ಐಬಿಪಿಎಸ್ ಆರ್‌ಆರ್‌ಬಿ PO 2022ರ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?
ನವದೆಹಲಿ, ಅಕ್ಟೋಬರ್ 18: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) IBPS RRB PO ಫಲಿತಾಂಶ 2022 ಅನ್ನು ಅಕ್ಟೋಬರ್ 18ರಂದು ಅಧಿಕೃತ ವೆಬ್‌ಸೈಟ್-- ibps.in ನಲ್ಲಿ ಘೋಷಿಸಲಾಗಿದೆ.
ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಆಫೀಸರ್ ಶ್ರೇಣಿ I ಮುಖ್ಯ ಪರೀಕ್ಷೆಯ ಫಲಿತಾಂಶಗಳು, ಆಫೀಸರ್ ಶ್ರೇಣಿ II ಮತ್ತು III ಏಕ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಮಂಗಳವಾರ ಫಲಿತಾಂಶದ ಸ್ಥಿತಿಯನ್ನು ಮಾತ್ರ ಹಂಚಿಕೊಳ್ಳಲಾಗುವುದು ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. IBPS RRB PO 2022 ಸ್ಕೋರ್‌ಕಾರ್ಡ್‌ಗಳನ್ನು ಸಂಸ್ಥೆಯು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡುತ್ತದೆ ಎಂದು ತಿಳಿಸಲಾಗಿದೆ.

ಈ ಫಲಿತಾಂಶದ ಸ್ಥಿತಿ ಪರೀಕ್ಷಿಸುವುದು ಹೇಗೆ?
* ibps.in ನಲ್ಲಿ IBPS ನ ಅಧಿಕೃತ ಸೈಟ್‌ಗೆ ಭೇಟಿ ನೀಡಿ
* ಮುಖಪುಟದಲ್ಲಿ ಲಭ್ಯವಿರುವ IBPS RRB PO ಫಲಿತಾಂಶ 2022 ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸು(Submit) ಬಟನ್ ಕ್ಲಿಕ್ ಮಾಡಿರಿ
* ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ತೋರಿಸಲಾಗುತ್ತದೆ
* ಈ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು
* ಮುಂದಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಸೇವ್ ಮಾಡಿಕೊಳ್ಳಬಹುದು ಹಾಗೂ ಪ್ರಿಂಟ್ ತೆಗೆದುಕೊಳ್ಳಬಹುದು.












Click it and Unblock the Notifications