ಸಿಂಪಲ್, ಅದ್ಧೂರಿ ಮದುವೆಗಳಿಂದ ವೈರಲ್ ಆದ ಐಎಎಸ್-ಐಪಿಎಸ್ ದಂಪತಿಗಳು
ಐಎಎಸ್ ಹಾಗೂ ಐಪಿಎಸ್ ಹುದ್ದೆಗಳು ಅಂದ್ರೆ ಗೌರವ, ಘನತೆಗೆ ಹೆಸರುವಾಸಿ. ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧಿಕಾರಿಗಳ ಪೈಕಿ ಕೆಲವರು ಮಾತ್ರವೇ ತಮ್ಮ ಆಡಳಿತ, ಕಾರ್ಯವೈಖರಿ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಜನಪ್ರಿಯತೆ ಪಡೆಯುತ್ತಾರೆ. ಆದರೆ ಇಂದಿನ ಅಧಿಕಾರಿಗಳು ತಮ್ಮ ಸೇವೆ ಮತ್ತು ಆಡಳಿತ ಕೌಶಲ್ಯಕ್ಕೆ ಮಾತ್ರ ಹೆಸರುವಾಸಿಯಲ್ಲ. ಈ ಅಧಿಕಾರಿಗಳು ತಮ್ಮ ವೈಯಕ್ತಿಕ ಜೀವನ ಮತ್ತು ವಿವಾಹ ಶೈಲಿಯಿಂದಲೂ ಒಂದು ರೀತಿ ಸೆಲೆಬ್ರಿಟಿಗಳಾಗಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಮಿಂಚುತ್ತಿದ್ದಾರೆ. ಇವರು ಐಎಎಸ್-ಐಪಿಎಸ್ ದಂಪತಿ ಎಂದೇ ಗಮನ ಸೆಳೆಯುತ್ತಿದ್ದಾರೆ.
ಈ ಪೈಕಿ ಕೆಲವರು ಚಂಬಲ್ ನದಿಯ ದಡದಲ್ಲಿ ನಡೆದ ಅದ್ಧೂರಿ ವಿವಾಹದಿಂದ ಹಿಡಿದು, ಕೇವಲ 2,000 ರೂಪಾಯಿ ವೆಚ್ಚದಲ್ಲಿ ನ್ಯಾಯಾಲಯದಲ್ಲಿ ನಡೆದ ವಿವಾಹದಿಂದ ಸುದ್ದಿಯಾದವರು. ಈ ಅಧಿಕಾರಿಗಳ ಪ್ರೇಮಕಥೆಗಳು ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕೆಲವು ಪ್ರಸಿದ್ಧ ಐಎಎಸ್-ಐಪಿಎಸ್ ಜೋಡಿಗಳ ಪ್ರೇಮಕಥೆಗಳು ಮತ್ತು ಅವರ ವಿವಾಹಗಳು ಹೀಗಿದೆ ನೋಡಿ..

ಐಎಎಸ್ ಚಾರು & ಐಪಿಎಸ್ ಸುಜಿತ್ ಶಂಕರ್
ಕೋಟಾ ಮೂಲದ ಐಎಎಸ್ ಅಧಿಕಾರಿ ಚಾರು ಮತ್ತು ಐಪಿಎಸ್ ಅಧಿಕಾರಿ ಸುಜಿತ್ ಶಂಕರ್ ಅವರ ವಿವಾಹವು ರಾಜಮನೆತನದ ವೈಭವಕ್ಕೆ ಸಾಕ್ಷಿಯಾಯಿತು. ಈ ದಂಪತಿ ತಮ್ಮ ಮದುವೆಗೆ ಕೋಟಾದ ಪ್ರಸಿದ್ಧ ಚಂಬಲ್ ನದಿ ದಂಡೆಯನ್ನು ಆರಿಸಿಕೊಂಡಿತು. ಅಲ್ಲಿನ ಅಲಂಕಾರ, ಅದ್ಭುತ ಬೆಳಕು, ಸಾಂಪ್ರದಾಯಿಕ ಆಚರಣೆಗಳ ನಡುವೆ, ವರ ಕುದುರೆಯ ಮೇಲೆ ಬಂದರೆ, ವಧು ಕೆಂಪು ಸೀರೆಯಲ್ಲಿ ಕಾಣಿಸಿಕೊಂಡರು. ಇದು ಯಾವುದೇ ಸಿನಿಮಾದ ದೃಶ್ಯಕ್ಕಿಂತ ಕಡಿಮೆ ಇರಲಿಲ್ಲ. ಇವರ ಮದುವೆಯ ಫೋಟೋಗಳು ಇಂಟರ್ನೆಟ್‌ನಲ್ಲಿ ಹರಿದಾಡಿ "ಪರ್ಫೆಕ್ಟ್ ಡೆಸ್ಟಿನೇಶನ್ ವೆಡ್ಡಿಂಗ್" ಎಂದು ಹೆಸರುವಾಸಿಯಾಯಿತು.
ಐಎಎಸ್ ತುಷಾರ್ ಸಿಂಗ್ಲಾ & ಐಪಿಎಸ್ ನವಜೋತ್ ಸಿಮಿ
2015 ಬ್ಯಾಚ್ ಐಎಎಸ್ ಅಧಿಕಾರಿ ತುಷಾರ್ ಸಿಂಗ್ಲಾ ಮತ್ತು 2017 ಬ್ಯಾಚ್‌ನ ಐಪಿಎಸ್ ನವಜೋತ್ ಸಿಮಿ ಅವರ ಮದುವೆ ಕಥೆ ನಿಜವಾಗಿಯೂ ಒಂದು ಸಿನಿಮಾ ರೀತಿಯೇ ಇತ್ತು. ಅವರು ತಮ್ಮ ತರಬೇತಿ ಮತ್ತು ವೃತ್ತಿಪರ ವಲಯದಲ್ಲೇ ಮೊದಲ ಭೇಟಿಯಾದರು. ಸುಮಾರು ಒಂದು ವರ್ಷ ಡೇಟಿಂಗ್ ಮಾಡಿದ ನಂತರ, 2020ರ ಫೆಬ್ರವರಿ 14ರ ಪ್ರೇಮಿಗಳ ದಿನದಂದೇ ಮದುವೆಯಾಗುವ ಮೂಲಕ ಗಮನ ಸೆಳೆದರು. ಇವರ ಸರಳತೆ ಮತ್ತು ಪ್ರೇಮಕಥೆಯು ವ್ಯಾಪಕವಾಗಿ ಮೆಚ್ಚುಗೆ ಪಡೆದುಕೊಂಡಿತು.

ಐಎಎಸ್ ಯುವರಾಜ್ ಮರ್ಮತ್ & ಐಪಿಎಸ್ ಪಿ.ಮೋನಿಕಾ
ಐಎಎಸ್ ಯುವರಾಜ್ ಮರ್ಮತ್ ಮತ್ತು ಐಪಿಎಸ್ ಪಿ.ಮೋನಿಕಾ ಅವರು ಈ ಆಡಂಬರದ ಜಗತ್ತಿನಲ್ಲಿ ಕೇವಲ ₹2,000 ಖರ್ಚಿನಲ್ಲಿ ಮದುವೆಯಾಗುವ ಮೂಲಕ ಐಎಎಸ್ ಯುವರಾಜ್ ಮರ್ಮತ್ ಮತ್ತು ಐಪಿಎಸ್ ಪಿ. ಮೋನಿಕಾ ಸರಳತೆಯಿಂದ ದೇಶವ್ಯಾಪಿ ಸುದ್ದಿಯಾದರು. ಇಬ್ಬರೂ ದೊಡ್ಡ ಹುದ್ದೆಯಲ್ಲೇ ಇದ್ದರೂ 2023ರಲ್ಲಿ ಯಾವುದೇ ಭವ್ಯ ಸಮಾರಂಭದ ಬದಲು ನ್ಯಾಯಾಲಯದ ವಿವಾಹವನ್ನು ಆರಿಸಿಕೊಂಡರು. ಮದುವೆಯ ಒಟ್ಟು ವೆಚ್ಚ ಸುಮಾರು 2,000 ರೂಪಾಯಿಗಳಾಗಿತ್ತು. ಈ ಆಡಂಬರವಿಲ್ಲದ ವಿವಾಹವು ಸಮಾಜಕ್ಕೆ ಪ್ರಬಲ ಸಂದೇಶವನ್ನು ರವಾನಿಸಿತು. ಇಲ್ಲಿ ಮದುವೆ ಪ್ರದರ್ಶನಕ್ಕಿಂತ ಇಬ್ಬರೂ ವ್ಯಕ್ತಿಗಳ ಏಕತೆಗೆ ಆದ್ಯತೆ ನೀಡಲಾಯಿತು.
ಐಎಎಸ್ ಅಪರಾಜಿತಾ ಮತ್ತು ಐಪಿಎಸ್ ದೇವೇಂದ್ರ ಯಾದವ್
ವರದಕ್ಷಿಣೆಯಾಗಿ ಕೇವಲ ಒಂದು ರೂಪಾಯಿ ಮೂಲಕ ಸುದ್ದಿಯಾಗಿದ್ದು ಐಎಎಸ್ ಅಪರಾಜಿತಾ ಮತ್ತು ಐಪಿಎಸ್ ದೇವೇಂದ್ರ ಯಾದವ್ ದಂಪತಿ. ಜನವರಿ 2024ರಲ್ಲಿ ರಾಜಸ್ಥಾನದ ಚುರುವಿನಲ್ಲಿ ನಡೆದ ಐಎಎಸ್ ಅಪರಾಜಿತಾ ಮತ್ತು ಐಪಿಎಸ್ ದೇವೇಂದ್ರ ಯಾದವ್ ಅವರ ವಿವಾಹವು ಎರಡು ಕಾರಣಗಳಿಗಾಗಿ ಜನರ ಹುಬ್ಬೇರಿಸಿತು. ದೇವೇಂದ್ರ ಯಾದವ್ ವರದಕ್ಷಿಣೆ ವ್ಯವಸ್ಥೆಯ ವಿರುದ್ಧ ಪ್ರಬಲ ಸಂದೇಶ ಕಳುಹಿಸಲು ಕೇವಲ ಒಂದು ರೂಪಾಯಿ ಮತ್ತು ತೆಂಗಿನಕಾಯಿ ಸ್ವೀಕರಿಸಿದರು. ದೇವೇಂದ್ರ ತಮ್ಮ ವಧುವನ್ನು ಹೆಲಿಕಾಪ್ಟರ್ ಮೂಲಕ ಕರೆದುಕೊಂಡು ಹೋದರು. ಆರತಕ್ಷತೆ ಕೂಡ ವಿಶೇಷವಾಗಿತ್ತು.
ಐಎಎಸ್ ಅಭಿನವ್ ಸಿವಾಚ್ ಮತ್ತು ಐಪಿಎಸ್ ಆಶ್ನಾ ಚೌಧರಿ
ಎಲ್‌ಬಿಎಸ್‌ಎನ್‌ಎಎಯಲ್ಲಿ ಪ್ರಾರಂಭವಾದ ಪ್ರೇಮಕಥೆ ಇತ್ತೀಚೆಗೆ ಸುದ್ದಿಯಲ್ಲಿರುವ ಈ ದಂಪತಿ 2022ರ ಬ್ಯಾಚ್‌ಗೆ ಸೇರಿದವರು. ಐಎಎಸ್ ಅಭಿನವ್ ಸಿವಾಚ್ ಮತ್ತು ಐಪಿಎಸ್ ಆಶ್ನಾ ಚೌಧರಿ ಮೊದಲು ಮಸ್ಸೂರಿಯ ಎಲ್‌ಬಿಎಸ್‌ಎನ್‌ಎಎಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಭೇಟಿಯಾದರು. ಅವರ ಸ್ನೇಹ ಪ್ರೀತಿಯಾಗಿ ತಿರುಗಿ, ನವೆಂಬರ್ 2025ರಲ್ಲಿ ವಿವಾಹವಾದರು. ಅವರ ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದವು.












Click it and Unblock the Notifications