ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಆಸ್ಪತ್ರೆಗಳ ಹೊಸ ಕಾಯ್ದೆ: ಶನಿವಾರ ದೇಶಾದ್ಯಂತ ಆಸ್ಪತ್ರೆ ಬಂದ್‌

By Nayana
|
Google Oneindia Kannada News

ಬೆಂಗಳೂರು, ಜು.27: ನ್ಯಾಷನಲ್‌ ಕಮಿಷನ್‌ ಬಿಲ್‌(ಎನ್‌ಎಂಸಿ) ಕಾಯ್ದೆ ವಿರೋಧಿಸಿ ಭಾರತೀಯ ವೈದ್ಯಸಂಘ ದೇಶಾದ್ಯಂತ ಶನಿವಾರ(ಜು.28) ಖಾಸಗಿ ಆಸ್ಪತ್ರೆಗಳ ಬಂದ್‌ಗೆ ಕರೆ ಕೊಟ್ಟಿವೆ.

2,15,000ಕ್ಕೂ ಹೆಚ್ಚಿನ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ, 12 ಗಂಟೆಗಳ ಕಾಲ ದೇಶವ್ಯಾಪತಿ ಮುಷ್ಕರ ಹಮ್ಮಿಕೊಂಡಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸ್ಥಗಿತಗೊಳ್ಳಲಿದೆ. ತುರ್ತು ಚಿಕಿತ್ಸಾ ಸೌಲಭ್ಯ, ಔಷಧಿ ಅಂಗಡಿಗಳು ಮತ್ತು ಒಳರೋಗಿ ವಿಭಾಗ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಕಿಮ್ಸ್‌ ಆಸ್ಪತ್ರೆ:ಸಿಗದ ಭರವಸೆ,ಮುಗಿಯದ ಪ್ರತಿಭಟನೆ,ರೋಗಿಗಳ ಗೋಳು ಕಿಮ್ಸ್‌ ಆಸ್ಪತ್ರೆ:ಸಿಗದ ಭರವಸೆ,ಮುಗಿಯದ ಪ್ರತಿಭಟನೆ,ರೋಗಿಗಳ ಗೋಳು

12 ಗಂಟೆಗಳ ಕಾಲ ಓಪಿಡಿ ಬಂದ್‌ ಆಗಿರುತ್ತದೆ.ಎನ್‌ಎಂಸಿ ವಿಧೇಯಕವನ್ನು ಭಾರತೀಯ ವೈದ್ಯಕೀಯ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದೇಶಾದ್ಯಂತ ಮುಷ್ಕರ ಹಮ್ಮಿಕೊಳ್ಳುವ ಮೂಲಕ 'ಕರಾಳ ದಿನ'ವನ್ನು ಆಚರಿಸಲು ನಿರ್ಧರಿಸಿದೆ.

IMA called a 12-hour nationwide strike on July 28

ಕೇಂದ್ರ ಸರ್ಕಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಒಂದು ದಿನ ಸಾಂಕೇತಿಕ ಮುಷ್ಕರ ನಡೆಯಲಿದೆ. ಹೀಗಾಗಿ ಅಂದು ತುರ್ತು ಸೇವೆ ಹೊರತುಪಡಿಸಿ, ಉಳಿದ ಒಪಿಡಿ, ಪ್ರಯೋಗಾಲಯ ಸೇರಿದಂತೆ ವೈದ್ಯಕೀಯ ಸೇವೆ ಅಲಭ್ಯವಾಗಲಿದೆ.

ಎನ್‍ಎಂಸಿ ಮಸೂದೆ ಕೈ ಬಿಡುವಂತೆ ಒತ್ತಾಯಿಸಿ ವೈದ್ಯರು ಈ ಹಿಂದೆಯೂ ಸಾಕಷ್ಟು ಬಾರಿ ಹೋರಾಟ ಕೈಗೊಂಡಿದ್ದರು. ಈಗ ಮತ್ತೆ ಹೋರಾಟ ತೀವ್ರಗೊಳಿಸಲು ನಿರ್ಧಾರ ಕೈಗೊಂಡಿದ್ದಾರೆ.

ಏನಿದು ಎನ್‍ಎಂಸಿ ಮಸೂದೆ?: ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರ ಹಾಗೂ ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 'ರಾಷ್ಟ್ರೀಯ ವೈದ್ಯಕೀಯ ಆಯೋಗ-2017' ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.

ಈಗಿರುವ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ಅನ್ನು ವಿಸರ್ಜಿಸಿ ಅದರ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.

ಹರಿಗೆ ಇನ್ನುಳಿದ ತುರ್ತು ಚಿಕಿತ್ಸೆಗೆ ಅನುಮತಿ ಇರುತ್ತದೆ. ಸರ್ಕಾರವು ಎನ್‌ಎಂಸಿ ಕಾಯ್ದೆ ಹಿಂಪಡೆದರೆ ಅಥವಾ ಭರವಸೆ ನೀಡಿದರೆ ಮಾತ್ರ ಮುಷ್ಕರವನ್ನು ಕೈಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ. ವೈದ್ಯರ ವಿರೋಧ ಹಿನ್ನೆಲೆಯಲ್ಲಿ ಎನ್‌ಎಂಸಿ ಮಸೂದೆಯನ್ನು ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ನೀಡಬೇಕೆಂದು ಪ್ರತಿ ಪಕ್ಷಗಳಿಂದ ಈಗಾಗಲೇ ಒತ್ತಾಯ ಮಾಡಲಾಗಿದೆ.

English summary
Opposing National Medical Commission Bill 2017, Indian Medical Association had called 12 hours medical service bandh on July 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X