ಬೆಂಗಳೂರಲ್ಲಿ ಒತ್ತುವರಿ ಮಾಡಿದವರಿಗೆ ಶಾಕ್, 18.85 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಒತ್ತುವರಿ ತೆರವು!
ಬೆಂಗಳೂರಿನಲ್ಲಿ ಒತ್ತುವರಿ ಮಾಡುವವರ ಕಾಟ ಜೋರಾಗಿದೆ, ಇವತ್ತು ಮಧ್ಯಾಹ್ನ ಇದ್ದ ಕೆರೆ ನಾಳೆ ಬೆಳಗ್ಗೆಗೆ ಮಾಯ ಆಗಿ ಹೋಗಿರುತ್ತದೆ. ಹೀಗೆ ಎಲ್ಲೆಂದರಲ್ಲಿ ಕೆರೆಗಳನ್ನ & ಗೋಮಾಳ ಸೇರಿದಂತೆ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಳ್ಳುವ ಕಳ್ಳರ ಕಾಟ ಹೆಚ್ಚಾಗಿದೆ. ಆದರೆ ಭೂಗಳ್ಳರಿಗೆ ಸರಿಯಾದ ಪಾಠ ಕಲಿಸಲು ಇದೀಗ ಬೆಂಗಳೂರು ಜಿಲ್ಲಾಡಳಿತ ಎಂಟ್ರಿ ಕೊಟ್ಟಿದೆ. ಭೂಮಿ ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರಿಗೆ ಆಘಾತ ನೀಡುತ್ತಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒತ್ತುವರಿ ಆಗಿರುವ 18.85 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನ ಒಂದೇ ದಿನ ತೆರವು ಮಾಡಲಾಗಿದೆ. 8 ಎಕರೆ 0.27 ಗುಂಟೆ ಸರ್ಕಾರಿ ಜಮೀನನ್ನ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆದಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಭೂಗಳ್ಳರಿಗೆ ವಾರ್ನಿಂಗ್ ರವಾನೆಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳ ತಹಶಿಲ್ದಾರರು ತಮ್ಮ ತಮ್ಮ ವ್ಯಾಪ್ತಿ ಒತ್ತುವರಿ ಕಾರ್ಯಾಚರಣೆ ನಡೆಸಿದರು. ಒತ್ತುವರಿಯಾಗಿದ್ದ ಗೋಮಾಳ, ಗುಂಡುತೋಪು & ಸ್ಮಶಾನ ಹಾಗೂ ಕುಂಟೆ, ಸರ್ಕಾರಿ ಮುಫತ್ ಕಾವಲ್, ಸರ್ಕಾರಿ ಕಟ್ಟೆಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಕೆಂಗೇರಿ ಹೋಬಳಿಯಲ್ಲಿ 1 ಎಕರೆ ಜಮೀನು!
ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಅಗರದ ಸರ್ವೆ ನಂ 28ರ ಸರ್ಕಾರಿ ಮುಫತ್ ಕಾವಲ್‌ನ ಒತ್ತುವರಿ ತೆರವುಗೊಳಿಸಲಾಗಿದೆ. ಇದರ ಒಟ್ಟಾರೆ ವಿಸ್ತಿರ್ಣವು 1 ಎಕರೆ 0.05 ಗುಂಟೆ ಆಗಿದೆ. ಹಾಗೇ, ಇದರ ಅಂದಾಜು ಮೌಲ್ಯ 2.00 ಕೋಟಿ ರೂಪಾಯಿ ಎಂದು ಅಂದಾಜನ್ನು ಮಾಡಲಾಗಿದೆ. ಕೆಂಗೇರಿ ಹೋಬಳಿಯ ಕಣಮಿಣಕೆಯ ಸರ್ವೆ ನಂ. 84ರ ಸರ್ಕಾರಿ ಕಟ್ಟೆ 0.12 ಗುಂಟೆ ತೆರವು ಮಾಡಲಾಗಿದ್ದು, ಇದರ ಅಂದಾಜು ಮೌಲ್ಯ ಭರ್ಜರಿ 2.20 ಕೋಟಿ ರೂಪಾಯಿ ಎನ್ನಲಾಗಿದೆ.
ಹಾಗೇ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ತಿಗಳಚೌಡೇನಹಳ್ಳಿ ಗ್ರಾಮದ ಸ.ನಂ 81ರ ಕುಂಟೆಯ 0.05 ಗುಂಟೆ ಒತ್ತುವರಿ ತೆರವು, ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿ ಅರಕೆರೆ ಗ್ರಾಮದ ಸ.ನಂ 127ರ. ಸ್ಮಶಾನ ಒತ್ತುವರಿ ಹಾಗೂ ಮತ್ಕೂರು ಗ್ರಾಮದ ಸ.ನಂ. 64ರ ಸ್ಮಶಾನ ಒತ್ತುವರಿ ತೆರವು ಮಾಡಲಾಗಿದೆ. ಜಾಲ ಹೋಬಳಿ ಹುತ್ತನಹಳ್ಳಿ ಗ್ರಾಮದ ಸ.ನಂ. 73ರ ಸರ್ಕಾರಿ ಗೋಮಾಳ ಒತ್ತುವರಿ ತೆರವುಗೊಳಿಸಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ವಶಕ್ಕೆ ಪಡೆಯಲಾಗಿದೆ.
ಕೋಟಿ ಕೋಟಿ ರೂಪಾಯಿ ಮೌಲ್ಯದ ಜಮೀನು
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಕಡಬಗೆರೆ ಗ್ರಾಮ ಸರ್ವೆ ನಂ. 63ರ ಸರ್ಕಾರಿ ಗುಂಡುತೋಪು ಒತ್ತುವರಿ ತೆರವು ಮಾಡಲಾಗಿದ್ದು, ಇದರ ಅಂದಾಜು ಮೌಲ್ಯವೇ ಭರ್ಜರಿ 1 ಕೋಟಿ ರೂಪಾಯಿ ಎನ್ನಲಾಗಿದೆ. ಕಡಬಗೆರೆ ಗ್ರಾಮದ ಸರ್ವೆ ನಂಬರ್ 95ರ ಸರ್ಕಾರಿ ಗುಂಡುತೋಪು ಒತ್ತುವರಿ ತೆರವುಗೊಳಿಸಲಾಗಿದೆ. ದಾಸನಪುರ ಹೋಬಳಿ ಹುಲ್ಲೇಗೌಡೇನಹಳ್ಳಿ ಗ್ರಾಮದ ಸರ್ವೆ ನಂಬರ್ 58ರ ಸರ್ಕಾರಿ ಗೋಮಾಳ ಒತ್ತುವರಿ ತೆರವು ಮಾಡಲಾಗಿದೆ. ಒಟ್ಟು 3 ಎಕರೆ ಭೂಮಿ ತೆರವು ಮಾಡಲಾಗಿದ್ದು, ಅಂದಾಜು ಮೌಲ್ಯ 6 ಕೋಟಿ ರೂಪಾಯಿ ಆಗಿದೆ.
-
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ












Click it and Unblock the Notifications