, ಜಾರ್ಖಂಡ್, ಗಂಗಾನದಿಯ ಪಶ್ಚಿಮ ಬಂಗಾಳದ ದಕ್ಷಿಣ ಭಾಗಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಿಂದ ಬಂಗಾಳಕೊಲ್ಲಿಯವರೆಗೆ ಒಂದು ಬಿರುಗಾಳಿ ಚಲನೆ ಇದೆ. ಇದರ ಪ್ರಭಾವದಿಂದ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮಳೆ ಮುಂದಿನ ದಿನಗಳಲ್ಲಿ ಚುರುಕಾಗಲಿದೆ. ಸದ್ಯ ಉತ್ತರ ಭಾರತದ ರಾಜ್ಯಗಳಲ್ಲಿ ಆಗಸ್ಟ್ 25ರಿಂದ 30 ರವರೆಗೆ ಭಾರೀ ಮಳೆ ಆಗಲಿದೆ.

ಎಲ್ಲೆಲ್ಲಿ ಭಾರೀ ಮಳೆ ಎಚ್ಚರಿಕೆ ಇದೆ?

ಆಗಸ್ಟ್ 25ರಿಂದ 27ರವರೆಗೆ ಗುಜರಾತ್, ಒಡಿಶಾ ಮತ್ತು ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಧಿಕ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ನಂತರ ಅಸ್ಸಾಂ ಮತ್ತು ಮೇಘಾಲಯ, ಕರಾವಳಿ ಆಂಧ್ರಪ್ರದೇಶ, ಕರ್ನಾಟಕ ಕರಾವಳಿ, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕೇರಳ, ಕೊಂಕಣ ಮತ್ತು ಗೋವಾ, ಮಧ್ಯಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಪಂಜಾಬ್ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ. ಈ ರಾಜ್ಯಗಳ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಬಿರುಗಾಳಿ ಸಹಿತ ವ್ಯಾಪಕ ಮಳೆ

ಬಿಹಾರ, ಗುಜರಾತ್ ರಾಜ್ಯ, ಕರ್ನಾಟಕದ ಒಳನಾಡು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂಲ್ಲಿ ಹಾಗೂ ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನಗಳಲ್ಲಿ ಸಾಮಾನ್ಯದಿಂದ ಜೋರು ಮಳೆ ನಿರೀಕ್ಷೆ ಇದೆ. ಅರೇಬಿಯನ್ ಸಮುದ್ರದ ತೀರ ಭಾಗದಲ್ಲಿ ಪ್ರತಿ ಗಂಟೆಗೆ 55 ಕಿ.ಮೀ- 65 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು. ಹವಾಮಾನ ಇಲಾಖೆ ಆಯಾ ಭಾಗದ ವಿವಿಧ ಜಿಲ್ಲೆಗಳಲ್ಲಿ ಮಳೆ, ಪ್ರವಾಹ ಎಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+