Get Updates
Get notified of breaking news, exclusive insights, and must-see stories!

ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾ ಮಾಡಿದ 'ಶಪಥ'

ನವದೆಹಲಿ, ಮಾರ್ಚ್ 6: ನನ್ನ ಪತ್ನಿಯನ್ನು ಸುರಕ್ಷಿತವಾಗಿಡಿ ಎಂದು ಇತ್ತೀಚೆಗಷ್ಟೇ ಭಾವನಾತ್ಮಕ ಪತ್ರ ಬರೆದಿದ್ದ ಪ್ರಿಯಾಂಕ ಗಾಂಧಿ ಪತಿ, ರಾಬರ್ಟ್ ವಾದ್ರಾ, ಈಗ ದೇಶದ ಜನತೆಗೆ ವಚನವೊಂದನ್ನು ನೀಡಿದ್ದಾರೆ.

ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸುತ್ತಿರುವ ವಾದ್ರಾ, ಈ ದೇಶದಲ್ಲಿ ಅದೆಷ್ಟೋ ವಾಣಿಜ್ಯೋದ್ಯಮಿಗಳು ಲೂಟಿ ಮಾಡಿ ಪಲಾಯನಗೈದಿದ್ದಾರೆಂದು ಪರೋಕ್ಷವಾಗಿ ನೀರವ್ ಮೋದಿ, ಮಲ್ಯ ಅವರ ಹೆಸರನ್ನು ಎಳೆದು ತಂದಿದ್ದಾರೆ.

ಅವರನ್ನು ದೇಶಕ್ಕೆ ವಾಪಸ್ ಕರೆತರುವ ಕೆಲಸ ಎಲ್ಲಿಯ ತನಕ ಬಂತು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿರುವ ವಾದ್ರಾ, ನಾನೆಂದೂ ಈ ದೇಶವನ್ನು ಬಿಟ್ಟು ಹೋಗುವುದಿಲ್ಲ. ಜೊತೆಗೆ, ನನ್ನ ಹೆಸರು ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವಷ್ಟೇ ರಾಜಕೀಯಕ್ಕೆ ಬರುತ್ತೇನೆ. ಇದು ಈ ದೇಶಕ್ಕೆ ನಾನು ನೀಡುತ್ತಿರುವ ವಚನ ಎಂದು ವಾದ್ರಾ ಹೇಳಿದ್ದಾರೆ.

I will not leave or in be active politics until my name clear in ED: Robert Vadra

ರಾಬರ್ಟ್ ವಾದ್ರಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಾದ್ರಾ, ರಾಜಕೀಯ ಪ್ರವೇಶಕ್ಕೆ ಸಮಯ ಇನ್ನು ಕೂಡಿ ಬಂದಿಲ್ಲ. ನನಗೆ ಯಾವುದೇ ಆತುರವಿಲ್ಲ, ನಾನು ಮೊದಲು ಅರ್ಹತೆ ಪಡೆದುಕೊಳ್ಳಬೇಕಿದೆ ಎಂದು ಹೇಳಿದ್ದರು.

ಬೇನಾಮಿ ವ್ಯವಹಾರ ಮೂಲಕ ರಾಬರ್ಟ್ ವಾದ್ರಾ ವಿದೇಶಗಳಲ್ಲಿ ಖರೀದಿಸಿದ ಆಸ್ತಿಗಳ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನ್ನ ಗಮನವನ್ನು ಕೇಂದ್ರೀಕರಿಸಿದೆ. ಲಂಡನ್ ನಲ್ಲಿನ ಆಸ್ತಿಯ ಹೊರತಾಗಿ ದುಬೈನಲ್ಲಿನ ವಿಲ್ಲಾ ಬಗ್ಗೆ ಕೂಡ ತನಿಖೆ ಆರಂಭಿಸಿತ್ತು.

ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಅಂದರೆ 2014ರಲ್ಲಿ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಏಕಾಏಕಿ ತಮ್ಮ ಒಡೆತನದಲ್ಲಿದ್ದ 6 ಕಂಪನಿಗಳ ಬಾಗಿಲು ಮುಚ್ಚಿದ್ದರು.ಲೈಫ್ ಲೈನ್ ಅಗ್ರೊಟೆಕ್, ಬೆಸ್ಟ್ ಸೀಜನ್ ಅಗ್ರೊ, ಗ್ರೀನ್ ವೇವ್ ಅಗ್ರೊ, ರೈಟ್ ಲೈನ್ ಅಗ್ರೊ, ಫ್ಯೂಚರ್ ಇನ್ಪ್ರಾ ಅಗ್ರೊ ಹಾಗೂ ಪ್ರೈಮ್ ಟೈಮ್ ಅಗ್ರೊ ಎನ್ನುವ ಆರು ಕಂಪನಿಗಳಿಗೆ ಬೀಗ ಹಾಕಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+