ತಾಯ್ನಾಡಿಗೆ ಅಭಿ ಮರಳಲು ಕ್ಷಣಗಣನೆ, ದೇಶಾದ್ಯಂತ ಕಾತರ, ಹರ್ಷ

ವಾಘಾ, ಮಾರ್ಚ್‌ 01: ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅವರನ್ನು ಪಾಕಿಸ್ತಾನ ಮರಳಿಸುತ್ತಿದ್ದು, ವಾಘಾ ಗಡಿ ತಲುಪಿರುವ ಅವರು ಕೆಲವೇ ಕ್ಷಣಗಳಲ್ಲಿ ಭಾರತದ ಗಡಿ ಪ್ರವೇಶಿಸಲಿದ್ದಾರೆ.

ಬೆಳಿಗ್ಗೆ ಲಾಹೋರ್‌ನಿಂದ ಹೊರಟು ಮಧ್ಯಾಹ್ನ 4:20 ರ ವೇಳೆಗೆ ವಾಘಾ ಗಡಿ ತಲುಪಿದ ಅಭಿನಂದನ್ ಅವರನ್ನು ಬಹು ಸಮಯ ವೈದ್ಯಕೀಯ ತಪಾಸಣೆಗೆ ಒಳಪಡಿಲಾಗುತ್ತಿದೆ. ಆ ನಂತರ ಅವರನ್ನು ರೆಡ್‌ಕ್ರಾಸ್‌ಗೆ ವರ್ಗಾಯಿಸಲಾಗುತ್ತಿದೆ ಎನ್ನಲಾಗುತ್ತಿದೆ.

ವಾಘಾ ಗಡಿ ಹಾದು, ಅಟಾರಿ ಗಡಿ ಗಡಿ ಮೂಲಕ ಅಭಿನಂದನ್ ಅವರು ತಾಯ್ನಾಡಿಗೆ ಪ್ರವೇಶಿಸಲಿದ್ದಾರೆ. ಅಭಿನಂದನ್ ಅವರನ್ನು ಬರಮಾಡಿಕೊಳ್ಳಲು ವಾಯುಸೇನೆಯು ತಯಾರಾಗಿದ್ದು, ಗಡಿ ಭಾಗದಲ್ಲಿ ಸಂಪೂರ್ಣ ಬಿಗಿ ಭದ್ರತೆ ನಿಯೋಜಿಸಲಾಗಿದೆ.

IAF Wing commander Abhinandan all set to release

ತಾಯ್ನಾಡಿಗೆ ಮರಳಲಿರುವ ಅಭಿನಂದನ್ ಅವರನ್ನು ವೈದ್ಯಕೀಯ ತಪಾಸಣೆ ಸೇರಿದಂತೆ ಇನ್ನುಳಿದ ತಪಾಸಣೆಗೆ ಭಾರತೀಯ ಸೇನೆಯು ತೆಗೆದುಕೊಂಡು ಹೋಗಲಿದೆ.

ಅಭಿನಂದನ್ ಅವರು ಫೆಬ್ರವರಿ 27 ರಂದು ಪಾಕ್‌ ಸೇನೆಯ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಅಂದಿನಿಂದಲೂ ಅವರ ಸುರಕ್ಷಿತ ವಾಪಸ್ಸಾತಿಗೆ ಭಾರತದಾದ್ಯಂತ ಜನರು ಪ್ರಾರ್ಥಿಸಿದ್ದರು. ಅವರನ್ನು ಸ್ವಾಗತಿಸಲೆಂದು ಗಡಿಯಲ್ಲಿ ಲಕ್ಷಾಂತರ ಮಂದಿ ಬೆಳಿಗಿನಿಂದಲೂ ಕಾಯುತ್ತಿದ್ದಾರೆ. ಹಾಡಿ-ಕುಣಿಯುತ್ತಿರುವ ಅವರ ಖುಷಿಗೆ ಪಾರವೇ ಇರದಂತಾಗಿದೆ.

ಭಾರತದ ಗಡಿ ಪ್ರವೇಶಿಸಿ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಯತ್ನಿಸುವ ಸಮಯದಲ್ಲಿ ಅಭಿನಂದನ್ ಅವರ ವಿಮಾನವು ಉರುಳಿತು ಅವರ ವಿಮಾನದಿಂದ ಹೊರಬಿದ್ದರು, ಅವರ ಪ್ಯಾರಾಚೂಟ್ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿ ಲ್ಯಾಂಡ್ ಆಯಿತು. ಆಗ ಅವರನ್ನು ಪಾಕಿಸ್ತಾನ ಸೇನೆ ವಶಪಡಿಸಿಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+