IIFA 2022 ಸಮಾರಂಭಕ್ಕೆ ಕತ್ತೆಯ ಮೇಲೆ ಶಾಹಿದ್ ಕಪೂರ್ ಮತ್ತು ಫರ್ಹಾನ್ ಅಖ್ತರ್ ಸವಾರಿ
ನವದೆಹಲಿ ಜೂನ್ 13: ಅಬುಧಾಬಿಯ ಯಾಸ್ ಐಲ್ಯಾಂಡ್‌ನಲ್ಲಿ ಇತ್ತೀಚೆಗೆ IIFA 2022 ಕಾರ್ಯಕ್ರಮ ನಡೆದಿದ್ದು ತಿಳಿದಿರಬಹುದು. IIFA 2022 ಜೂನ್ 25 ರಂದು ರಾತ್ರಿ 8 ಗಂಟೆಗೆ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗಲಿದೆ. ಇದು ಪ್ರಸಾರವಾಗುವ ಕೆಲವು ದಿನಗಳ ಮೊದಲು, ಸಾಮಾಜಿಕ ಮಾಧ್ಯಮದಲ್ಲಿ ಸಣ್ಣ ವಿಡಿಯೊ ತುಣುಕುಗಳನ್ನು ಹಂಚಿಕೊಳ್ಳಲಾಗಿದೆ.
ಈ ಮಧ್ಯೆ, ಕಲರ್ಸ್ ಟಿವಿ ಪ್ರೋಮೋ ಬಿಡುಗಡೆಗೆ ಮಾಡಿದ್ದು, ಶಾಹಿದ್ ಕಪೂರ್ ಮತ್ತು ಫರ್ಹಾನ್ ಅಖ್ತರ್ ಕತ್ತೆಯ ಮೇಲೆ ಕುಳಿತು ತಮ್ಮ ವೇದಿಕೆಗೆ ಆಗಮಿಸಿದ್ದು ವಿಶೇಷವಾಗಿದೆ. ಸಾಮಾನ್ಯವಾಗಿ ದುಬಾರಿ ಕಾರು, ಬೈಕ್ ಮೂಲಕ ವೇದಿಕೆಗೆ ಗ್ರಾಂಡ್ ಎಂಟ್ರಿ ಕೊಡುವುದನ್ನ ನಾವು ಇಲ್ಲಿವರೆಗೂ ನೋಡಿದ್ದೇವೆ. ಜೊತೆಗೆ ಕೇಳಿದ್ದೇವೆ. ಆದರೆ ಕತ್ತೆ ಮೇಲೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದಿ ಇದೇ ಮೊದಲ ಬಾರಿಗೆ. ಈ ವೇಳೆ ಶಾಹಿದ್ ಮತ್ತು ಫರ್ಹಾನ್ ಸೂಟ್-ಬೂಟ್ ಧರಿಸಿರುವುದನ್ನು ಕಾಣಬಹುದು. ಶಾಹಿದ್ ಮತ್ತು ಫರ್ಹಾನ್ ಕತ್ತೆಯ ಮೇಲೆ ಕುಳಿತು IIFA 2022 ಅನ್ನು ಒಟ್ಟಿಗೆ ಪ್ರವೇಶಿಸುವುದನ್ನು ವಿಡಿಯೊದಲ್ಲಿ ಕಾಣಬಹುದು.
ವಿಡಿಯೋದಲ್ಲಿ ಶಾಹಿದ್ ಕಪೂರ್ ಮತ್ತು ಫರ್ಹಾನ್ ಅಖ್ತರ್ ಇಬ್ಬರೂ ಕತ್ತೆಗಳ ಮೇಲೆ ಸವಾರಿ ವೇಳೆ ಬೆಂಕಿಯ ಮೂಲಕ ಹಮ್ಮರ್, ಸ್ಪೋರ್ಟ್ಸ್ ಬೈಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದವರು ಈಗ ಎರಡು ಕತ್ತೆಗಳೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುತ್ತಾರೆ ಶಾಹಿದ್. ಇದಾದ ನಂತರ ಫರ್ಹಾನ್, "ಕತ್ತೆಗಳು ಅದೇ ರೀತಿ ಯೋಚಿಸುತ್ತಿರಬೇಕು. ಒಳ್ಳೆಯ ಸವಾರಿ." ಎನ್ನುತ್ತಾರೆ.

ಶಾಹಿದ್ ಮತ್ತು ಫರ್ಹಾನ್ ಅವರ ಈ ವಿಡಿಯೋ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಅಭಿಮಾನಿಯೊಬ್ಬರು ಈ ವಿಡಿಯೊಗೆ 'ಇದು ನನ್ನ ನೆಚ್ಚಿನ IIFA ಪ್ರಶಸ್ತಿಗಳಲ್ಲಿ ಒಂದಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಈ ವರ್ಷ IIFA ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ಯಾಸ್ ದ್ವೀಪದ ಯಾಸ್ ಬೇ ವಾಟರ್‌ಫ್ರಂಟ್‌ನಲ್ಲಿ ಜೂನ್ 2, 3 ಮತ್ತು 4 ರಂದು ನಡೆಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ನೇತೃತ್ವವನ್ನು ಸಲ್ಮಾನ್ ಖಾನ್, ರಿತೇಶ್ ದೇಶಮುಖ್ ಮತ್ತು ಮನೀಶ್ ಪಾಲ್ ವಹಿಸಿದ್ದರು. ಅಲ್ಲದೆ ಅಭಿಷೇಕ್ ಬಚ್ಚನ್, ಟೈಗರ್ ಶ್ರಾಫ್, ಅನನ್ಯ ಪಾಂಡೆ, ಸಾರಾ ಅಲಿ ಖಾನ್, ನೋರಾ ಫತೇಹಿ ಸಹ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಗಾಯಕರಾದ ತನಿಷ್ಕ್ ಬಾಗ್ಚಿ, ನೇಹಾ ಕಕ್ಕರ್, ಹನಿ ಸಿಂಗ್, ಗುರು ರಾಂಧವಾ, ಧ್ವನಿ ಭಾನುಶಾಲಿ, ಜಹ್ರಾ ಎಸ್ ಖಾನ್, ಅಸೀಸ್ ಕೌರ್ ಮತ್ತು ಐಶ್ ಕಿಂಗ್ ಸಹ ತಮ್ಮ ಪ್ರದರ್ಶನದಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ನಟಿ ಐಶ್ವರ್ಯಾ ರೈ ಬಚ್ಚನ್, ತಮನ್ನಾ ಭಾಟಿಯಾ, ಸಲ್ಮಾನ್ ಖಾನ್, ಲಾರಾ ದತ್ತಾ, ಬಾಬಿ ಡಿಯೋಲ್, ನರ್ಗಿಸ್ ಫಕ್ರಿ, ಊರ್ವಶಿ ರೌಟೇಲಾ, ನಿರ್ಮಾಪಕ ಬೋನಿ ಕಪೂರ್, ರಮೇಶ್ ತೌರಾನಿ ಸೇರಿದಂತೆ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications