IIT Madras Suicide: ಐಐಟಿ ಮದ್ರಾಸ್ ವಿದ್ಯಾರ್ಥಿಯ ಶವ ಪತ್ತೆ. ಆತ್ಮಹತ್ಯೆ ಶಂಕೆ
ಚೆನ್ನೈ, ಏಪ್ರಿಲ್ 21: ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯೊಬ್ಬರು ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಿಂದ ಸಂಭವಿಸಿದ ಸಾವು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಎರಡನೇ ವರ್ಷದ ವಿದ್ಯಾರ್ಥಿ ಕೆಮಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ನಂತರ ಪೊಲೀಸರು ಆತ್ಮಹತ್ಯೆಯನ್ನು ಖಚಿತಪಡಿಸಿದರೆ, ಇದು ಐಐಟಿ-ಮದ್ರಾಸ್‌ನಲ್ಲಿ ಈ ವರ್ಷ ನಡೆದ ನಾಲ್ಕನೇ ಪ್ರಕರಣವಾಗುತ್ತದೆ.

ಇದೇ ಏಪ್ರಿಲ್ ತಿಂಗಳ ಆರಂಭದಲ್ಲಿ ಐಐಟಿ ಮದ್ರಾಸ್‌ನ 32 ವರ್ಷದ ಪಿಎಚ್‌ಡಿ ವಿದ್ಯಾರ್ಥಿ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಪಶ್ಚಿಮ ಬಂಗಾಳದವರು. ಅದಕ್ಕೂ ಮುನ್ನ ಮಾರ್ಚ್‌ನಲ್ಲಿ ಇದೇ ಕ್ಯಾಂಪಸ್‌ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆಂಧ್ರಪ್ರದೇಶದ ನಿವಾಸಿಯಾಗಿದ್ದ ಆತನಿಗೆ 20 ವರ್ಷ ವಯಸ್ಸಾಗಿತ್ತು.
ಫೆಬ್ರವರಿಯಲ್ಲಿ, ಮಹಾರಾಷ್ಟ್ರದ ಸಂಶೋಧನಾ ವಿದ್ವಾಂಸರೊಬ್ಬರು ಐಐಟಿ-ಮದ್ರಾಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾರ್ಚ್‌ನಲ್ಲಿ ಐಐಟಿ-ಮದ್ರಾಸ್ ಕ್ಯಾಂಪಸ್‌ನಲ್ಲಿರುವ ಅಲಕಾನಂದ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿತ್ತು. ಮೃತರನ್ನು ಆಂಧ್ರಪ್ರದೇಶ ಮೂಲದ ವೈಪು ಪುಷ್ಪಕ್ ಶ್ರೀ ಸಾಯಿ ಎಂದು ಗುರುತಿಸಲಾಗಿತ್ತು. ಐಐಟಿಯಲ್ಲಿ ಒಂದು ತಿಂಗಳಲ್ಲಿ ಇದು ಎರಡನೇ ಆತ್ಮಹತ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಪುಷ್ಪಕ್ ನಿನ್ನೆಯ ತರಗತಿಗಳಿಗೆ ಮಧ್ಯಾಹ್ನ ಹಾಜರಾಗಲಿಲ್ಲ. ಆಗ ಆತನ ಸ್ನೇಹಿತರು ಅನುಮಾನಗೊಂಡು ಆತನ ಕೊಠಡಿಯನ್ನು ಪರಿಶೀಲಿಸಿದರು. ಕೋಣೆ ಒಳಗಿನಿಂದ ಲಾಕ್ ಆಗಿತ್ತು. ವಿದ್ಯಾರ್ಥಿಗಳು ಹೇಗೋ ಕೊಠಡಿ ತೆರೆದು ನೋಡಿದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾವು ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಮತ್ತು ಹೆಚ್ಚಿನ ವಿವರಗಳನ್ನು ತಿಳಿಸುತ್ತೇವೆ ಎಂದು ಅವರು ಹೇಳಿದ್ದರು. ಕೋತ್ತೂರುಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು.












Click it and Unblock the Notifications