ಮೀಸಲಾತಿ ನೀಡದಿದ್ದರೆ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ: ಮರಾಠ ನಾಯಕ
ಮುಂಬೈ, ಡಿಸೆಂಬರ್ 9: ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ-ಎನ್‌ಸಿಪಿ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ ಮರಾಠ ನಾಯಕ ಮನೋಜ್ ಜಾರಂಗೆ ಪಾಟೀಲ್ ಅವರು ಡಿಸೆಂಬರ್ 24, 2023 ರಂದು ಮರಾಠರಿಗೆ ಮೀಸಲಾತಿ ಸಿಗದಿದ್ದರೆ ಸಮುದಾಯವು ತಮ್ಮ ಶಕ್ತಿ ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ನಾಗಪುರ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗ ಮತ್ತು ಸರ್ಕಾರ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ನ ನಿರ್ಧಾರಕ್ಕಾಗಿ ಕಾಯುತ್ತಿರುವ ಈ ವೇಳೆ ಜಾರಂಜ್ ಪಾಟೀಲ್ ಈ ಎಚ್ಚರಿಕೆ ನೀಡಿದ್ದಾರೆ. ಕಳೆದ 70 ವರ್ಷಗಳಿಂದ ಮರಾಠರಿಗೆ ಮೀಸಲಾತಿ ನಿರಾಕರಿಸಲಾಗಿದೆ. ಆದರೆ ಈಗ ಮೀಸಲಾತಿ ಪಡೆಯುವ ಸಮಯ ಬಂದಿದೆ ಎಂದು ಪಾಟೀಲ್ ಹೇಳಿದ್ದಾರೆ.

ಡಿಸೆಂಬರ್ 24 ರೊಳಗೆ ಸರ್ಕಾರವು ನಿರ್ಧಾರ ತೆಗೆದುಕೊಳ್ಳಲು ವಿಫಲವಾದರೆ, ಡಿಸೆಂಬರ್ 25 ರಂದು ನಾವು ನಮ್ಮ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ. ನಾವು ನಮ್ಮ ಶಕ್ತಿಯನ್ನು ತೋರಿಸುತ್ತೇವೆ. ಆದರೂ ಸರ್ಕಾರ ಹಾಗೂ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಆಶ್ವಾಸನೆ ಮೇಲೆ ನಂಬಿಕೆ ಇದೆ ಎಂದು ಜಾರಂಗೆ ಪಾಟೀಲ್ ಹೇಳಿದ್ದಾರೆ.
ಡಿಸೆಂಬರ್ 24 ರೊಳಗೆ ಮರಾಠರಿಗೆ ಮೀಸಲಾತಿ ಸಿಗುತ್ತದೆ ಎಂದು ನನಗೆ 100 ಪ್ರತಿಶತ ಖಚಿತವಾಗಿದೆ. ನಾವು ಬೆಳವಣಿಗೆಗಳ ಮೇಲೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸರ್ಕಾರ ನೇಮಿಸಿದ ಸಮಿತಿಯು ಹೆಚ್ಚಿನ ಸಂಖ್ಯೆಯಲ್ಲಿ ಕುಂಬಿ ಜಾತಿಯ ದಾಖಲೆಗಳನ್ನು ಕಂಡುಹಿಡಿದಿದೆ ಮತ್ತು ಮರಾಠರಿಗೆ ಮೀಸಲಾತಿಗಾಗಿ ಕಾನೂನು ಅಗತ್ಯವಿದೆ ಎಂದು ಅವರು ಹೇಳಿದರು.
ಹಿಂದೆ ಜಾರಂಗೆ ಪಾಟೀಲ್ ಅವರು ರಾಜ್ಯದ ಜಲ್ನಾ ಜಿಲ್ಲೆಯಲ್ಲಿ ಎರಡು ಸುತ್ತಿನ ಉಪವಾಸ ಸತ್ಯಾಗ್ರಹ ನಡೆಸಿ, ಮರಾಠರಿಗೆ ಮೀಸಲಾತಿ ಸಿಗಲಿದೆ ಎಂದು ಸರ್ಕಾರ ಭರವಸೆ ನೀಡಿದ ನಂತರವೇ ಆಮರಣಾಂತ ಉಪವಾಸ ಹಿಂಪಡೆದಿದ್ದಾರೆ.












Click it and Unblock the Notifications