IMD Rain Alert: ವೈಪರೀತ್ಯಗಳ ತೀವ್ರತೆ: ಈ ಭಾಗಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ

IMD Weather Forecast: ಬದಲಾದ ಹವಾಮಾನ ವೈಪರೀತ್ಯಗಳಿಂದ ಮುಂದಿನ ಮೂರು ದಿನ ಮಣಿಪುರ, ರಾಜಸ್ತಾನ, ಆಂಧ್ರ ಪ್ರದೇಶ, ತಮಿಳುನಾಡು, ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆ ಆಗಲಿದೆ. ಇದಷ್ಟೇ ಅಲ್ಲದೇ ಚಂಡಮಾರುತ ಪ್ರಸರಣದ ಪ್ರಭಾವವು ವಿವಿಧ ಭಾಗಗಳಲ್ಲಿ ಮುಂದುವರಿಯುಲಿದ್ದು, ಇದರಿಂದ ಬಿರುಗಾಳಿ ಸಹತ ಮಳೆಗೆ ರಾಜ್ಯಗಳು ಸಾಕ್ಷಿಯಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾದ ಮೇಲೆ ಉಂಟಾದ ಕಡಿಮೆ ಒತ್ತಡದ ಪ್ರದೇಶವು ಈಗ ಉತ್ತರ ತೆಲಂಗಾಣ ಮತ್ತು ಪಕ್ಕದ ವಿದರ್ಭದ ಭಾಗದಲ್ಲಿ ನೆಲೆಸಿದೆ. ಇತ್ತ ಚಂಡಮಾರುತ ಪ್ರಸರಣವು ಸಮುದ್ರ ಮೇಲ್ಮೈನಿಂದ 5.8 ಕಿ.ಮೀ. ಎತ್ತರದವರೆಗೆ ವಿಸ್ತರಣೆಯಾಗಿದೆ. ಈ ವೈಪರೀತ್ಯ ಮುಂದಿನ ಎರಡು ದಿನಗಳಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದೆ.

IMD Issues Orange Alert Heavy Rain Forecast Across Northeast South and Central India

ಮುಂಗಾರು ಸ್ಟ್ರಫ್ ಗಂಗಾನಗರ, ಸಿರ್ಸಾ, ಗ್ವಾಲಿಯರ್, ಜಬಲ್ಪುರ, ಉತ್ತರ ತೆಲಂಗಾಣ ಮತ್ತು ವಿದರ್ಭದಿಂದ ಕಳಿಂಗಪಟ್ಟಣಂ ಮೂಲಕ ಪೂರ್ವ ಮಧ್ಯ ಬಂಗಾಳ ಕೊಲ್ಲಿವರೆಗೆ ಹಾದು ಹೋಗುತ್ತಿದೆ. ನೈಋತ್ಯ ಬಿಹಾರ, ಈಶಾನ್ಯ ಬಾಂಗ್ಲಾದೇಶ, ಈಶಾನ್ಯ ರಾಜಸ್ಥಾನ, ದಕ್ಷಿಣ ಮಹಾರಾಷ್ಟ್ರ ಹಾಗೂ ದಕ್ಷಿಣ ಒಳನಾಡು ಕರ್ನಾಟಕದಿಂದ ಮನ್ನಾರ್ ಕೊಲ್ಲಿವರೆಗೆ ಚಂಡಮಾರುತ ಪ್ರಸರಣದ ಬಿರುಗಾಳಿ ಬೀಸಿದೆ.

ಎಲ್ಲೆಲ್ಲಿ ಭಾರಿ ಮಳೆ ಎಚ್ಚರಿಕೆ

ವೈಪರೀತ್ಯಗಳ ಪ್ರಭಾವದಿಂದಾಗಿ ಈಶಾನ್ಯ ಭಾರತದಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಸೆಪ್ಟೆಂಬರ್ 14ರಿಂದ 19ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಉಳಿದ ಕೆಲವೆಡೆ ಸಾಧಾರಣ ಮಳೆ ಆಗಲಿದೆ. ಗಾಳಿಯ ವೇಗ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರಲಿದೆ.

ಇನ್ನೂ ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಸೆಪ್ಟೆಂಬರ್ 16ರಿಂದ 19ರವರೆಗೆ, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಉತ್ತರ ಒಳನಾಡು ಕರ್ನಾಟಕದಲ್ಲಿ ಸೆಪ್ಟೆಂಬರ್ 14ರಿಂದ 17ರವರೆಗೆ ಗುಡಗು, ಮಿಂಚು ಸಹಿತ ಭಾರೀ ಮಳೆ ಲಕ್ಷಣಗಳು ಇವೆ. ಪೂರ್ವ ಮತ್ತು ಮಧ್ಯ ಭಾರತದಲ್ಲಿ ಪಶ್ಚಿಮ ಹಾಗೂ ಪೂರ್ವ ಮಧ್ಯಪ್ರದೇಶ, ವಿದರ್ಭ, ಒಡಿಶಾ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಸಹ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಆರೆಂಜ್‌ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+