Rain Alert: ಸೈಕ್ಲೋನ್ ಎಫೆಕ್ಟ್: ಅಕ್ಟೋಬರ್ 03ರತನಕ ಈ ಭಾಗಗಳಲ್ಲಿ ಭೀಕರ ಮಳೆ ಮುನ್ಸೂಚನೆ
IMD Weather Forecast: ಮುಂಗಾರು ಮಳೆಯು ವಿವಿಧ ರಾಜ್ಯಗಳಲ್ಲಿ ಹಿಂತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ. ಅಂದರೆ ವಿವಿಧ ರಾಜ್ಯಗಳಲ್ಲಿ ಮಳೆ ದುರ್ಬಲಗೊಳ್ಳಲು ಅನುಕೂಲಕರ ವಾತಾವರಣ ಇಲ್ಲ. ಬದಲಾಗಿ ಸೃಷ್ಟಿಯಾದ ಮತ್ತು ತೀವ್ರಗೊಳ್ಳುವ ವೈಪರೀತ್ಯಗಳ ಪ್ರಭಾವದಿಂದ ಮತ್ತೆ ವಿವಿಧ ಭಾಗಗಳಲ್ಲಿ ಮುಂದಿನ ಏಳು ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 07 ದಿನಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಕಳೆದ ಆರು ಗಂಟೆಗಳಲ್ಲಿ 43 ಕಿ.ಮೀ ವೇಗದಲ್ಲಿ ಪಶ್ಚಿಮಕ್ಕೆ ಚಲಿಸುತ್ತಿದೆ. ಪ್ರಸ್ತುತ ಪಶ್ಚಿಮ ವಿದರ್ಭದ ಅಕೋಲಾ ಸಮೀಪದಲ್ಲಿರುವ ಈ ವೈಪರೀತ್ಯವು ಮುಂದಿನ ಹನ್ನೆರಡು ಗಂಟೆಗಳಲ್ಲಿ ಕ್ರಮೇಣ ದುರ್ಬಲಗೊಳ್ಳಬಹುದು. ನಂತರ ಅದರ ಪ್ರಭಾವ ತಗ್ಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಸೆಪ್ಟೆಂಬರ್ 30ರಂದು ಉತ್ತರ ಅಂಡಮಾನ್ ಸಮುದ್ರದಲ್ಲಿ ಮೇಲ್ಮುಖ ವಾಯುಭಾರ ಚಂಡಮಾರುತ ಹೊರಹೊಮ್ಮುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ ಅಕ್ಟೋಬರ್ 1ರಂದು ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳಲಿದೆ. ಇದರ ಪರಿಣಾಮವಾಗಿ ಹಲವು ರಾಜ್ಯಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಇದರ ಪರಿಣಾಮದಿಂದಾಗಿ ಕರಾವಳಿ ರಾಜ್ಯಗಳಲ್ಲಿ ಬಿರುಗಾಳಿ, ಗುಡುಗು, ಮಿಂಚು ಸಹಿತ ರಣ ಭೀಕರ ಮಳೆ ಆಗಲಿದೆ. ಗುಜರಾತ್, ಕೊಂಕಣ್, ಗೋವಾರ, ಮಧ್ಯ ಮಹಾರಾಷ್ಟ್ರಗಳಿಗೆ ಇಂದು 'ರೆಡ್ ಅಲರ್ಟ್' ನೀಡಲಾಗಿದೆ.
ಮುಂದಿನ ಏಳು ದಿನಗಳಲ್ಲಿ ಮಹಾರಾಷ್ಟ್ರ, ಗುಜರಾತ್ ಹಾಗೂ ಪಕ್ಕದ ಪ್ರದೇಶಗಳಲ್ಲಿ ಸೆಪ್ಟೆಂಬರ್ 28ರಿಂದ 30ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಮರಾಠವಾಡ, ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಸೆ. 29ರಂದು ಅತಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಮಧ್ಯ ಮಹಾರಾಷ್ಟ್ರ, ಉತ್ತರ ಕೊಂಕಣ ಹಾಗೂ ಘಾಟ್ ಪ್ರದೇಶಗಳಲ್ಲೂ ಮಳೆಯ ತೀವ್ರತೆ ಹೆಚ್ಚಾಗಲಿದೆ.
ದೇಶದ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಸೆಪ್ಟಂಬರ್ ಅಂತ್ಯಕ್ಕೆ ಮಳೆ ಅಬ್ಬರಿಸಲಿದೆ. ಈ ಮಹಾಮಳೆ ಅಕ್ಟೋಬರ್ 3ರವರೆಗೆ ಮುಂದುವರಿಯಲಿದೆ. ಇದರೊಂದಿಗೆ ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿಯೂ ಅಕ್ಟೋಬರ್ ಮೊದಲ ವಾರದಲ್ಲಿ ಗುಡುಗು ಸಹಿತ ಭಾರೀ ಮಳೆ ಸಂಭವಿಸಲಿದೆ ಎಂದು ಐಎಂಡಿ ತಿಳಿಸಿದೆ.
ಕರಾವಳಿ ರಾಜ್ಯಗಳನ್ನು ಒಳಗೊಂಡಿರುವ ದಕ್ಷಿಣ ಭಾರತದಲ್ಲಿ ಕೇರಳ, ಮಾಹೆ, ತೆಲಂಗಾಣ ಮತ್ತು ಉತ್ತರ ಒಳನಾಡು ಕರ್ನಾಟಕ ಕರಾವಳಿ ಭಾಗದಲ್ಲಿ ಮಳೆ ಸಕ್ರಿಯವಾಗಲಿದೆ. ಕಳೆದೊಂದು ವಾರದಿಂದ ಈ ಭಾಗದಲ್ಲಿ ಮಳೆ ಆಗುತ್ತಿದ್ದು, ಈ ಮಳೆ ಅಕ್ಟೋಬರ್ 3ರವರೆಗೆ ಮತ್ತೆ ಧಾರಾಕಾರ ಮಳೆ ಮುನ್ಸೂಚನೆ ಇದೆ ಎಂದು ಭಾನುವಾರದ ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications