Get Updates
Get notified of breaking news, exclusive insights, and must-see stories!

IIT JEE Exam results 2023: ಫಲಿತಾಂಶ ಬಿಡುಗಡೆ, ಹೈದರಾಬಾದ್ ವಿದ್ಯಾರ್ಥಿ ಪ್ರಥಮ, ಫಲಿತಾಂಶ ನೋಡುವುದು ಹೇಗೆ?.

ಬೆಂಗಳೂರು, ಜೂನ್ 18: ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (IIT) ಪ್ರವೇಶಾತಿಗಾಗಿ ಇತ್ತೀಚೆಗೆ ಜರುಗಿದ್ದ ಜಂಟಿ ಉನ್ನತ ಪರೀಕ್ಷೆ (JEE Advanced) ಫಲಿತಾಂಶ ಇಂದು ಭಾನುವಾರ ಪ್ರಕಟಗೊಂಡಿದೆ. ಹೈದರಾಬಾದ್ ವಿದ್ಯಾರ್ಥಿಯೊಬ್ಬರು ಈ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಜಂಟಿ ಉನ್ನತ ಪರೀಕ್ಷೆಯಲ್ಲಿ ಹೈದರಾಬಾದಿನ ಚಿದ್ವಿಲಾ ರೆಡ್ಡಿ ಅವರು ಮೊದಲ ಶ್ರೇಣಿಯಲ್ಲಿದ್ದಾರೆ. ಚಿದ್ವಿಲಾ ರೆಡ್ಡಿ ಅವರು, ಒಟ್ಟು 360 ಅಂಕಗಳ ಪೈಕಿ ಒಟ್ಟು 341 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿಯರಲ್ಲಿ ಐಐಟಿ ಹೈದರಾಬಾದ್ ವಲಯ ನಯಕಾಂತಿ ನಾಗಭವ್ಯಶ್ರೀ ಅವರು 298 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಅವರು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

IIT JEE Advanced 2023 Exam Result Released: Hydarabad Vavilala Chidvilas Reddy 1st Rank

ಇನ್ನೂ ಗುವಾಹಟಿಯಲ್ಲಿ ಸಹ ಐಐಟಿ ಪ್ರವೇಶಕ್ಕಾಗಿ ಪರೀಕ್ಷೆ ನಡೆದಿತ್ತು, ಇಲ್ಲಿ ಒಟ್ಟು 1.80 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅವರಲ್ಲಿ 43,773 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಒಟ್ಟಾರೆ ಜೆಇಇ ಪರೀಕ್ಷೆಯಲ್ಲಿ ಪರೀಕ್ಷೆ ಬರೆದವರ ಪೈಕಿ ಒಟ್ಟು 36,204 ಮಂದಿಗೆ ಪುರುಷ ಅಭ್ಯರ್ಥಿಗಳು ಮತ್ತು 7,509 ಮಂದಿ ಹೆಣ್ಣು ಮಕ್ಕಳು ಅರ್ಹತೆ ಪಡೆದವರಾಗಿದ್ದಾರೆ.

ಕಳೆದ ಜೂನ್ 04ರಂದು ದೇಶಾದ್ಯಂತ ಇರುವ ಐಐಟಿಗಳ ಪ್ರವೇಶಾತಿಗಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆ ನಡೆಸಲಾಗಿತ್ತು.

ಜೆಇಇ-ಅಡ್ವಾನ್ಸ್‌ಡ 2023 ಫಲಿತಾಂಶ ಪರಿಶೀಲನೆ ವಿಧಾನ

* ಮೊದಲು ಅಧಿಕೃತ JEE- ಅಡ್ವಾನ್ಸ್‌ಡ ಫಲಿತಾಂಶಗಳು 2023 ವೆಬ್‌ಸೈಟ್‌ಗೆ jeeadv.ac.in. ಗೆ ಭೇಟಿ ನೀಡಿ.

* ನಂತರ ಮುಖಪುಟದಲ್ಲಿ JEE 2023 ಫಲಿತಾಂಶದ ಲಿಂಕ್ ಅನ್ನು ಆಯ್ಕೆಮಾಡಿ.

* ನಿಮ್ಮ ಜನ್ಮ ದಿನಾಂಕ, ರೋಲ್ ಸಂಖ್ಯೆ ನಮೂದಿದ ಲಾಗಿನ್ ಆಗಿ.

* ಬಳಿಕ ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದ.

* ಅಲ್ಲಿ ಕಾಣುವ ಫಲಿತಾಂಶವನ್ನು ಕೂಡಲೇ ಡೌನ್‌ಲೋಡ್ ಮಾಡಿಕೊಂಡಿ ಬೇಕಿದ್ದಲ್ಲಿ ಪ್ರಿಂಟ್ ಔಟ್‌ ತೆಗೆದುಕೊಳ್ಳಿ.

IIT JEE Advanced 2023 Exam Result Released: Hydarabad Vavilala Chidvilas Reddy 1st Rank

ಜೂನ್ 19ಕ್ಕೆ ಕೌನ್ಸೆಲಿಂಗ್ ಆರಂಭ

ಐಐಟಿ-ಜೆಇಇ ಪರೀಕ್ಷೆ 2023 ರಲ್ಲಿ ಅರ್ಹತೆ ಪಡೆಯಲು ಸಮರ್ಥರಾದವರು ಐಐಟಿಗಳಿಗೆ ಪ್ರವೇಶಕ್ಕಾಗಿ ಜಂಟಿ ಸೀಟ್ ಅಲೊಕೇಶನ್ ಅಥಾರಿಟಿ (JoSAA) ಕೌನ್ಸೆಲಿಂಗ್ 2023 ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. JoSAA ಕೌನ್ಸೆಲಿಂಗ್ ಆರಂಭದ ತಾತ್ಕಾಲಿಕ ದಿನಾಂಕ ಜೂನ್ 19 ಎಂದು ತಿಳಿದು ಬಂದಿದೆ. ಆರ್ಕಿಟೆಕ್ಚರಲ್ ಆಪ್ಟಿಟ್ಯೂಡ್ ಟೆಸ್ಟ್ (AAT) 2023 ಜೂನ್ 21 ರಂದು ನಡೆಯುತ್ತದೆ, AAT 2023 ರ ಫಲಿತಾಂಶಗಳನ್ನುಇದೇ ಜೂನ್ 24 ರಂದು ಪ್ರಕಟಿಸಲಾಗುವುದು ಎಂದು ಐಐಟಿ ಸಂಸ್ಥೆಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+