ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೈಲೆಟ್ ಅಭಿನಂದನ್ ಬಿಡುಗಡೆ ಘೋಷಣೆ : ಯಾರು, ಏನು ಹೇಳಿದರು?

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಮಾಡಲಾಗುತ್ತದೆ ಎಂದು ಪಾಕಿಸ್ತಾನ ಘೋಷಣೆ ಮಾಡಿದೆ. ಭಾರತೀಯ ವಾಯುಪಡೆಯ ಪೈಲೆಟ್ ಅಭಿನಂದನ್ ಬುಧವಾರದಿಂದ ಪಾಕಿಸ್ತಾನದ ವಶದಲ್ಲಿದ್ದಾರೆ.

ಗುರುವಾರ ಪಾಕಿಸ್ತಾನದ ಸಂಸತ್‌ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರು ಮಾರ್ಚ್ 1ರ ಶುಕ್ರವಾರ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ ಭಾರತ ಅಭಿನಂದನ್ ಬಿಡಗಡೆ ಮಾಡಬೇಕು ಎಂದು ಭಾರಿ ಒತ್ತಡ ಹೇರಿತ್ತು.

ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆ

ಅಭಿನಂದನ್ ಬಿಡುಗಡೆ ಸುದ್ದಿ ಹೊರಬೀಳುತ್ತಿದ್ದಂತೆ ಭಾರತದಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ದೇಶದ ಜನರೆಲ್ಲರೂ ಒಟ್ಟಾಗಿ ಬುಧವಾರದಿಂದ ಅಭಿನಂದನ್ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸುತ್ತಿದ್ದರು.

ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಅಭಿನಂದನ್ ಬಿಡುಗಡೆ ಮಾಡುವ ಪಾಕಿಸ್ತಾನದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಪಾಕಿಸ್ತಾನದ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರ ವಾಘಾ ಗಡಿ ಮೂಲಕ ಅಭಿನಂದನ್ ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ.

ಅಭಿನಂದನ್ ಅವರ ತಂದೆಯಿಂದ ಮನಮಿಡಿಯುವ ಮಾತುಗಳುಅಭಿನಂದನ್ ಅವರ ತಂದೆಯಿಂದ ಮನಮಿಡಿಯುವ ಮಾತುಗಳು

ಉತ್ತಮವಾದ ನಡೆ

ಉತ್ತಮವಾದ ನಡೆ

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಅಭಿನಂದನ್ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ನನಗೆ ಬಹಳ ಸಂತೋಷವಾಗಿದೆ. ಬೇಗ ಬಿಡುಗಡೆಗೊಳಿಸುವಂತೆ ಬೇಡಿಕೆ ಇಟ್ಟಿದ್ದೆ. ಇದೊಂದು ಉತ್ತಮ ನಡೆ' ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ಬೆಸ್ಟ್ ಶಾಟ್

ಥ್ಯಾಂಕ್ಯೂ ಇಮ್ರಾನ್ ಖಾನ್, ಇದು ನಿಮ್ಮ ಕೆರಿಯರ್‌ನ ಬೆಸ್ಟ್ ಶಾಟ್, ನಿಮ್ಮ ಉತ್ತಮ ನಿರ್ಧಾರದಿಂದ ಸಂತಸವಾಗಿದೆ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಟ್ವೀಟ್ ಮಾಡಿದ್ದಾರೆ.

ಮನೆ ಮಗ ಬರಲಿ ಎಂದು ಕಾಯುತ್ತಿದ್ದೆವು

ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಟ್ವೀಟ್ ಮಾಡಿದ್ದು, 'ಪಾಕಿಸ್ತಾನದಿಂದ ಉತ್ತಮ ಸುದ್ದಿ ಸಿಕ್ಕಿದೆ. ಅಭಿನಂದನ್ ಬಿಡುಗಡೆಗೊಳ್ಳುತ್ತಿದ್ದಾರೆ. ನಮ್ಮ ಮನೆ ಮಗ ಬೇಗ ಬರಲಿ ಎಂದು ಕಾಯುತ್ತಿದ್ದೆವು ಎಂದು ಹೇಳಿದ್ದಾರೆ.

ಇಡೀ ದೇಶಕ್ಕೆ ಅಭಿನಂದನೆ

ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಇಡೀ ದೇಶಕ್ಕೆ 'ಅಭಿನಂದನೆ' ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪೈಲೆಟ್ ಬಿಡುಗಡೆಗೆ ಪ್ರಾರ್ಥಿಸಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮ ಹೆಮ್ಮೆಯ ಸೈನಿಕ ವಾಪಸ್ ಬರುತ್ತಿದ್ದಾನೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದು, 'ಪಾಕಿಸ್ತಾನ ಅಭಿನಂದನ್ ಬಿಡುಗಡೆ ಮಾಡುವುದು ಉತ್ತಮ ನಡೆ. ನಮ್ಮ ಹೆಮ್ಮೆಯ ಸೈನಿಕ ವಾಪಸ್ ಆಗುತ್ತಿದ್ದಾನೆ ಎಂಬುದು ಸಂತಸ ತಂದಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಇಮ್ರಾನ್ ಖಾನ್ ತಮ್ಮ ಹೇಳಿಕೆಗೆ ಬದ್ಧರಾಗಿರುತ್ತಾರೆ

ಇಡೀ ದೇಶಕ್ಕೆ ಸಂತಸದ ಸುದ್ದಿ. ಇಮ್ರಾನ್ ಖಾನ್ ತಮ್ಮ ಹೇಳಿಕೆಗೆ ಬದ್ಧರಾಗಿರುತ್ತಾರೆ ಎಂಬ ಭರವಸೆ ಇದೆ. ಉತ್ತಮ ರಾಜಕೀಯ ನಾಯಕರಂತೆ ಅವರು ವರ್ತಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಹೇಳಿದ್ದಾರೆ.

English summary
Pakistan announced that Indian Air Force pilot Abhinandan Varthaman will be released on March 1, 2019. Abhinandan was captured by Pakistan army on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X