‘ಸರ್, ಪ್ರತಿದಿನ ಮಧ್ಯಾಹ್ನ ಆಫೀಸಿನಲ್ಲಿ 30 ನಿಮಿಷ ನಿದ್ದೆ ಮಾಡ್ತೀನಿ’: GenZ ಬೇಡಿಕೆಗೆ ಶಾಕ್ ಆದ CEO ನಿತಿನ್ ವರ್ಮಾ

ನವದೆಹಲಿ: ಇಂಟರ್ವ್ಯೂವ್‌ನಲ್ಲಿ ಅಭ್ಯರ್ಥಿಗಳು ಕಂಪನಿಯ ರೂಲ್ಸ್‌ ಆಂಡ್‌ ರೆಗ್ಯುಲೇಶನ್ಸ್‌ , ಸ್ಯಾಲರಿ ಅಥವಾ ರಜೆಗಳ ಬಗ್ಗೆ ಕೇಳುವುದನ್ನಾ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ. ಆದರೆ ಇಂದಿನ ಈ ಜೆನ್‌ ಜೀ ಪೀಳಿಗೆಯವರು ಹಳೆಯ ಕಾರ್ಪೊರೇಟ್ ಸಂಸ್ಕೃತಿಯನ್ನೇ ಬದಲಿಸುತ್ತಿದ್ದಾರೆ ನೋಡಿ.

ಹೌದು, ಕೆಲಸದ ಇಂಟರ್ವ್ಯೂವ್‌ನಲ್ಲಿ ಯುವಕನೊಬ್ಬ 'ಸಾರ್, ನನಗೆ ಪ್ರತಿದಿನ ಮಧ್ಯಾಹ್ನ 30 ನಿಮಿಷ ನಿದ್ದೆ ಮಾಡಲು ಅವಕಾಶ ಬೇಕು' ಎಂದು ನೇರವಾಗಿ ಕೇಳಿದ ಘಟನೆ ನಡೆದಿದ್ದು, ಈ ಕುರಿತು ಕಂಪನಿಯ ಸಂಸ್ಥಾಪಕರು ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

IITian founder

ಉದ್ಯೋಗ ಸಂದರ್ಶನದಲ್ಲಿ ಜೆನ್ ಜೀಯ ಅಚ್ಚರಿಯ ಬೇಡಿಕೆ

ನೋಯ್ಡಾ ಮೂಲದ ಸ್ಟಾರ್ಟಪ್‌ವೊಂದರ ಸಂಸ್ಥಾಪಕ ಹಾಗೂ ಐಐಟಿ ಪದವೀಧರರಾಗಿರುವ ನಿತಿನ್ ವರ್ಮಾ ಅವರು ಲಿಂಕ್ಡ್‌ಡಿನ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇಂಟರ್ವ್ಯೂವ್‌ನಲ್ಲಿ ಜೆನ್ ಜೀ ಅಭ್ಯರ್ಥಿಯೊಬ್ಬ ಒಂದು ಚೂರು ಹೆದರದೆ, ಹಿಂಜರಿಯದೆ, "ಸಾರ್, ನನಗೆ ಪ್ರತಿದಿನ ಮಧ್ಯಾಹ್ನ 30 ನಿಮಿಷಗಳ ಕಿರುನಿದ್ದೆ ಅವಕಾಶಬೇಕು. ಇದು ನನ್ನ ಕಾರ್ಯಕ್ಷಮತೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ" ಎಂದು ಹೇಳಿದ್ದಾನೆ.

ಈ ಮಾತನ್ನು ಆತ ತಮಾಷೆಗಾಗಿ ಅಥವಾ ಭಯದಿಂದ ಹೇಳದೆ, ಎಲ್ಲರೂ ಸ್ಯಾಲರಿ ಬಗ್ಗೆ ಹೇಗೆ ಸಾಮಾನ್ಯವಾಗಿ ಮಾತಾಡುವಷ್ಟೇ ಆತ್ಮವಿಶ್ವಾಸದಿಂದ ಕೇಳಿದ್ದನ್ನ ಕಂಡು ನಿತಿನ್ ವರ್ಮಾ ಆಶ್ಚರ್ಯ ಪಟ್ಟಿದ್ದಾರೆ.

ನಿದ್ದೆಯ ಪ್ರಯೋಜನಗಳ ಬಗ್ಗೆ ಸಿಇಒ ಚಿಂತನೆ

ಅಭ್ಯರ್ಥಿಯ ಈ ಮಾತನ್ನ ಕೇಳಿದ ತಕ್ಷಣ ಇಂಟರ್ವ್ಯೂವ್‌ ಅನ್ನಾ ಅಲ್ಲಿಗೆ ಮುಗಿಸಬೇಕು ಎಂಬುದು ನಿತಿನ್ ಅವರ ಮೊದಲ ಆಲೋಚನೆಯಾಗಿತ್ತು. ಆದರೆ, ಆತನ ನೇರ ನುಡಿ ಅವರನ್ನ ಆಳವಾಗಿ ಯೋಚಿಸುವಂತೆ ಮಾಡಿತು. "ಆತ ಹೇಳಿದ್ದು ತಪ್ಪೇ? ಮಧ್ಯಾಹ್ನದ ಕಿರುನಿದ್ದೆಯಿಂದ ನೆನಪಿನ ಶಕ್ತಿ, ಏಕಾಗ್ರತೆ ಹಾಗೂ ಕೆಲಸದ ಉತ್ಸಾಹ ಹೆಚ್ಚಾಗುತ್ತದೆ ಎಂಬ ವೈಜ್ಞಾನಿಕ ಅಧ್ಯಯನಗಳನ್ನ ನಾನು ಕೂಡ ಓದಿದ್ದೇನೆ.

ವಾಸ್ತವವಾಗಿ ಕಾರ್ಪೊರೇಟ್ ಜಗತ್ತಿನ ಅರ್ಧದಷ್ಟು ಉದ್ಯೋಗಿಗಳು ಮಧ್ಯಾಹ್ನ 3 ಗಂಟೆಯ ಮೀಟಿಂಗ್‌ಗಳಲ್ಲಿ ತೂಕಡಿಸುತ್ತಿರುತ್ತಾರೆ. ಆದರೆ ಈ ಯುವಕ ತನ್ನ ಅವಶ್ಯಕತೆಯನ್ನ ಮುಚ್ಚಿಡದೆ ಪ್ರಾಮಾಣಿಕವಾಗಿ ಕೇಳುವ ಧೈರ್ಯ ತೋರಿದ್ದಾನೆ" ಎಂದು ನಿತಿನ್ ವರ್ಮಾ ಬರೆದುಕೊಂಡಿದ್ದಾರೆ.

ಕಚೇರಿ ಸಮಯಕ್ಕಿಂತ ಕೆಲಸದ ಫಲಿತಾಂಶಕ್ಕೆ ಆದ್ಯತೆ

ಇಂಟರ್ವ್ಯೂವ್‌ನಲ್ಲಿ ಹೆಚ್ಚಿನವರು ತಮ್ಮ ನಿಜವಾದ ವ್ಯಕ್ತಿತ್ವವನ್ನ ಮುಚ್ಚಿಟ್ಟು ಆಫೀಸ್ಸ್‌ ಮತ್ತು ಇಂಟರ್‌ವ್ಯೂವ್‌ ಮಾಡುವವರನ್ನ ಇಷ್ಟವಾಗುವಂತೆ ನಟಿಸುತ್ತಾರೆ. ಆದರೆ, ತಾನು ಹೇಗೆ ಉತ್ತಮವಾಗಿ ಕೆಲಸ ಮಾಡಬಲ್ಲೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ ಅಭ್ಯರ್ಥಿಯ ಪ್ರಾಮಾಣಿಕತೆಯನ್ನ ಸಿಇಒ ಮೆಚ್ಚಿಕೊಂಡಿದ್ದಾರೆ.

"ನೀವು ಯಾವಾಗ ನಿದ್ದೆ ಮಾಡುತ್ತೀರಿ ಎಂಬುದು ನನಗೆ ಮುಖ್ಯವಲ್ಲ. ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳ್ಳುತ್ತಿದೆಯೇ ಎಂಬುದಷ್ಟೇ ಮುಖ್ಯ. ಉತ್ತಮ ಫಲಿತಾಂಶ ನೀಡಿದರೆ ನಿಮ್ಮ ಸಮಯವನ್ನು ಯಾರೂ ಲೆಕ್ಕ ಹಾಕುವುದಿಲ್ಲ" ಎಂದು ನಿತಿನ್ ಅಭ್ಯರ್ಥಿಗೆ ಸ್ಪಷ್ಟಪಡಿಸಿದ್ದಾರೆ.

ಹಳೆಯ ಕಾರ್ಪೊರೇಟ್ ನಿಯಮಗಳು ಉದ್ಯೋಗಿ ಎಷ್ಟು ಗಂಟೆಗಳ ಕಾಲ ಕಚೇರಿಯ ಸೀಟಿನಲ್ಲಿ ಕುಳಿತಿದ್ದ ಎಂಬ ಸಮಯವನ್ನ ಲೆಕ್ಕ ಹಾಕುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ 'ಎಷ್ಟು ಸಮಯ ಕುಳಿತಿದ್ದೆ ಎಂಬುದಕ್ಕಿಂತ, ಏನು ಸಾಧಿಸಿದೆ ಹಾಗೂ ಎಷ್ಟು ಕೆಲಸ ಮಾಡಿದೆ?' ಎಂಬ ಫಲಿತಾಂಶಕ್ಕೆ ಆದ್ಯತೆ ನೀಡುತ್ತಿದೆ. ಜೆನ್ ಜೀ ಉದ್ಯೋಗಿಗಳು ತರುತ್ತಿರುವ ಈ ಬದಲಾವಣೆ ತಪ್ಪಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ವಿಶೇಷವೆಂದರೆ, ತನ್ನ ವಿಭಿನ್ನ ಆಲೋಚನೆ ಮತ್ತು ಆತ್ಮವಿಶ್ವಾಸದಿಂದ ಸಿಇಒ ಅವರ ಗಮನ ಸೆಳೆದ ಆ ಜೆನ್ ಜೀ ಅಭ್ಯರ್ಥಿಗೆ ಕೊನೆಗೂ ಉದ್ಯೋಗ ಸಿಕ್ಕಿದೆ. ನಿತಿನ್ ವರ್ಮಾ ಅವರ ಈ ಪೋಸ್ಟ್ ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

"ಉದ್ಯೋಗಿ ಎಷ್ಟು ಗಂಟೆ ಕೆಲಸ ಮಾಡುತ್ತಾನೆ ಎನ್ನುವುದಕ್ಕಿಂತ ಆತನ ಕೆಲಸದ ಗುಣಮಟ್ಟಕ್ಕೆ ಬೆಲೆ ಕೊಡುವ ಕಾರ್ಯಸಂಸ್ಕೃತಿ ಇಂದಿನ ಅಗತ್ಯ" ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+