IITB: ಕ್ಯಾಂಟೀನ್ ಗೋಡೆಯ 'ಸಸ್ಯಹಾರಿಗೆ ಮಾತ್ರ' ಅನುಮತಿ ಪೋಸ್ಟರ್ ತೆರವು
ಮುಂಬೈ, ಆಗಸ್ಟ್ 15: ಮಹಾರಾಷ್ಟ್ರ ರಾಜಧಾನಿ ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)ಯಲ್ಲಿ ಕಳೆದ ಎರಡು ವಾರಗಳಿಂದ ಸಸ್ಯಾಹಾರ ಮತ್ತು ಮಾಂಸಹಾರ ವಿಚಾರವಾಗಿ ಸೃಷ್ಟಿಯಾಗಿದ್ದ ಅಹಿತಕರ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಸಂಸ್ಥೆ ಆಡಳಿತ ಮಂಡಳಿ ಯಶಸ್ವಿಯಾಗಿದೆ.
ಸಂಸ್ಥೆ ಕ್ಯಾಂಟೀನ್ ಆವರಣದೊಳಗೆ ಕೆಲವು ವಿದ್ಯಾರ್ಥಿಗಳು 'ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ' ಎಂದು ಪೋಸ್ಟರ್ ಅನ್ನು ಹಾಕಿದ್ದರು. ಈ ವಿಚಾರಕ್ಕೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಅಲ್ಲದೇ ಪ್ರತಿ (ಕೌಂಟರ್) ಪೋಸ್ಟರ್‌ಗಳನ್ನು ಹಾಕಲು ಶುರು ಮಾಡಿದ್ದರು. ಈ ಸಂಬಂಧ ಎಚ್ಚೆತ್ತ ಐಐಟಿ ಬಿ ಆಡಳಿತ ಮಂಡಳಿ ಕ್ಯಾಂಪಸ್‌ನಲ್ಲಿನ ಎಲ್ಲ ವಿಧದ ಪೋಸ್ಟರ್ ಗಳನ್ನು ತೆರವುಗೊಳಿಸಿದರು.

ಕ್ಯಾಂಟೀನ್ ಪ್ರದೇಶದಲ್ಲಿ ಕೆಲವು ವಿದ್ಯಾರ್ಥಿಗಳು ಮೀಸಲಾತಿ (ಸಸ್ಯಹಾರಿ) ಸಂಬಂಧಿತ ಪೋಸ್ಟರ್‌ಗಳನ್ನು ಹಾಕಿದ್ದರು. ಇದಕ್ಕೆ ತೀವ್ರವಾಗಿ ವಿರೋಧಿಸಿದ ವಿದ್ಯಾರ್ಥಿ ಸಂಘಟನೆ ಸದಸ್ಯರು ಪ್ರತಿಯಾಗಿ ಕೌಂಟರ್ ಪೋಸ್ಟರ್ ಹಾಕಲು ಶುರು ಮಾಡಿದರು. ಈ ಕಾರಣದಿಂದ ಪರಿಸ್ಥಿತಿ ವಿಕೋಪ ತಿರುಗದಂತೆ ಐಐಟಿ ಮುಖ್ಯಸ್ಥರು ಪೋಸ್ಟರ್‌ಗಳ ತೆರವು ಕ್ರಮ ಜರುಗಿಸಿದರು.
'ಸಸ್ಯಾಹಾರಿ ಮಾತ್ರ' ಕ್ಯಾಂಟೀನ್‌ನಲ್ಲಿ ಅವಕಾಶ: ಪೋಸ್ಟರ್
ಸುಮಾರು 15 ದಿನಗಳ ಹಿಂದೆ ಜುಲೈ 30 ರಂದು ಕೆಲವು ವಿದ್ಯಾರ್ಥಿಗಳು ಕ್ಯಾಂಟೀನ್ ಗೋಡೆಗಳ ಮೇಲೆ 'ಸಸ್ಯಾಹಾರಿ ಮಾತ್ರ' ಕ್ಯಾಂಟೀನ್‌ನಲ್ಲಿ ಅವಕಾಶ ಎಂದು ಹೇಳಿದ್ದರು. ಮಾಂಸಾಹಾರ ಇಷ್ಟಪಡುವವರನ್ನು ಕ್ಯಾಂಟಿನ್‌ಗೆ ಬರದಂತೆ, ಜಾಗ ಖಾಲಿ ಮಾಡುವಂತೆ ಪೊಸ್ಟರ್ ಮೂಲಕ ಒತ್ತಾಯಿಸಿದ್ದರು.
ಇದೆಲ್ಲ ಬೆಳವಣಿಗೆ ನಂತರ ವಿದ್ಯಾರ್ಥಿ ಸಮೂಹದ ಪ್ರತಿನಿಧಿಯೊಬ್ಬರು, ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC), ಸಂಸ್ಥೆಯು ಅಧಿಕೃತ ಆಹಾರ ಪ್ರತ್ಯೇಕ ನೀತಿ ಹೊಂದಿಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿ ಸಮೂಹವು ಸಸ್ಯಹಾರಕ್ಕೆ ಅನುಮತಿಯ ಪೋಸ್ಟರ್‌ಗೆ ಕೌಂಟರ್ ಪೋಸ್ಟರ್ ಹಾಕಿತ್ತು. ಇದು ಊಟದ ಅಭ್ಯಾಸಗಳ ಜೊತೆಗೆ ಕ್ಯಾಂಪಸ್‌ನಲ್ಲಿ ಕೋಮು ಸೌಹಾರ್ದತೆ ಬೆಳೆಯಲು, ಜಾತಿ ವಿರೋಧಿ ಚಳವಳಿಯ ಪ್ರಮುಖ ಶಕ್ತಿಯಾಗುತ್ತದೆ. ಆಹಾರದ ಆದ್ಯತೆಗಳ ಮೇಲೆ ಸ್ವಯಂ-ಏಕಾಂತ ಮತ್ತು ಇತರರನ್ನು ಬಹಿಷ್ಕರಿಸುವುದು ಜಾತಿ ಪ್ರಾಬಲ್ಯವನ್ನು ಕಾಪಾಡಿಕೊಳ್ಳುವ ಒಂದು ಮಾರ್ಗವಾಗಿದ್ದು, ಇದು ಸರಿಯಲ್ಲ ಎಂದು ಸಂಸ್ಥೆ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.
ಟ್ವೀಟ್‌ನಲ್ಲಿ ಪೋಸ್ಟರ್ ತೆರವಿಗೆ ಆಗ್ರಹ
ಪಿಎಚ್‌ಡಿ ವಿದ್ಯಾರ್ಥಿ ಆದರ್ಶ್ ಪ್ರಿಯದರ್ಶಿ ಅವರು ಟ್ವೀಟ್ ಮಾಡಿ, ಐಐಟಿ ಬಾಂಬೆ ಆಡಳಿತವು 'ಸಸ್ಯಾಹಾರಿಗಳಿಗೆ ಮಾತ್ರ ಅನುಮತಿ ನೀಡುತ್ತಿದೆ, ಎಂಬ ಪೋಸ್ಟರ್‌ಗಳನ್ನು ತೆಗೆದುಹಾಕಲು ಒತ್ತಾಯಿಸಿದರು. ಹೋರಾಟ ನಮ್ಮ ಆಯ್ಕೆಯಲ್ಲ, ನಾವು ಇತಿಹಾಸಕ್ಕಾಗಿ ಹೋರಾಡುತ್ತೇವೆ ಮತ್ತು ವಿಭಿನ್ನ ಐತಿಹಾಸಿಕ ಘಟ್ಟದಲ್ಲಿ ನಮ್ಮ ಪ್ರಜ್ಞೆಯನ್ನು ಪ್ರತಿಪಾದಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದರು.
ಈ ಪೊಸ್ಟ್‌ಗೆ ವಿದ್ಯಾರ್ಥಿಯೊಬ್ಬರು ಟ್ಯಾಗ್‌ಲೈನ್ ಹಾಕಿ ಟ್ವೀಟ್ ಮಾಡಿದ್ದರು, ಸಾರ್ವಜನಿಕ ಸ್ಥಳದಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ನೀಡುವುದರಿಂದ ಹೋರಾಟ ಮುಂದುವರಿಯಬೇಕು ಎಂದು ತಿಳಸಿದ್ದರು. ಹೀಗೆ ಪೋಸ್ಟ್ ವಿರುದ್ಧವಾಗಿ ಅನೇಕ ಟ್ವೀಟ್ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.











Click it and Unblock the Notifications