Flight Crash: ತೆಲಂಗಾಣದಲ್ಲಿ ತರಬೇತಿ ವಿಮಾನ ಅಪಘಾತ, ಸಾವು-ನೋವು

ನವದೆಹಲಿ, ಡಿಸೆಂಬರ್ 04: ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಕ್ರಾಶ್ ಆಗಿ ಪತನಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಅಪಘಾತದ ಕಾರಣವೇನೆಂದು ತಿಳಿದುಕೊಳ್ಳು ತನಿಖೆಗೆ ಆದೇಶಿಸಲಾಗಿದೆ.

ಅಪಘಾತ ಸಂಭವಿಸುವ ಮೊದಲು ಈ ವಿಮಾನವು ಎಂದಿನಂತೆ ತರಬೇತಿಗಾಗಿ ಹೈದರಾಬಾದ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ (AFA) ತೆರಳಿತ್ತು. ವಿಮಾನ ಪತನಗೊಂಡಾಗ ಒಬ್ಬ ತರಬೇತುದಾರ ಮತ್ತು ತರಬೇತಿ ಪೈಲಟ್ ವಿಮಾನದೊಳಗೆ ಇದ್ದರು. ಘಟನೆಯಲ್ಲಿ ಅವರಿಬ್ಬರು ಮೃತಪಟ್ಟಿದ್ದಾರೆ.

IAF Trainer Aircraft Crashes in Telangana Medak District, 2 Pilot Dies

ಹೈದರಾಬಾದ್‌ನ ಎಎಫ್‌ಎ ತರಬೇತಿಯ ಸಮಯದಲ್ಲಿ ಪಿಲಾಟಸ್ ಪಿಸಿ 7 ಎಂಕೆ II ವಿಮಾನವು ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮಾರಣಾಂತಿಕವಾಗಿ ಗಾಯಗೊಂಡಿದ್ದರು ಎಂದು ಐಎಎಫ್ ಮಾಹಿತಿ ನೀಡಿದೆ. ಈ ವಿಷಯವನ್ನು ಭಾರತೀಯ ವಾಯುಪಡೆಯು X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಒಂದ ಎಂಜಿನ್ ಹೊಂದಿದ್ದ ವಿಮಾನ

ಪಿಲಾಟಸ್ PC 7 Mk II ಈ ವಿಮಾನವು ಏಕ-ಎಂಜಿನ್ ಹೊಂದಿದ್ದ ವಿಮಾನವಾಗಿದೆ. ಐಎಎಫ್ ಪೈಲಟ್‌ಗಳು ಮೂಲಭೂತ ತರಬೇತಿ ಪಡೆದಿದ್ದು, ಸದ್ಯ ಅವರಿದ್ದ ವಿಮಾನವು ಅಪಘಾತವಾಗಿದೆ. ಘಟನೆಗೆ ಕಾರಣ ಏನೆಂದು ಪತ್ತೆ ಮಾಡಲು ವಾಯುಪಡೆಗೆ ಆದೇಶಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೃತರಾದ ಇಬ್ಬರು ಪೈಲಟ್‌ಗಳ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖವಾಗಿದೆ. ಇಬ್ಬರು ಪೈಲಟ್‌ಗಳು ಪ್ರಾಣ ಕಳೆದು ಕೊಂಡಿರುವುದು ತುಂಬಾ ದುಃಖಕರವಾಗಿದೆ. ಈ ದುರಂತ ಸಮಯದಲ್ಲಿ, ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+